ಲವ್ ಮ್ಯಾರೇಜ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ನಿಮ್ಮ ಕೈಯಲ್ಲಿರುವ ರೇಖೆ. ಯಾವುದು ಗೊತ್ತೇ? ಏನು ಹೇಳುತ್ತದೆ ಗೊತ್ತೇ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಮನುಷ್ಯನ ಕೈಗಳಲ್ಲಿ ಇರುವ ರೇಖೆಗಳು ಸಹ ಒಬ್ಬ ಮನುಷ್ಯನ ಜೀವನ ಹೇಗಿರುತ್ತದೆ, ಆತನ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತದೆ. ಮನುಷ್ಯನ ಕೈಯಲ್ಲಿರುವ ರೇಖೆಗಳಿಂದಲೇ ಅವನ ಬಗ್ಗೆ ಹಲವು ವಿಚಾರಗಳನ್ನು ತಿಳಿದುಕೊಳ್ಳಬಹುದು. ಇಂದು ನಾವು ನಿಮಗೆ ಕೈರೇಖೆಯಿಂದ ಒಬ್ಬ ಮನುಷ್ಯನ ಲವ್ ಲೈಫ್ ಹೇಗಿರುತ್ತದೆ ಎಂದು ತಿಳಿಸುತ್ತೇವೆ. ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ಪ್ರೀತಿಗಾಗಿ ಹಂಬಲಿಸುತ್ತಾನೆ. ತಂದೆ ತಾಯಿಯ ಪ್ರೀತಿ, ಸಂಗಾತಿಯ ಪ್ರೀತಿ ಎಲ್ಲವೂ ಇರುತ್ತದೆ. ಮನುಷ್ಯನ ಕೈಯಲ್ಲಿರುವ ಚಿಹ್ನೆಗಳನ್ನು ನೋಡಿ, ಆತನಿಗೆ ಪ್ರೀತಿ ಸಿಗುತ್ತೋ ಇಲ್ಲವೋ ಎನ್ನುವುದನ್ನು ಹೇಳಬಹುದಾಗಿದೆ. ದಾಂಪತ್ಯ ಜೀವನ ಹೇಗಿರುತ್ತದೆ ಎನ್ನುವುದನ್ನು ಸಹ ಹೇಳಬಹುದಾಗಿದೆ. ಇವುಗಳ ಬಗ್ಗೆ ಇಂದು ತಿಳಿದುಕೊಳ್ಳೋಣ..
ನಿಮ್ಮ ಕೈಯಲ್ಲಿರುವ ಗುರುಪರ್ವತದ ಮೇಲೆ ಇರುವ ಕ್ರಾಸ್ ಚಿಹ್ನೆಯು ಪ್ರೀತಿಯ ವಿವಾಹದ ಚಿಹ್ನೆ ಆಗಿರುತ್ತದೆ. ಒಬ್ಬ ಮನುಷ್ಯನ ಕೈಯಲ್ಲಿ ಗುರು ಪರ್ವತದ ಮೇಲೆ ಕ್ರಾಸ್ ಚಿಹ್ನೆ ಇದ್ದರೆ, ಅವರು ಪ್ರೇಮ ವಿವಾಹ ಆಗುತ್ತಾರೆ ಎಂದು ಅರ್ಥ ಹಾಗೂ ಅವರ ವೈವಾಹಿಕ ಜೀವನ ಚೆನ್ನಾಗಿರುತ್ತದೆ ಎಂದು ಅರ್ಥ. ಜೀವನ ಪೂರ್ತಿ ಈ ಸಂಬಂಧ ಚೆನ್ನಾಗಿರುತ್ತದೆ.
ಹಾಗೆಯೇ, ಗುರುಪರ್ವತದ ಮೇಲೆ ಒಂದು ವೇಳೆ ಸ್ವಸ್ತಿಕ್ ಚಿಹ್ನೆ ಇದ್ದರೆ, ಆ ವ್ಯಕ್ತಿಯು ತನ್ನ ಪ್ರೀತಿಯ ವಿಚಾರದಲ್ಲಿ ಬಹಳ ಪ್ರಾಮಾಣಿಕವಾಗಿ ಇರುತ್ತಾನೆ, ತೋರ್ಪಡಿಕೆಗಾಗಿ ಪ್ರೀತಿ ಮಾಡುವುದಿಲ್ಲ ಎಂದು ಅರ್ಥ. ತಮ್ಮ ಸಂಗಾತಿಯ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿರುತ್ತಾನೆ.
ಮೇಲೆ ಇರುವ ಗುರುಪರ್ವತವು ಹಾಗೂ ಹೃದಯ ರೇಖೆಯನ್ನು ಗುರುಪರ್ವತ ತಲುಪುದ್ದರೆ, ಅವರು ಪ್ರೀತಿಸಿ ಮದುವೆಯಾಗುತ್ತಾರೆ. ಅವರ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಒಂದು ವೇಳೆ ಆರೆಂಡ್ಜ್ ಮ್ಯಾರೇಜ್ ಆದರೂ ಸಹ ಆ ಸಂಬಂಧವನ್ನು ಮನಸ್ಪೂರ್ತಿಯಾಗಿ ನೋಡಿಕೊಳ್ಳುತ್ತಾರೆ.
ಒಬ್ಬ ವ್ಯಕ್ತಿಯ ಕೈಯಲ್ಲಿ ವಿವಾಹ ರೇಕೆಯ ಕೆಳಗೆ ಇನ್ನು ಕೆಲವು ಶಾಖೆಗಳು ಇದ್ದರೆ, ಅವರು ಕೂಡ ಪ್ರೇಮ ವಿವಾಹ ಮಾಡಿಕೊಳ್ಳುತ್ತಾರೆ.
ಹೃದಯ ರೇಖೆಯಿಂದ ಶುರುವಾಗಿ, ಒಂದು ರೇಖೆಯು ಸೂರ್ಯನನ್ನು ತಲುಪಿದರೆ, ಆ ವ್ಯಕ್ತಿಗಳು ಕೂಡ ಲವ್ ಮ್ಯಾರೇಜ್ ಮಾಡಿಕೊಳ್ಳುತ್ತಾರೆ. ಇವರು ಒಂದಕ್ಕಿಂತ ಹೆಚ್ಚು ಮದುವೆ ಆಗುವ ಸಂಭವ ಕೂಡ ಜಾಸ್ತಿಯಿದೆ.
Comments are closed.