Neer Dose Karnataka
Take a fresh look at your lifestyle.

ಜಿಯೋ ರಿಚಾರ್ಜ್ ಆಪ್ ಮೂಲಕ ಮನೆಯಲ್ಲಿಯೇ ಕುಳಿತು ಹಣ ಗಳಿಸುವುದು ಹೇಗೆ ಗೊತ್ತೇ?? ಗೃಹಿಣಿಯರೇ ನೀವು ಕೂಡ ಮಾಡಬಹುದು

ಈಗಿನ ಕಾಲದಲ್ಲಿ ನಾವು ಎಷ್ಟು ಹಣ ಗಳಿಸುವುದು ಕಡಿಮೆಯೇ, ಖರ್ಚುಗಳು ಹೆಚ್ಚಾಗಿ, ಎಷ್ಟೇ ಹಣ ಗಳಿಸಿದರು, ತಿಂಗಳು ಮುಗಿಯುವ ಹೊತ್ತಿಗೆ ಕೈ ಖಾಲಿ ಆಗಿರುತ್ತದೆ. ಹಾಗಾಗಿ ಎಲ್ಲರೂ ಬೇರೆ ಬೇರೆ ಆದಾಯ ಬರುವ ದಾರಿಗಳನ್ನು ಹುಡುಕಿಕೊಳ್ಳುತ್ತಾರೆ. ಮಾಡುತ್ತಿರುವ ಕೆಲಸದ ಜೊತೆಗೆ ಪಾರ್ಟ್ ಟೈಮ್ ಕೆಲಸಗಳನ್ನು ಟ್ರೈ ಮಾಡಬಹುದು. ಇದರಿಂದಲೂ ಹಣ ಗಳಿಸಬಹುದು. ಇದೀಗ ಜಿಯೋ ಸಂಸ್ಥೆ ನಿಮಗೆ ಹಣ ಗಳಿಸುವ ಅವಕಾಶ ನೀಡಿದೆ. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಮೊಬೈಲ್ ಬಳಸುವ ಗ್ರಾಹಕರಿಗೆ ಆಕರ್ಷಕವಾದ ಪ್ಲಾನ್ ಗಳನ್ನು ನೀಡುತ್ತಿರುವ ಟೆಲಿಕಾಂ ಕಂಪನಿಗಳಲ್ಲಿ ಒಂದು ಜಿಯೋ ಸಂಸ್ಥೆ. ಗ್ರಾಹಕರಿಗೆ ಆಕರ್ಷಕವಾದ ಪ್ಲಾನ್ ಗಳನ್ನು ನೀಡುವುದರ ಜೊತೆಗೆ ಜಿಯೋ ಸಂಸ್ಥೆಯು ಈಗ ನೀವು ಸುಲಭವಾಗಿ ಹಣ ಗಳಿಸುವ ಅವಕಾಶವನ್ನು ಸಹ ನೀಡಿದೆ, ಜಿಯೋ ಗ್ರಾಹಕರು JioPOSLite ಆಪ್ ನ ಮೂಲಕ ಹಣ ಗಳಿಸಬಹುದು. ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ರೀಚಾರ್ಜ್ ಮಾಡುವ ಮೂಲಕ ನೀವು ಹಣಗಳಿಸಬಹುದು. JioPOSLite ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಇಂದ ನಿಮ್ಮ ಮೊಬೈಲ್ ಗೆ ಇನ್ಸ್ಟಾಲ್ ಮಾಡಿ, ನಂತರ ಅದರಲ್ಲಿ ಕೇಳುವ ಮೊಬೈಲ್ ನಂಬರ್ ಹಾಗೂ ಇನ್ನಿತರ ಮಾಹಿತಿಗಳನ್ನಿ ಹಾಕಿ ಸೈನ್ ಅಪ್ ಮಾಡಿ.

ಬಳಿಕ, ಮೊಬೈಲ್ ನಂಬರ್ ಗೆ ಬರುವ ಓಟಿಪಿಯನ್ನು ಸಹ ಅಲ್ಲಿ ನಮೂದಿಸಿ. ನಂತರ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಕೇಳುತ್ತದೆ, ಅದನ್ನು ಸಹ ನಮೂದಿಸಿ. ನಂತರ ವಾಲೆಟ್ ಗೆ ಹಣ ಹಾಕಲು, ಲೋಡ್ ವಾಲೆಟ್ ಎಂದು ಕೇಳುತ್ತದೆ, ಅದನ್ನು ಬಳಸಿ ನಿಮ್ಮ ಬ್ಯಾಂಕ್ ಖ್ಯಾತೆಯಿಂದ ಜಿಯೋ ವಾಲೆಟ್ ಗೆ ಹಣ ಹಾಕಿ, ನಂತರ ನಿಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಎಲ್ಲರಿಗೂ ಆ ಆಪ್ ಇಂದ ರೀಚಾರ್ಜ್ ಮಾಡಿ, ಇದರಿಂದ ನಿಮಗೆ ಶೇ.4.16 ರಷ್ಟು ಕಮಿಷನ್ ಸಿಗುತ್ತದೆ. ಅಂದರೆ 100 ರೂಪಾಯಿಯ ರೀಚಾರ್ಜ್ ಗೆ 4.16 ರೂಪಾಯಿಯ ಕಮಿಷನ್ ನಿಮಗೆ ಸಿಗುತ್ತದೆ. ಈ ಮೂಲಕ ನೀವು, ಎಲ್ಲರಿಗೂ ರೀಚಾರ್ಜ್ ಮಾಡುತ್ತಾ ನೀವು ಸಹ ಹಣ ಗಳಿಸಬಹುದು.

Comments are closed.