ಮತ್ತೊಂದು ಟ್ವಿಸ್ಟ್, ರಾಕಿ ಕಟ್ಟಿಸಿಕೊಂಡರೂ ಪರವಾಗಿಲ್ಲ ಪವಿತ್ರ ರವರನ್ನು ಮನೆಯಲ್ಲಿಯೇ ಇರಿಸಿಕೊಳ್ಳುತ್ತೇನೆ ಎಂದ ನರೇಶ್, ಅದು ಯಾಕಂತೆ ಗೊತ್ತೇ??
ನಟಿ ಪವಿತ್ರಾ ಲೋಕೇಶ್ ಅವರ ವಿಚಾರ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಇಷ್ಟು ದಿನಗಳ ಕಾಲ ನರೇಶ್ ಅವರು ಪವಿತ್ರಾ ಲೋಕೇಶ್ ಅವರನ್ನು ಈಗಾಗಲೇ ಮದುವೆ ಆಗಿಯೇ ಬಿಟ್ಟಿದ್ದಾರೆ ಎನ್ನುವಂತಹ ಮಾತುಗಳು ಕೇಳಿಬಂದಿದ್ದವು. ಇವರಿಬ್ಬರು ಜೊತೆಯಾಗಿ ಮಹಾಬಲೇಶ್ವರ ದೇವಸ್ಥಾನಕ್ಕೆ ಹೋಗಿಬಂದಿದ್ದರು, ಅಲ್ಲಿ ಸ್ವಾಮೀಜಿಯ ಎದುರು ಮದುವೆ ನಡೆದೇ ಹೋಗಿದೆ ಎಂದು ಮಾಧ್ಯಮಗಳಲ್ಲಿ ವರದಿ ತಿಳಿಸಲಾಗಿತ್ತು. ಆದರೆ ಪವಿತ್ರ ಲೋಕೇಶ್ ಅವರಾಗಲಿ, ನರೇಶ್ ಅವರಾಗಲಿ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ನರೇಶ್ ಅವರ ಪಿಆರ್ ಮದುವೆ ನಡೆದಿಲ್ಲ ಎಂದು ಹೇಳಿದ್ದರು. ಇತ್ತ ನರೇಶ್ ಅವರು ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ಅವರಿಗೆ ಇನ್ನು ವಿಚ್ಛೇದನ ನೀಡಿಲ್ಲ. ಈಗ ಮೂರನೇ ಪತ್ನಿಯಿಂದ ವಿಚ್ಛೇದನ ಪಡೆಯಲು ಅರ್ಜಿ ಹಾಕಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ರಮ್ಯಾ ರಘುಪತಿ ಅವರು ಈಗಲೂ ನರೇಶ್ ಅವರ ಮನೆಯಲ್ಲೇ ಇದ್ದಾರೆ. ಮೂರನೇ ಪತ್ನಿಗೆ ವಿಚ್ಛೇದನ ಕೊಡದೇ ಪವಿತ್ರಾ ಲೋಕೇಶ್ ಅವರ ಜೊತೆಗೆ ಮದುವೆ ಆಗಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬಂದಿದೆ. ಆದರೆ ಈಗ ವಿಚ್ಛೇದನಕ್ಕೆ ಅರ್ಜಿ ಹಾಕಿದ ಬಳಿಕ ನರೇಶ್ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ತಮಗೆ ಕೋರ್ಟ್ ನಲ್ಲಿ ಹಿನ್ನಡೆಯಾದರೆ, ಬಹಿರಂಗವಾಗಿ ಪವಿತ್ರಾ ಲೋಕೇಶ್ ಅವರ ಕೈಯಲ್ಲಿ ರಾಖಿ ಕಟ್ಟಿಡಿಕೊಂಡು ಆದರೂ ಸಹ ಅವರನ್ನು ಮನೆಯಲ್ಲೇ ಇರಿಸಿಕೊಳ್ಳುವುದಾಗಿ ಹೇಳಿದ್ದಾರೆ ನರೇಶ್ ಅವರು.
ಈ ಹೇಳಿಕೆ ಈಗ ಇನ್ನಷ್ಟು ವೈರಲ್ ಆಗಿದೆ. ಇನ್ನು ಪವಿತ್ರಾ ಅವರು ಇಲ್ಲಿಯವರೆಗೂ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತ ಪವಿತ್ರಾ ಲೋಕೇಶ್ ಅವರ ಸಹೋದರ ಆದಿ ಲೋಕೇಶ್ ಅವರು, ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದರು. ಇನ್ನು ಪವಿತ್ರಾ ಲೋಕೇಶ್ ಅವರು ಸಹ ಪತಿ ಸುಚೇಂದ್ರ ಪ್ರಸಾದ್ ಅವರಿಗೆ ಇನ್ನು ವಿಚ್ಛೇದನ ನೀಡಿಲ್ಲ, 2007ರಲ್ಲಿ ಸುಚೇಂದ್ರ ಪ್ರಸಾದ್ ಅವರೊಡನೆ ಪವಿತ್ರಾ ಲೋಕೇಶ್ ಅವರು ಮದುವೆ ಆಗಿದ್ದರು, ಇವರಿಬ್ಬರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಈಗ ನರೇಶ್ ಅವರೊಡನೆ ಪವಿತ್ರಾ ಲೋಕೇಶ್ ಅವರು ಮದುವೆಯಾಗಿದ್ದಾರೆ ಎನ್ನುವ ಗಾಸಿಪ್ ಕೇಳಿ ಬರುತ್ತಿದೆ. ನರೇಶ್ ಅವರು ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅವರ ಸಹೋದರ, ಮಹೇಶ್ ಅವರು ನಟ ಸೂಪರ್ ಸ್ಟಾರ್ ಕೃಷ್ಣ ಅವರ ಮೊದಲ ಹೆಂಡತಿಯ ಮಗ, ನರೇಶ್ ಅವರು ಎರಡನೇ ಹೆಂಡತಿಯ ಮಗ, ಸೂಪರ್ ಸ್ಟಾರ್ ಕೃಷ್ಣ ಅವರ ಎರಡನೆಯ ಪತ್ನಿ ನಟಿ ವಿಜಯ ನಿರ್ಮಲ ಅವರ ಮೊದಲ ಪತಿಯ ಮಗ ನರೇಶ್ ಅವರು.
Comments are closed.