ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಸಹಾಯ ಮಾಡಲು ದ್ರಾವಿಡ್ ಎಂಟ್ರಿ: ಕೊನೆಗೂ ಟೆಸ್ಟ್ ಗು ಮುನ್ನ ನಡೆಯುತ್ತಿರುವುದಾದರೂ ಏನು ಗೊತ್ತೇ?
ಸೌತ್ ಆಫ್ರಿಕಾ ತಂಡದ ವಿರುದ್ಧದ 5 ಪಂದ್ಯಗಳನ್ನು ಮುಗಿಸಿದ ಬಳಿಕ ಇದೀಗ ನಮ್ಮ ಭಾರತ ತಂಡವು ಇಂಗ್ಲೆಂಡ್ ತಂಡದ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದೆ. 2021ರಲ್ಲಿ ಇಂಗ್ಲೆಂಡ್ ಜೊತೆಗೆ ಟೆಸ್ಟ್ ಪಂದ್ಯಗಳು ಶುರುವಾಗಿದ್ದವು, ಆದರೆ ಭಾರತ ತಂಡದ ಕೆಲವು ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ತಗುಲಿದ ಕಾರಣ ಟೆಸ್ಟ್ ಪಂದ್ಯಗಳು ಅರ್ಧಕ್ಕೆ ನಿಂತಿದ್ದವು. 2-1 ರ ಲೀಡ್ ನಲ್ಲಿದ್ದ ಟೀಮ್ ಇಂಡಿಯಾ ಇದೀಗ 5ನೇ ಪಂದ್ಯವನ್ನು ಆಡಿ, ಗೆಲ್ಲಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಖಂಡಿತವಾಗಿಯು ಈ ಪಂದ್ಯವನ್ನು ಗೆಲ್ಲಲೇಬೇಕು ಎಂದು ಭಾರತ ತಂಡವು ಪಂದ್ಯ ಗೆಲ್ಲುವಲ್ಲಿ ಗಮನ ಹರಿಸಿದೆ..
ಈಗಾಗಲೇ ಭಾರತ ತಂಡ ಇಂಗ್ಲೆಂಡ್ ಗೆ ಲಗ್ಗೆ ಇಟ್ಟಿದ್ದು, ಪ್ರಾಕ್ಟೀಸ್ ಜೋರಾಗಿಯೇ ನಡೆಯುತ್ತಿದೆ. ಭಾರತ ತಂಡದ ಹೆಡ್ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಸಹ ತಂಡದ ಜೊತೆಗೆ ಶ್ರಮಿಸಿ, ಎಲ್ಲರಿಗೂ ಟ್ರೈನ್ ಅಪ್ ಮಾಡುತ್ತಿದ್ದಾರೆ. ಅದರಲ್ಲೂ ವಿರಾಟ್ ಕೋಹ್ಲಿ ಅವರ ಮೇಲೆ ವಿಶೇಷವಾದ ಗಮನ ಹರಿಸಿದ್ದಾರೆ ಎನ್ನಲಾಗುತ್ತಿದೆ. ನಾವೆಲ್ಲರೂ ನೋಡಿರುವ ಹಾಗೆ ವಿರಾಟ್ ಕೋಹ್ಲಿ ಅವರು ಫಾರ್ಮ್ ಕಳೆದುಕೊಂಡಿದ್ದಾರೆ, ಕಳೆದ ಮೂರು ವರ್ಷಗಳಿಂದ ವಿರಾಟ್ ಕೋಹ್ಲಿ ಅವರು ಯಾವ ಪಂದ್ಯದಲ್ಲೂ ಶತಕ ಭಾರಿಸಿಲ್ಲ. ಸುಮಾರು ಮೂರು ವರ್ಷಗಳಿಂದ ಅವರು ಫಾರ್ಮ್ ನಲ್ಲಿಲ್ಲ. ಹಾಗಾಗಿ ದ್ರಾವಿಡ್ ಅವರು ವಿರಾಟ್ ಕೋಹ್ಲಿ ಅವರ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧಡ್ಸ್ 5ನೇ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರಿಂದ ಅಬ್ಬರವಾದ ಬ್ಯಾಟಿಂಗ್ ಪ್ರದರ್ಶನ ಬರಲೇಬೇಕು ಎಂದು ಎಲ್ಲರೂ ಎದುರುನೋಡುತ್ತಿದ್ದಾರೆ. ವಿರಾಟ್ ಕೋಹ್ಲಿ ಅವರು ಏನೇ ನಡೆದರು ಮತ್ತೆ ವಾಪಸ್ ಬರುವ ಸ್ವಭಾವ ಹೊಂದಿರುವವರು, ಈ ಕಳಪೆ ಫಾರ್ಮ್ ಇಂದ ಸಹ ಅವರು ಮರಳಿ ಬರಲಿದ್ದಾರೆ ಎನ್ನುವ ನಂಬಿಕೆ ಅಭಿಮಾನಿಗಳಲ್ಲಿ ಮತ್ತು ಟೀಮ್ ಇಂದಿಯಾದಲ್ಲಿ ಇದೆ. ಅದೇ ನಂಬಿಕೆಯಲ್ಲೇ ವಿರಾಟ್ ಅವರನ್ನು ಇಂಗ್ಲೆಂಡ್ ಸೀರೀಸ್ ಗೆ ಆಯ್ಕೆ ಮಾಡಿಕೊಂಡಿದ್ದಾರೆ. ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ಅವರ ಪ್ರದರ್ಶನ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.
Comments are closed.