ಬಿಡುಗಡೆಯಾಯಿತು ಬಹುನಿರೀಕ್ಷಿತ ಹೊಸ ಟಿ20 ರ‍್ಯಾಂಕಿಂಗ್, DK ಭರ್ಜರಿ ಕಮ್ ಬ್ಯಾಕ್, ಟಾಪ್ 10 ನಲ್ಲಿ ಏಕೈಕ ಭಾರತೀಯ. ಹೇಗಿದೆ ಗೊತ್ತೇ ಲಿಸ್ಟ್??
ಕ್ರಿಕೆಟ್ ಎನ್ನುವುದು ಪ್ರಪಂಚಾದ್ಯಂತ ಎಲ್ಲರೂ ಬಹಳ ಮೆಚ್ಚಿಕೊಳ್ಳುವ ಹಾಗೂ ಗೌರವಯುತವಾಗಿ ಕಾಣುವ ಕ್ರೀಡೆಗಳಲ್ಲಿ ಒಂದು. ಅದರಲ್ಲೂ ಭಾರತದಲ್ಲಿ ಕ್ರಿಕೆಟ್ ಒಂದು ಕ್ರೀಡೆಯಷ್ಟೇ ಅಲ್ಲ, ವಿಶೇಷವಾದ ಭಾವನೆ ಎಂದರೆ ತಪ್ಪಾಗುವುದಿಲ್ಲ. ಕ್ರಿಕೆಟ್ ನಲ್ಲಿ ಹಲವು ವಿಭಾಗಗಳಿವೆ, ಅವುಗಳಲ್ಲಿ ಶ್ರೇಷ್ಠವಾದ ಪ್ಲೇಯರ್ ಗಳು ಸಹ ಇದ್ದಾರೆ. ಇದೀಗ ಐಸಿಸಿ ಟಿ20 ಪಂದ್ಯಗಳ, ಟಿ20 ರಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರ ಟಾಪ್ 10ರಲ್ಲಿ ಲಿಸ್ಟ್ ನಲ್ಲಿ ಸ್ಥಾನ ಪಡೆದುಕೊಂಡಿರುವುದು ಭಾರತದ ಒಬ್ಬ ಆಟಗಾರ ಮಾತ್ರ, ಪಾಕಿಸ್ತಾನದ ಬಾಬರ್ ಅಜಂ ಈಗಲೂ ಸಹ ಮೊದಲ ಸ್ಥಾನದಲ್ಲಿದ್ದಾರೆ. ಹಾಗಿದ್ದರೆ ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂದು ನೋಡೋಣ ಬನ್ನಿ..
ಸೌತ್ ಆಫ್ರಿಕಾ ಟೂರ್ನಿಯಲ್ಲಿ ಉತ್ತಮವಾದ ಪ್ರದರ್ಶನ ನೀಡಿದ ಯುವಪ್ರತಿಭೆ ಇಶಾನ್ ಕಿಶನ್ ಅವರು ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿ, ಅದ್ಭುತವಾದ ಪ್ರದರ್ಶನ ನೀಡಿರುವ ದಿನೇಶ್ ಕಾರ್ತಿಕ್ ಅವರು 87ರ ಸ್ಥಾನದಲ್ಲಿದ್ದಾರೆ. ಮುಂದೆ ನಡೆಯಲಿರುವ ಐರಲೆಂಡ್ ವಿರುದ್ಧದ ಪಂದ್ಯಗಳಲ್ಲೂ ದಿನೇಶ್ ಕಾರ್ತಿಕ್ ಅವರು ಒಳ್ಳೆಯ ಪ್ರದರ್ಶನ ನೀಡಿದರೆ, ಇನ್ನು ಉತ್ತಮವಾದ ಟಾಪ್ 50 ಒಳಗಿನ ಸ್ಥಾನಕ್ಕೆ ಬರಬಹುದು. ಒಟ್ಟಾರೆಯಾಗಿ ಟಾಪ್ 20ಯಲ್ಲಿ ಯಾರೆಲ್ಲಾ ಇದ್ದಾರೆ ಎಂದು ನೋಡೋಣ ಬನ್ನಿ.. ಟಾಪ್ 10, ನ್ಯೂಜಿಲೆಂಡ್ ಆಟಗಾರ ಮಾರ್ಟಿನ್ ಗೆಪ್ಟಿಲ್, 658 ರೇಟಿಂಗ್ ಪಡೆದಿದ್ದಾರೆ.. ಟಾಪ್ 9, ಸೌತ್ ಆಫ್ರಿಕಾದ ರೆಸ್ಸಿ ವಂಡರ್ ಡುಸೆನ್, 658 ರೇಟಿಂಗ್ ಪಡೆದಿದ್ದಾರೆ. ಟಾಪ್ 8ರಲ್ಲಿ ಪಾತುಂ ನಿಸಂಕಾ ಇದ್ದು, ಇವರು 661 ರೇಟಿಂಗ್ ಪಡೆದಿದ್ದಾರೆ.
ಟಾಪ್ 7ರಲ್ಲಿ, ನ್ಯೂಜಿಲೆಂಡ್ ನ ಆಟಗಾರ ಡೆವೊನ್ ಕಾನ್ವೆ, 703 ರೇಟಿಂಗ್ ಪಡೆದಿದ್ದಾರೆ. 6ನೇ ಸ್ಥಾನದಲ್ಲಿ ಭಾರತದ ಇಶಾನ್ ಕಿಶನ್ ಅವರು, 703 ರೇಟಿಂಗ್ ಪಡೆದಿದ್ದಾರೆ.. 5ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆರೋನ್ ಫಿಂಚ್, 716 ರೇಟಿಂಗ್ ಪಡೆದಿದ್ದಾರೆ. 4ನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಡೇವಿಡ್ ಮಲಾನ್, 728 ರೇಟಿಂಗ್ ಪಡೆದಿದ್ದಾರೆ..3ನೇ ಸ್ಥಾನದಲ್ಲಿ ಸೌತ್ ಆಫ್ರಿಕಾದ, ಐಡೆನ್ ಮಕ್ರಾಮ್, 757 ರೇಟಿಂಗ್ ಪಡೆದಿದ್ದಾರೆ. 2ನೇ ಸ್ಥಾನದಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್, 794 ರೇಟಿಂಗ್ ಪಡೆದಿದ್ದಾರೆ..ಮೊದಲ ಸ್ಥಾನದಲ್ಲಿ ಪಾಕಿಸ್ತಾನದ ಆಟಗಾರ ಬಾಬರ್ ಆಜಂ, 818 ರೇಟಿಂಗ್ ಪಡೆದಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ತಂಡದ ಪಟ್ಟಿ ಹೀಗಿದೆ.
Comments are closed.