ಅಂದು ಅದೊಂದು ಕಾರಣಕ್ಕೆ ನೇರವಾಗಿ ರೋಹಿತ್ ಮೇಲೆ ದಿನೇಶ್ ಕೋಪಗೊಂಡದ್ದು ಯಾಕೆ ಗೊತ್ತೇ??ಕಾರ್ತಿಕ್ ಕುರಿತು ರೋಹಿತ್ ಹೇಳಿದ್ದೇನು ಗೊತ್ತೇ?
ಭಾರತದ ಅಪ್ರತಿಮ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು ಎಂದು ಹೆಸರು ಪಡೆದಿರುವವರು ದಿನೇಶ್ ಕಾರ್ತಿಕ್. ಮೂರು ವರ್ಷಗಳಿಂದ ದಿನೇಶ್ ಕಾರ್ತಿಕ್ ಅವರು ಭಾರತ ತಂಡದ ಪರವಾಗಿ ಆಡಿರಲಿಲ್ಲ, ಭಾರತ ಕ್ರಿಕೆಟ್ ತಂಡಕ್ಕೆ ಮರಳಿ ಬರಬೇಕು ಎಂದು ದಿನೇಶ್ ಕಾರ್ತಿಕ್ ಅವರು ಬಹಳ ಪ್ರಯತ್ನ ಪಟ್ಟಿದ್ದರು, ಕೊನೆಗೂ ಈ ವರ್ಷ ಐಪಿಎಲ್ ನಲ್ಲಿ ಆರ್.ಸಿ.ಬಿ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿ, ಭಾರತ ತಂಡಕ್ಕೆ ಸೆಲೆಕ್ಟ್ ಆದರು. ಈವರೆಗೂ ಆಗಿರುವ 4 ಪಂದ್ಯಗಳಲ್ಲಿ ಸಿಕ್ಕ ಅವಕಾಶಗಳ ಸದುಪಯೋಗ ಪಡಿಸಿಕೊಂಡಿದ್ದಾರೆ. ಅದರಲ್ಲೂ ಶುಕ್ರವಾರ ರಾಜ್ ಕೋಟ್ ನಲ್ಲಿ ನಡೆದ 4ನೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ದಿನೇಶ್ ಕಾರ್ತಿಕ್ ಅವರು ಈಗ ಐರ್ಲೆಂಡ್ ತಂಡಕ್ಕೆ ಸೆಲೆಕ್ಟ್ ಆಗಿದ್ದಾರೆ. ಇನ್ನು ನಮ್ಮ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ ಅವರು ಸಹ ಉತ್ತಮವಾದ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ರೋಹಿತ್ ಅವರು ಕ್ಯಾಪ್ಟನ್ ಅದ ಬಳಿಕ ಸತತವಾಗಿ 14 ಪಂದ್ಯಗಳನ್ನು ಗೆದ್ದು, ತಾವು ಒಳ್ಳೆಯ ಕ್ಯಾಪ್ಟನ್ ಎಂದು ನಿರೂಪಿಸಿದ್ದರು. ಇನ್ನು ಹೆಚ್ಚಿನ ಸಾಧನೆ ಮಾಡಬೇಕು ಎಂದುಕೊಂಡಿದ್ದರು. ಆದರೆ ಈ ವರ್ಷ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಅವರು ಫಾರ್ಮ್ ನಲ್ಲಿರಲಿಲ್ಲ, ಕ್ಯಾಪ್ಟನ್ ಆಗಿ ಮತ್ತು ಬ್ಯಾಟ್ಸ್ಮನ್ ಆಗಿ ಯಶಸ್ಸು ಪಡೆಯಲಿಲ್ಲ, ಹಾಗಾಗಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಮತ್ತೆ ಭಾರತ ತಂಡಕ್ಕೆ ಮರಳುತ್ತಿದ್ದಾರೆ. ಈ ನಡುವೆ ದಿನೇಶ್ ಕಾರ್ತಿಕ್ ಅವರು ರೋಹಿತ್ ಶರ್ಮಾ ಅವರ ಮೇಲೆ ಕೋಪ ಮಾಡಿಕೊಂಡಿದ್ದಾ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದು ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಫೈನಲ್ಸ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ನಾನು ಮೊದಲು ಬ್ಯಾಟಿಂಗ್ ಮಾಡುತ್ತೇನೆ ಎಂದಿದ್ದರು. ಆದರೆ ರೋಹಿತ್ ಅವರು ಅದಕ್ಕೆ ಒಪ್ಪಲಿಲ್ಲ, ಆಗ ಡಿಕೆ ಅವರು ಕ್ಯಾಪ್ಟನ್ ರೋಹಿತ್ ಅವರ ಮೇಲೆ ಬಹಳ ಕೋಪ ಮಾಡಿಕೊಂಡಿದ್ದರಂತೆ. ನಂತರ ರೋಹಿತ್ ಅವರು ರನ್ ಔಟ್ ಆಗಿ ಬಂದ ಬಳಿಕ ಡಿಕೆ ಅವರಿಗೆ ಈಗ ಹೋಗು ಎಂದು ಹಳಿದರಂತೆ, ಆಗ ಡಿಕೆ ಅವರು ನಾಲ್ಕನೇ ಕ್ರಮಾಂಕದಲ್ಲಿ ಹೋಗುವಾಗ, ಕೋಪ ಮಾಡಿಕೊಂಡೆ, ಓಕೆ ಎಂದು ಹೇಳಿ ಕ್ರೀಸ್ ಗೆ ಹೋದರು. ಬಳಿಕ, ಒಂದು ಬಾಲ್ ಗೆ ಐದು ರನ್ ಬೇಕಿದ್ದಾಗ, ಕೊನೆಯ ಬಾಲ್ ನಲ್ಲಿ ಸಿಕ್ಸರ್ ಬಾರಿಸಿ ತಂಡದ ಗೆಲುವಿಗೆ ಕಾರಣವಾದರು ಡಿಕೆ. ಬಳಿಕ ಸಕ್ಸಸ್ ಪಾರ್ಟಿಯಲ್ಲಿ ರೋಹಿತ್ ಅವರಿಗೆ ಸಾರಿ ಕೇಳಿ, ನೀನು ಹೇಳಿದ್ದು ಸರಿ ನನಗೆ ಅದೇ ಕ್ರಮಾಂಕ ಸೂಕ್ತ ಎಂದು ಹೇಳಿದ್ದರಂತೆ.
Comments are closed.