ರಶ್ಮಿಕಾ ಶಾಕ್ ಮೇಲೆ ಶಾಕ್. ಸುಖಾಸುಮ್ಮನೆ ಪುಷ್ಪ 2 ಗೆ ಸಂಭಾವನೆ ಹೆಚ್ಚು ಮಾಡಿಕೊಂಡಿದ್ದಕ್ಕಾಗಿ ವಿದೇಶಿ ಹುಡುಗಿ ಎಂಟ್ರಿ: ಮತ್ತೊಂದು ಟ್ವಿಸ್ಟ್. ಏನು ಗೊತ್ತೇ?
ರಶ್ಮಿಕಾ ಮಂದಣ್ಣ, ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಇಂದು ಪ್ಯಾನ್ ಇಂಫಿಯ ಹೀರೋಯಿನ್ ಆಗಿ ಸದ್ದು ಮಾಡುತ್ತಿರುವ ನಟಿ. ಪುಷ್ಪ ಸಿನಿಮಾ ಬಿಡುಗಡೆಯಾದ ನಂತರ ರಶ್ಮಿಕಾ ಅವರಿಗೆ ಇದ್ದ ಬೇಡಿಕೆ, ಜಮಪ್ರಿಯತೆ ಎಲ್ಲವೂ ದುಪ್ಪಟ್ಟಾಗಿದೆ ಎಂದರೆ ತಪ್ಪಾಗುವುದಿಲ್ಲ. ನ್ಯಾಷನಲ್ ಕ್ರಶ್ ಎಂದು ಫೇಮಸ್ ಆಗಿರುವ ರಶ್ಮಿಕಾ ಮಂದಣ್ಣ ಈಗ ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಸಾಲು ಸಾಲು ಅವಕಾಶಗಳು ಬರುತ್ತಿದ್ದರೂ ಸಹ, ರಶ್ಮಿಕಾ ಮಾತ್ರ ಬಂದ ಎಲ್ಲಾ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿಲ್ಲ, ಪಾತ್ರದ ಆಯ್ಕೆಯಲ್ಲಿ ಬಹಳ ಸೆಲೆಕ್ಟಿವ್ ಆಗಿದ್ದಾರೆ. ರಶ್ಮಿಕಾ ಅಭಿನಯದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಅವರ ಪಾತ್ರಗಳು ಸಹ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಪುಷ್ಪ ಸಿನಿಮಾ ಯಶಸ್ಸಿನ ಬಳಿಕ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದರು, ಇದೀಗ ದಳಪತಿ ವಿಜಯ್ ಅವರ ಸಿನಿಮಾಗೆ ರಶ್ಮಿಕಾ ಅವರು ಮತ್ತೊಮ್ಮೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಬರೋಬ್ಬರಿ 5ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ರಶ್ಮಿಕಾ ಮಂದಣ್ಣ. ಇದೀಗ ರಶ್ಮಿಕಾ ಅವರು ಮತ್ತೊಮ್ಮೆ ಸಂಭಾವನೆ ಹೆಚ್ಚಿಸಿಕೊಂಡಿದ್ದಕ್ಕೋ ಏನೋ ಪುಷ್ಪ2 ಚಿತ್ರತಂಡದಿಂದ ಒಂದು ಶಾಕಿಂಗ್ ಸುದ್ದಿ ಸಿಕ್ಕಿದೆ. ಇತ್ತೀಚೆಗೆ ಪುಷ್ಪ2 ಸಿನಿಮಾದಲ್ಲಿ ರಶ್ಮಿಕಾ ಅವರ ಪಾತ್ರವನ್ನು ಮೊಟಕುಗೊಳಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು, ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ರಶ್ಮಿಕಾ ಅವರು ನಾಯಕಿಯಾಗಿರುವ ಪುಷ್ಪ2 ಸಿನಿಮಾಗೆ ಮತ್ತೊಬ್ಬ ವಿದೇಶಿ ನಟಿಯನ್ನು ಕರೆತರುವ ಪ್ಲಾನ್ ನಲ್ಲಿದ್ದಾರಂತೆ ನಿರ್ದೇಶಕ ಸುಕುಮಾರ್. ಆಕೆಯ ಪಾತ್ರ ಕೂಡ ಪುಷ್ಪ2 ಸಿನಿಮಾದಲ್ಲಿ ಮುಖ್ಯವಾದ ಪಾತ್ರ ಆಗಿರುತ್ತದೆ ಎನ್ನಲಾಗಿದೆ.
ಪುಷ್ಪ1 ನಲ್ಲಿ ಪುಷ್ಪರಾಜ್ ಮತ್ತು ಶ್ರೀವಲ್ಲಿ ಮದುವೆ ಆಗುತ್ತದೆ, ಹಾಗೂ ಪೊಲೀಸ್ ಶಿಕಾವತ್ ತಮಗಾದ ಅವಮಾನಕ್ಕೆ ಪುಷ್ಪ ವಿರುದ್ಧ ಮಾಸ್ಟರ್ ಪ್ಲಾನ್ ಮಾಡುತ್ತಾರೆ. ಪುಷ್ಪ2 ನಲ್ಲಿ, ಪುಷ್ಪರಾಜ್ ನ ಎಮೋಷನಲ್ ಜರ್ನಿಯನ್ನು ತೋರಿಸಲಾಗುವುದು, ಜೊತೆಗೆ ಪುಷ್ಪ2 ಸಿನಿಮಾದ ಕೆಲವು ದೃಶ್ಯಗಳನ್ನು ಸೌತ್ ಈಸ್ಟ್ ಏಷಿಯ ಅಂದರೆ, ಸಿಂಗಪೂರ್ ಅಥವಾ ತೈವಾನ್ ನಲ್ಲಿ ಚಿತ್ರೀಕರಣ ಮಾಡುವ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಅಲ್ಲಿ, ವಿದೇಶಿ ಹುಡುಗಿಯೊಬ್ಬಳು ಪುಷ್ಪರಾಜ್ ಗೆ ಕ್ಲೋಸ್ ಆಗುವ ಹಾಗೆ ಕತೆಯನ್ನು ಮಾಡಲಾಗಿದೆಯಂತೆ. ಹಾಗಾಗಿ ಹೊಸ ನಾಯಕಿಯ ಎಂಟ್ರಿ ಸಹ ಆಗಲಿದೆ. ಶೀಘ್ರದಲ್ಲೇ ಪುಷ್ಪ2 ಸಿನಿಮಾ ಚಿತ್ರೀಕರಣ ಶುರುವಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ.
Comments are closed.