ತಮಿಳಿನ ಖ್ಯಾತ ನಟ ಸೂರ್ಯ ರವರ ಪುತ್ರಿ ಹತ್ತನೇ ತರಗತಿಯಲ್ಲಿ ಪಡೆದುಕೊಂಡ ಅಂಕ ಎಷ್ಟು ಗೊತ್ತೇ? ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ
ತಮಿಳುನಾಡು 10ನೇ ತರಗತಿ ಪರೀಕ್ಷೆಯ ಫಲಿತಾಂಶಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿವೆ. ಇದೀಗ ಕಾಲಿವುಡ್ ನ ಖ್ಯಾತ ಸ್ಟಾರ್ ನಟ ಸೂರ್ಯ ಅವರ ಮಗಳ ಹತ್ತನೇ ತರಗತಿ ಅಂಕಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸೌತ್ ಸ್ಟಾರ್ ಹೀರೋ ಸೂರ್ಯ ಅವರಿಗೆ ವಿಶೇಷ ಪರಿಚಯ ಬೇಕಿಲ್ಲ, ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡುವ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಾರೆ. ಕಾಲಿವುಡ್ ನಲ್ಲಿ ನಂಬರ್ ಒನ್ ಸ್ಟಾರ್ ಹೀರೋ ಆಗಿ ಬೆಳೆದರು. ಟಾಲಿವುಡ್ ನಲ್ಲೂ ಸೂರ್ಯ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ನಟ ಸೂರ್ಯ ಅವರು ನಟಿ ಜ್ಯೋತಿಕಾ ಅವರನ್ನು ಪ್ರೀತಿಸಿ ಮದುವೆಯಾದರು.. ಸೂರ್ಯ ಮತ್ತು ಜ್ಯೋತಿಕಾ ಇಬ್ಬರು ಸಹ ಕೆಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಜೋಡಿ 2006 ರಲ್ಲಿ ವಿವಾಹವಾದರು. ಈ ದಂಪತಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗಳು, ಒಬ್ಬ ಮಗ. ಮಗಳ ಹೆಸರು ದಿಯಾ ಮತ್ತು ಮಗನ ಹೆಸರು ದೇವ್.
ನಾಯಕಿಯಾಗಿ ವೃತ್ತಿಜೀವನದ ಉತ್ತುಂಗದಲ್ಲಿರುವಾಗ, ಜ್ಯೋತಿ ಸೂರ್ಯ ಅವರನ್ನು ಮದುವೆಯಾಗುತ್ತಾರೆ, ಮದುವೆ ನಂತರ ಜ್ಯೋತಿಕಾ ಅವರು ಸಿನಿಮಾಗಳಿಗೆ ವಿದಾಯ ಹೇಳುತ್ತಾರೆ. ಸೂರ್ಯ ಅವರು ಪತ್ನಿ ಜ್ಯೋತಿಕಾ ಮತ್ತು ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅದರಲ್ಲೂ ಮಗ ದಿಯಾ ಜತೆಗಿನ ಸೂರ್ಯ ಅವರ ಒಡನಾಟ ಹೆಚ್ಚು ಪ್ರೀತಿಯಿಂದ ಕೂಡಿರುತ್ತದೆ. ಸೂರ್ಯ ಅವರು ತಮ್ಮ ಮಕ್ಕಳ ಜೊತೆಗೆ ಅವರು ಸಹ ಮಗುವಾಗಿ ಇರುತ್ತಾರೆ. ನಟ ಸೂರ್ಯ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ. ಸೂರ್ಯ ಅವರ ಮಗಳು ದಿಯಾ ಚೆನ್ನೈನ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದಿದ್ದಾರೆ. ಅವರ 10ನೇ ತರಗತಿ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಬಿಡುಗಡೆಯಾಗಿದೆ. ಬಾಲ್ಯದಿಂದಲು ಒಳ್ಳೆಯ ರೀತಿಯಲ್ಲಿ ಓದುತ್ತಾ ಬರುತ್ತಿದ್ದಾರೆ ದಿಯಾ.
ಸೂರ್ಯ ಅವರ ಮಗಳು ದಿಯಾ ಪರೀಕ್ಷೆಯ ಎಲ್ಲ ವಿಷಯಗಳಲ್ಲೂ ಉತ್ತಮ ಅಂಕ ಗಳಿಸಿದ್ದಾರೆ. ಗಣಿತದಲ್ಲಿ 100ಕ್ಕೆ 100 ಅಂಕ ಬಂದಿದ್ದು, ಇವರ ಮಾರ್ಕ್ಸ್ ನೋಡಿದವರು ಬೆಚ್ಚಿ ಬಿದ್ದಿದ್ದಾರೆ. ದಿಯಾ ಎಲ್ಲಾ ವಿಷಯಗಳಲ್ಲಿ 95 ಪ್ಲಸ್ ಅಂಕಗಳನ್ನು ಗಳಿಸಿದ್ದಾರೆ. ಇಂಗ್ಲಿಷ್ ನಲ್ಲಿ 99, ವಿಜ್ಞಾನದಲ್ಲಿ 98, ತಮಿಳಿನಲ್ಲಿ 95, ಸಮಾಜ ವಿಜ್ಞಾನದಲ್ಲಿ 95 ಅಂಕ ಪಡೆದಿದ್ದಾರೆ. ಕಷ್ಟಕರವಾದ ಗಣಿತದಲ್ಲಿ ಪೂರ್ತಿ 100 ಅಂಕಗಳನ್ನು ಪಡೆಯುವುದು ಎಷ್ಟು ಕಷ್ಟ ಎಂದು ಎಲ್ಲರೂ ಅರ್ಥಮಾಡಿಕೊಳ್ಳಬಹುದು. ಮಗಳು ಇಷ್ಟು ಒಳ್ಳೆಯ ಅಂಕಗಳನ್ನು ಗಳಿಸಿರುವುದು ಸೂರ್ಯ ಅವರಿಗೆ ಬಹಳ ಸಂತೋಷ ತಂದಿದೆ. ಅವರ ಇಡೀ ಕುಟುಂಬ ಸಂಭ್ರಮ ಪಡುತ್ತಿದೆ. ಈ ವಿಚಾರ ತಿಳಿದ ಅಭಿಮಾನಿಗಳು ಕೂಡ ಸೂರ್ಯದಂಪತಿ ಹಾಗೂ ದಿಯಾ ಅವರಿಗೆ ಶುಭಾಶಯ ಕೋರುತ್ತಿದ್ದಾರೆ.
Comments are closed.