ಇನ್ನು ನಿಮ್ಮನ್ನು ಮುಟ್ಟಲು ಯಾರ ಕೈಯಲ್ಲೂ ಸಾಧ್ಯವಿಲ್ಲ. ತನ್ನ ರಾಶಿಯನ್ನು ಬದಲಾವಣೆ ಮಾಡಲಿರುವ ಬುಧ, ಯಾರ್ಯಾರಿಗೆ ಅದೃಷ್ಟ ಹೊತ್ತು ತರುತ್ತಿದ್ದಾನೆ ಗೊತ್ತೇ??
ಗ್ರಹಗಳ ಸಂಚಾರ, ಸ್ಥಾನ ಬದಲಾವಣೆ ಇದೆಲ್ಲವೂ ರಾಶಿಚಕ್ರಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಜುಲೈ 2ರಂದು ಬುಧ ಗ್ರಹವು, ತನ್ನ ರಾಶಿಚಕ್ರವನ್ನು ಬದಲಾಯಿಸಲಿದೆ, ಜುಲೈ 2ರಂದು ಬುಧ ಗ್ರಹವು ತನ್ನದೇ ಆದ ಮಿಥುನ ರಾಶಿಗೆ ಬರಲಿದ್ದಾನೆ. ಜುಲೈ 2, 2022ರಂದು ಬುಧ ಸಂಕ್ರಮಣ ನಡೆಯಲಿದ್ದು, ಇದು ಕೆಲವು ರಾಶಿಗಳಿಗೆ ಒಳ್ಳೆಯ ಫಲ ನೀಡಿದರೆ, ಇನ್ನು ಕೆಲವು ರಾಶಿಗಳಿಗೆ ಅಶುಭ ಫಲ ನೀಡುತ್ತದೆ. ಬುಧ ಸಂಕ್ರಮಣದಿಂದಾಗಿ ಒಳ್ಳೆಯ ಫಲಗಳನ್ನು ಪಡೆಯಲಿರುವ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ. ನೋಡಿ…
ಕನ್ಯಾ ರಾಶಿ :- ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸ್ಥಿರತೆ ಕಂಡುಕೊಳ್ಳುವುದು ಮುಖ್ಯವಾಗುತ್ತದೆ. ಹಲವು ದಿನಗಳ ಕಠಿಣ ಪರಿಶ್ರಮದ ಫಲ ಈ ರಾಶಿಯವರಿಗೆ ಸಿಗುತ್ತದೆ. ವ್ಯಾಪಾರ ಮಾಡುತ್ತಿರುವವರಿಗೆ ಹೊಸ ವ್ಯಾಪಾರ ಮಾಡುವ ಅವಕಾಶ ಸಿಗುತ್ತದೆ. ನೀವು ಕೈಗೊಳ್ಳಲಿರುವ ನಿರ್ಧಾರಗಳ ಸಾಮರ್ಥ್ಯ ಹೆಚ್ಚಾಗುತ್ತದೆ, ಹಾಗೂ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿಯುತ್ತೀರಿ.
ಮಕರ ರಾಶಿ :- ಈ ರಾಶಿಯವರು ಬಹಳ ದಿನಗಳಿಂದ ಕಷ್ಟಪಟ್ಟು ಮಾಡುತ್ತಿರುವ ಕೆಲಸಕ್ಕೆ ಯಶಸ್ಸು ಸಿಗುತ್ತದೆ. ಕೆಲಸದಲ್ಲಿ ಪ್ರೊಮೋಷನ್ ಸಿಗುತ್ತದೆ. ಕೆಲಸದ ವಿಚಾರದಲ್ಲಿ ಗೌರವ ಮೆಚ್ಚುಗೆ ಸಿಗುತ್ತದೆ. ಬುಧ ಸಂಕ್ರಮಣ ಈ ರಾಶಿಯವರಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಆರ್ಥಿಕ ಲಾಭ ಹೆಚ್ಚಾಗುತ್ತದೆ.
ಸಿಂಹ ರಾಶಿ :- ಈ ರಾಶಿಯವರಿಗೆ ಧನಲಾಭ ಹೆಚ್ಚಾಗುತ್ತದೆ, ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಸಿಂಹ ರಾಶಿಯ ವ್ಯಕ್ತಿಗಳ ವೃತ್ತಿಜೀವನದಲ್ಲಿ ಬೆಳವಣಿಗೆ ಆಗುತ್ತದೆ. ಹೊಸ ಅವಕಾಶ ಸಿಗುತ್ತದೆ. ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಿಂಹ ರಾಶಿಯವರಿಗೆ ವಿಶೇಷವಾದ ಲಾಭ ತಂದುಕೊಡುತ್ತದೆ.
Comments are closed.