ಬಿಗ್ ನ್ಯೂಸ್: ದಿನೇಶ್ ಕಾರ್ತಿಕ್ ಗೆ ಪರೋಕ್ಷವಾಗಿ ಸಿಹಿ ಸುದ್ದಿ ನೀಡಿದ ರಾಹುಲ್ ದ್ರಾವಿಡ್. ಕೊನೆಗೂ ದಿನೇಶ್ ಗೆ ಕಷ್ಟಕಾಲ ಮುಗಿಯಿತೇ??
ಭಾರತದ ಅಪ್ರತಿಮ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು ಎಂದು ಹೆಸರು ಪಡೆದಿರುವವರು ದಿನೇಶ್ ಕಾರ್ತಿಕ್. ಮೂರು ವರ್ಷಗಳಿಂದ ದಿನೇಶ್ ಕಾರ್ತಿಕ್ ಅವರು ಭಾರತ ತಂಡದ ಪರವಾಗಿ ಆಡಿರಲಿಲ್ಲ, ಭಾರತ ಕ್ರಿಕೆಟ್ ತಂಡಕ್ಕೆ ಮರಳಿ ಬರಬೇಕು ಎಂದು ದಿನೇಶ್ ಕಾರ್ತಿಕ್ ಅವರು ಬಹಳ ಪ್ರಯತ್ನ ಪಟ್ಟಿದ್ದರು, ಕೊನೆಗೂ ಈ ವರ್ಷ ಐಪಿಎಲ್ ನಲ್ಲಿ ಆರ್.ಸಿ.ಬಿ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿ, ಭಾರತ ತಂಡಕ್ಕೆ ಸೆಲೆಕ್ಟ್ ಆದರು. ಈವರೆಗೂ ಆಗಿರುವ 4 ಪಂದ್ಯಗಳಲ್ಲಿ ಸಿಕ್ಕ ಅವಕಾಶಗಳ ಸದುಪಯೋಗ ಪಡಿಸಿಕೊಂಡಿದ್ದಾರೆ. ಅದರಲ್ಲೂ ಶುಕ್ರವಾರ ರಾಜ್ ಕೋಟ್ ನಲ್ಲಿ ನಡೆದ 4ನೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಟೀಮ್ ಇಂಡಿಯಾ ರನ್ಸ್ ಗಳನ್ನು ಗಳಿಸಲು ಕಷ್ಟಪಡುತ್ತಿದ್ದಾಗ, ದಿನೇಶ್ ಕಾರ್ತಿಕ್ ಅವರು ಕ್ರೀಸ್ ಗೆ ಬಂದು, ರನ್ ಗಳನ್ನು ಸಿಡಿಸಿದ್ದಾರೆ. 14ನೇ ಓವರ್ ನಡೆಯುವಾಗ ಕ್ರೀಸ್ ಗೆ ಬರುವ ದಿನೇಶ್ ಕಾರ್ತಿಕ್ ಅವರು, 27 ಎಸೆತಗಳಲ್ಲಿ ಭರ್ಜರಿಯಾದ 55 ರನ್ ಗಳಿಸಿ, ಅದ್ಭುತವಾದ ಇನ್ನಿಂಗ್ಸ್ ಆಡಿದ್ದಾರೆ. ದಿನೇಶ್ ಕಾರ್ತಿಕ್ ಅವರು ಇದೇ ಮೊದಲ ಬಾರಿಗೆ ಅರ್ಧ ಶತಕ ಗಳಿಸಿದ್ದಾರೆ. ಹಾಗೆಯೇ ದಿನೇಶ್ ಕಾರ್ತಿಕ್ ಅವರ ಈ ಅದ್ಭುತವಾದ ಪ್ರದರ್ಶನ ಭಾರತ ತಂಡವು 82 ರನ್ ಗಳ ಅಂತರದಲ್ಲಿ ಗೆಲ್ಲಲು ಸಹಾಯವಾಯಿತು. ದಿನೇಶ್ ಕಾರ್ತಿಕ್ ಅವರ ಈ ಅದ್ಭುತವಾದ ಪ್ರದರ್ಶನ ನೋಡಿ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಒಳ್ಳೆಯ ಮನಸ್ಸಿನಿಂದ ದಿನೇಶ್ ಕಾರ್ತಿಕ್ ಅವರನ್ನು ಹೊಗಳಿದ್ದಾರೆ.
“ದಿನೇಶ್ ಕಾರ್ತಿಕ್ ಅವರ 3 ವರ್ಷಗಳ ಸತತ ಪ್ರಯತ್ನ ಮಾಡುತ್ತಿದ್ದಾರೆ, ಶ್ರಮ ವಹಿಸಿದ್ದಾರೆ. ಹಾಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅವರನ್ನು ಸಮರ್ಥನೆ ಮಾಡಿಕೊಂಡಿರುವುದು ಸಂತೋಷ ತಂದಿದೆ. ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಜೊತೆಯಾಟ ಅದ್ಭುತವಾಗಿ ಮೂಡಿ ಬಂದಿತು. ಕೊನೆಯ 5 ಓವರ್ ಗಳಲ್ಲಿ ನಮಗೆ ಒಳ್ಳೆಯ ಪ್ರದರ್ಶನದ ಅಗತ್ಯ ಇತ್ತು, ಆ ಸಮಯದಲ್ಲಿ ಇಬ್ಬರು ಒಳ್ಳೆಯ ಜೊತೆಯಾಟ ಮಾಡಿದರು. ಇವರಿಬ್ಬರು ಡೆತ್ ಓವರ್ ಗಳಿಗೆ ಉತ್ತಮವಾದ ಅಸ್ತ್ರ. ದಿನೇಶ್ ಕಾರ್ತಿಕ್ ಅವರು ಅತ್ಯುತ್ತಮವಾಗಿ ಆಡುತ್ತಿರುವುದು ಒಳ್ಳೆಯ ವಿಚಾರ. ಮುಂಬರುವ ಪಂದ್ಯಗಳಲ್ಲಿ ಅವರು ನಮಗೆ ಒಳ್ಳೆಯ ಆಯ್ಕೆಗಳನ್ನು ನೀಡಿದ್ದಾರೆ. ಎಲ್ಲಾ ಆಟಗಾರರಿಗೂ ಬಾಗಿಲು ತೆರೆದಿದೆ ಎಂದು ನಾನು ಈಗಾಗಲೇ ಹೇಳಿದ್ದೆ, ರಾಜ್ ಕೋಟ್ ನಲ್ಲಿ ದಿನೇಶ್ ಕಾರ್ತಿಕ್ ಅವರ ಪ್ರದರ್ಶನ ಅದ್ಭುತವಾಗಿತ್ತು..” ಎಂದು ಹೇಳಿದ್ದಾರೆ ರಾಹುಲ್ ದ್ರಾವಿಡ್. ಜೊತೆಗೆ ದಿನೇಶ್ ಕಾರ್ತಿಕ್ ಅವರು ಐರ್ಲೆಂಡ್ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.
Comments are closed.