Neer Dose Karnataka
Take a fresh look at your lifestyle.

ಆರ್ಸಿಬಿ ತಂಡಕ್ಕೆ ಸಂದೇಶ ರವಾನೆ ಮಾಡಿದ ಆಕಾಶ್ ಚೋಪ್ರಾ: ಬಿಡುಗಡೆ ಮಾಡಬೇಕು ಎಂದ ನಾಲ್ಕು ಆಟಗಾರರು ಯಾರ್ಯಾರು ಗೊತ್ತೇ?

ನಮ್ಮ ಆರ್.ಸಿ.ಬಿ ತಂಡ ಕಳೆದ 15 ವರ್ಷಗಳಿಂದ ಕಪ್ ಗೆಲ್ಲುವ ಪ್ರಯತ್ನದಲ್ಲಿದೆ, ಆದರೆ ಇದುವರೆಗೂ ಒಂದು ಸಾರಿ ಕೂಡ ಆರ್.ಸಿ.ಬಿ ತಂಡ ಕಪ್ ಗೆದ್ದಿಲ್ಲ. ಪ್ರತಿಬಾರಿ ಏನೇ ಹೊಸ ಪ್ರಯೋಗಗಳನ್ನು ಮಾಡಿದ್ದರು ಸಹ ಆರ್.ಸಿ.ಬಿ ಮಾತ್ರ ಕಪ್ ಗೆಲ್ಲುವಲ್ಲಿ ವಿಫಲವಾಗುತ್ತಿದೆ. ಈ ವರ್ಷ ಆರ್.ಸಿ.ಬಿ ತಂಡವು ಹೊಸ ಕ್ಯಾಪ್ಟನ್ ಜೊತೆಗೆ ಹೊಸ ಜೋಶ್ ನಲ್ಲಿತ್ತು, ಈ ಬಾರಿ ಕಪ್ ಗೆಲ್ಲಲೇಬೇಕು ಎಂದು ವಿಭಿನ್ನವಾದ ಯೋಜನೆಗಳನ್ನು ಸಹ ಹಾಕಿಕೊಳ್ಳಲಾಯಿತು. ಬಹಳಷ್ಟು ಪ್ರಯತ್ನಗಳನ್ನು ಆರ್.ಸಿ.ಬಿ ತಂಡ ಮಾಡಿದರು ಸಹ, ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗಾಗಿ ಮುಂದಿನ ವರ್ಷ ಕಪ್ ಗೆಲ್ಲಲು, 4 ಆಟಗಾರರನ್ನು ಆರ್.ಸಿ.ಬಿ ತಂಡ ರಿಲೀಸ್ ಮಾಡಿದರೆ ಒಳ್ಳೆಯದು ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಕಾಶ್ ಚೋಪ್ರಾ ಅವರು ರಿಲೀಸ್ ಮಾಡಲು ಹೇಳಿರುವ ನಾಲ್ವರು ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ.. ಮೊದಲನೆಯದಾಗಿ ಸಿರಾಜ್ ಅಹ್ಮದ್, ಇವರನ್ನು 7ಕೋಟಿ ಕೊಟ್ಟು ಆರ್.ಸಿ.ಬಿ ತಂಡ ಉಳಿಸಿಕೊಂಡಿತ್ತು, ಆದರೆ ಸಿರಾಜ್ ಅವರು ಅದಕ್ಕೆ ತಕ್ಕಂತಹ ಪ್ರದರ್ಶನ ನೀಡಲಿಲ್ಲ. 15 ಪಂದ್ಯಗಳಲ್ಲಿ ಕೇವಲ 9 ವಿಕೆಟ್ ಗಳನ್ನು ಪಡೆದರು, ಜೊತೆಗೆ ಕೆಲವು ಪಂದ್ಯಗಳಲ್ಲಿ ಬಹಳ ದುಬಾರಿಯಾಗಿ ಕಾಣಿಸಿಕೊಂಡರು. ಹಾಗಾಗಿ ಸಿರಾಜ್ ಅವರನ್ನು ಕೈಬಿಡುವುದೇ ಒಳ್ಳೆಯದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಒಂದು ವೇಳೆ ಸಿರಾಜ್ ಅವರು ಬೇಕೆಂದರೆ, ಹರಾಜಿನಲ್ಲಿ ಬಿಟ್ಟು ಕಡಿಮೆ ಮೊತ್ತಕ್ಕೆ ಅವರನ್ನು ಖರೀದಿ ಮಾಡಬಹುದು ಎನ್ನಲಾಗುತ್ತಿದೆ. ಮತ್ತೊಬ್ಬರು ಅನುಜ್ ರಾವತ್, ಇವರು ಕೂಡ ನಿರೀಕ್ಷೆಯ ಮಟ್ಟಕ್ಕೆ ಬ್ಯಾಟಿಂಗ್ ಮಾಡಲಿಲ್ಲ, ಆಡಿದ 8 ಪಂದ್ಯಗಳಲ್ಲಿ ಕೇವಲ 129 ರನ್ ಗಳನ್ನು ಗಳಿಸಿದರು. ಹಾಗಾಗಿ ಇವರನ್ನು ಸಹ ಆರ್.ಸಿ.ಬಿ ತಂಡ ಕೈಬಿಟ್ಟರೆ ಒಳ್ಳೆಯದು ಎಂದಿದ್ದಾರೆ ಆಕಾಶ್ ಚೋಪ್ರಾ.

ಮೂರನೆಯ ಆಟಗಾರ ಶೇಫ್ರಾನ್ ರುದರ್ ಫೋರ್ಡ್, ಇವರು ಕೆರೆಬಿಯನ್ ಆಟಗಾರ, ಅಲ್ಲಿನವರು ತಂಡದಲ್ಲಿ ಇದ್ದರೆ, ಬಹಳ ಜೋಶ್ ಇರುತ್ತದೆ ಎಂದು ಹೇಳುತ್ತಾರೆ, ಆದರೆ ರುದರ್ ಫೋರ್ಡ್ ಅವರು ತಮಗೆ ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ, ಒಳ್ಳೆಯ ಪ್ರದರ್ಶನ ನೀಡದ ಕಾರಣ ಅವರನ್ನು ರಿಲೀಸ್ ಮಾಡುವುದೇ ಒಳ್ಳೆಯದು ಎನ್ನುತ್ತಾರೆ ಆಕಾಶ ಚೋಪ್ರಾ. ನಾಲ್ಕನೆಯ ಆಟಗಾರ, ಸಿದ್ಧಾರ್ಥ್ ಕೌಲ್, ಇವರು ಕೂಡ ಇದೇ ಆಗಿದೆ ಸಿದ್ಧಾರ್ಥ್ ಕೌಲ್ ಅವರು ಆರ್.ಸಿ.ಬಿ ತಂಡದಲ್ಲಿ ಇದ್ದ ಹಾಗೆ ತೋರಲಿಲ್ಲ, ಸಿದ್ಧಾರ್ಥ್ ಅವರಿಗೆ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತು, ಆದರೆ ಅವರು ಅದನ್ನು ಸದುಪಯೋಗ ಪಡಿಸಿಕೊಳ್ಳಲಿಲ್ಲಜ್ ಉತ್ತಮವಾದ ಪ್ರದರ್ಶನ ನೀಡಲಿಲ್ಲ, ಹಾಗಾಗಿ ಈ ನಾಲ್ವರು ಆಟಗಾರರನ್ನು ತಂಡದಿಂದ ಹೊರಹಾಕಿದರೆ ಒಳ್ಳೆಯದು ಎನ್ನುತ್ತಿದ್ದಾರೆ ಆಕಾಶ್ ಚೋಪ್ರಾ.

Comments are closed.