ಧನುಶ್ರೀ ರವರ ಚಾಹಲ್ ರವರು ಮೊದಲ ಪ್ರೀತಿಯಲ್ಲ. ಈಗಲೂ ಕೂಡ ಧನುಶ್ರೀ ರವರಿಗೆ ಎರಡನೇ ಸ್ಥಾನ. ಅದು ಯಾಕಂತೆ ಗೊತ್ತೇ??
ಭಾರತ ತಂಡದ ಸ್ಕಿಪ್ಪರ್ ಎಂದು ಗುರುತಿಸಿಕೊಂಡಿದ್ದವರು ಯುಜವೇಂದ್ರ ಚಾಹಲ್. ಆರ್.ಸಿ.ಬಿ ತಂಡದ ಪರವಾಗಿ ಹಲವು ವರ್ಷಗಳ ಕಾಲ ಅಬ್ಧುತವಾದ ಪ್ರದರ್ಶನ ನೀಡಿದರು. ಆದರೆ ಈ ವರ್ಷ ಚಾಹಲ್ ಅವರು ರಾಜಸ್ತಾನ್ ರಾಯಲ್ಸ್ ತಂಡದ ಪರವಾಗಿ ಆಡುತ್ತಿದ್ದರು. ಈ ವರ್ಷ ಐಪಿಎಲ್ ನಲ್ಲಿ ಪರ್ಪಲ್ ಕ್ಯಾಪ್ ವಿನ್ನರ್ ಸಹ ಆದರು ಯುಜವೇಂದ್ರ ಚಾಹಲ್. ಪ್ರಸ್ತುತ ಚಾಹಲ್ ಅವರು ಭಾರತ ತಂಡಕ್ಕೂ ಆಯ್ಕೆಯಾಗಿದ್ದಾರೆ. ಕ್ರಿಕೆಟ್ ವಿಚಾರದಲ್ಲಿ ಚಾಹಲ್ ಅವರು ಸುದ್ದಿಯಾಗುವ ಹಾಗೆ ವೈಯಕ್ತಿಕ ಜೀವನದ ವಿಚಾರದ ಬಗ್ಗೆ ಕೂಡ ಸುದ್ದಿಯಾಗುತ್ತಾರೆ. ಇದೀಗ ಚಾಹಲ್ ಅವರ ಫಸ್ಟ್ ಲವ್ ವಿಚಾರ ಸುದ್ದಿಯಾಗಿದೆ.
ಯುಜವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ಅವರು, ಮುಂಬೈ ನ ಡೆಂಟಲ್ ಕಾಲೇಜಿನಲ್ಲಿ ಓದಿ ಶಿಕ್ಷಣ ಪಡೆದಿದ್ದಾರೆ. ಆದರೆ ಇವರು ಫೇಮಸ್ ಆಗಿರುವುದು ಡ್ಯಾನ್ಸರ್ ಆಗಿ. ಧನಶ್ರೀ ಅವರ ಯೂಟ್ಯೂಬ್ ಚಾನೆಲ್ ಸಹ ಇದ್ದು, ಅದಕ್ಕೆ 25 ಲಕ್ಷಕ್ಕಿಂತ ಹೆಚ್ಚು ಚಂದಾದರರಿದ್ದಾರೆ. ಇನ್ನು ಧನಶ್ರೀ ಅವರು ಅನೇಕ ರೀಲ್ಸ್ ವಿಡಿಯೋಗಳು ಡ್ಯಾನ್ಸ್ ಮಾಡಿರುವ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಧನಶ್ರೀ ಅವರೊಡನೆ ಪತಿ ಚಾಹಲ್ ಸಹ ಸ್ಟೆಪ್ ಹಾಕುತ್ತಾರೆ. ಈ ವರ್ಷ ಐಪಿಎಲ್ ಪಂದ್ಯ ನಡೆಯುವಾಗ, ಧನಶ್ರೀ ಅವರು ಆರ್.ಆರ್ ತಂಡದ ಜೊತೆ ಟ್ರಾವೆಲ್ ಮಾಡಿದ್ದು, ಗಂಡನಿಗೆ ಮತ್ತು ಇಡೀ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದರು.
ಗಂಡನಿಗೆ ಸದಾ ಸಪೋರ್ಟ್ ಮಾಡುವ ಧನಶ್ರೀ ಅವರು ರಾಜಸ್ತಾನ್ ರಾಯಲ್ಸ್ ತಂಡದ ಇಂಟರ್ವ್ಯೂ ಒಂದರಲ್ಲಿ ಮಾತನಾಡುವಾಗ, ಧನಶ್ರೀ ಅವರು ಚಾಹಲ್ ಅವರ ಬಗ್ಗೆ ಒಂದು ಮಾಹಿತಿ ನೀಡಿದ್ದಾರೆ. ಅದು ಏನೆಂದರೆ, “ಚಾಹಲ್ ಯಾವಾಗಲೂ ಬಹಳ ಸಂತೋಷವಾಗಿ ಇರುವಂತಹ ವ್ಯಕ್ತಿ. ಚಾಹಲ್ ಅವರಿಗೆ ನನಗಿಂತ ಕ್ರಿಕೆಟ್ ಮೇಲೆ ಬಹಳ ಪ್ರೀತಿ, ಗ್ರೌಂಡ್ ನಲ್ಲಿ ಮತ್ತು ಕ್ರಿಕೆಟ್ ಜೊತೆಗಾರರ ಜೊತೆಗೆ ಇರುವುದರಿಂದ ಅವರಿಗೆ ಬಹಳ ಸಂತೋಷ ಆಗುತ್ತದೆ. ಸಂತೋಷದಿಂದ ಸದಾ ನಗುನಗುತ್ತಾ ಇರುತ್ತಾರೆ. ಕ್ರಿಕೆಟ್ ಅವರ ಫಸ್ಟ್ ಲವ್..” ಎಂದು ಹೇಳಿದ್ದಾರೆ ಧನಶ್ರೀ.
Comments are closed.