Neer Dose Karnataka
Take a fresh look at your lifestyle.

ಆತಂಕಗೊಂಡಿದ್ದ ಅಭಿಮಾನಿಗಳಿಗೆ ಕೊನೆಗೂ ಪವಿತ್ರ ಲೋಕೇಶ್ ರವರ ಮದುವೆಯ ಕುರಿತು ಸಿಕ್ತು ಸ್ಪಷ್ಟನೆ, ಅಸಲಿಗೆ ಮದುವೆ ಕಥೆ ಏನಾಗಿದೆ ಗೊತ್ತೇ?

ಚಂದನವನದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಚಿತ್ರರಂಗದಿಂದ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟ ಪವಿತ್ರಾ ಲೋಕೇಶ್ ಅವರು ನಂತರ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. ತೆಲುಗಿನಲ್ಲಿ ಬಹಳ ಫೇಮಸ್ ಆಗಿರುವ ಪೋಷಕನಟಿ ಆಗಿದ್ದಾರೆ ಪವಿತ್ರಾ ಲೋಕೇಶ್ ಅವರು. ಇದೀಗ ಇವರು ತೆಲುಗಿನ ಖ್ಯಾತ ನಟ ನರೇಶ್ ಅವರೊಡನೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ. ಈಗ ಈ ಮದುವೆ ವಿಚಾರದ ಬಗ್ಗೆ ಪವಿತ್ರಾ ಲೋಕೇಶ್ ಅವರ ಕುಟುಂಬದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ಪವಿತ್ರಾ ಲೋಕೇಶ್ ಅವರು ನರೇಶ್ ಅವರ ಜೊತೆಗೆ ಮದುವೆ ಆಗಿದ್ದಾರೆ ಎನ್ನುವ ವಿಚಾರ ತೆಲುಗು ಮಾಧ್ಯಮಗಳಲ್ಲಿ ಮೊದಲಿಗೆ ಬಂದು ವೈರಲ್ ಆಯಿತು. ಬಳಿಕ, ಕನ್ನಡ ಮಾಧ್ಯಮಗಳಲ್ಲೂ ಸಹ ಸದ್ದು ಮಾಡಿತು. ಈ ವಿಚಾರ ನಿಜವೋ ಸುಳ್ಳೋ ಎಂದೇ ಎಲ್ಲರೂ ಅಂದುಕೊಳ್ಳುತ್ತಿದ್ದರು. ಇದೀಗ ಪವಿತ್ರಾ ಲೋಕೇಶ್ ಅವರ ಸಹೋದರ ಆದಿ ಲೋಕೇಶ್ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರು ಈ ವಿಚಾರದ ಬಗ್ಗೆ ಕೇಳಿದಾಗ, ಇಂತಹ ವಿಚಾರಗಳನ್ನು ಮಾತನಾಡಲು ನಾನು ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ಈ ಮದುವೆಯ ಸುದ್ದಿ ಬಗ್ಗೆ ಏನು ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ನಟ ನರೇಶ್ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಈ ಮದುವೆ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನರೇಶ್ ಅವರ ಸಂಪರ್ಕಾಧಿಕಾರಿ ಇದರ ಬಗ್ಗೆ ಮಾತನಾಡಿ, ಪವಿತ್ರಾ ಲೋಕೇಶ್ ಅವರಂಜು ನರೇಶ್ ಅವರು ಮದುವೆ ಆಗಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಈ ಮದುವೆ ವದಂತಿ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಆದರೆ ಪವಿತ್ರಾ ಲೋಕೇಶ್ ಅವರ ಕಡೆಯಿಂದ ಇದರ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಪವಿತ್ರಾ ಲೋಕೇಶ್ ಅವರು 2007ರಲ್ಲಿ ನಟ ಸುಚೇಂದ್ರ ಪ್ರಸಾದ್ ಅವರ ಜೊತೆಗೆ ಮದುವೆ ಆಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಇವರಿಬ್ಬರು ಜೊತೆಯಾಗಿಲ್ಲ, ಹಾಗಾಗಿ ಪವಿತ್ರಾ ಲೋಕೇಶ್ ಅವರು ಎರಡನೇ ಮದುವೆ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ನರೇಶ್ ಅವರಿಗೂ ಈಗಾಗಲೇ ಮೂರು ಮದುವೆ ಆಗಿದ್ದು, ಪವಿತ್ರಾ ಲೋಕೇಶ್ ಅವರ ಜೊತೆಗೆ ನಾಲ್ಕನೇ ಮದುವೆ ಆಗಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿದೆ. ಆದರೆ ಈಗ ಕೊನೆಗೂ ಎಲ್ಲದಕ್ಕೂ ಸ್ಪಷ್ಟನೆ ಆಗಿದೆ.

Comments are closed.