ಕಿರುತೆರೆಯಲ್ಲಿ ಎಲ್ಲಾ ರೀತಿಯ ಪಾತ್ರಗಳ ಮೂಲಕ ಗೃಹಿಣಿಯ ಮನಗೆದ್ದಿರುವ ಜ್ಯೋತಿ ರವರು ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೇ?
ಕನ್ನಡ ಕಿರುತೆರೆ ಲೋಕ ಇಲ್ಲೆಯವರೆಗೂ ಹಲವಾರು ನಟಿಯರನ್ನು ಕಂಡಿದೆ. ಅವರಲ್ಲಿ ವೀಕ್ಷಕರ ಮನಸ್ಸಿಗೆ ಬಹಳ ಹತ್ತಿರ ಆಗಿರುವ ನಟಿಯರಲ್ಲಿ ಒಬ್ಬರು ಜ್ಯೋತಿ ರೈ. ಹಲವಾರು ಕನ್ನಡ ಸೀರಿಯಲ್ ಗಳಲ್ಲಿ ನಟಿಸಿರುವ ಜ್ಯೋತಿ ರೈ ಅವರು ಹೆಚ್ಚಾಗಿ ತಮ್ಮ ವಯಸ್ಸಿಗೆ ಮೀರಿದಂತಹ ಪಾತ್ರಗಳನ್ನೇ ಮಾಡಿದ್ದಾರೆ. ನಟಿ ಜ್ಯೋತಿ ರೈ ಅವರು ಹುಟ್ಟಿದ್ದು ಮಡಿಕೇರಿಯಲ್ಲಿ ಓದಿದ್ದು ಬೆಳೆದದ್ದು ಮಂಗಳೂರು ಮತ್ತು ಮಡಿಕೇರಿಯಲ್ಲಿ. ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ಸಿ ಮಾಡಿರುವ ಜ್ಯೋತಿ ಅವರು, ಪದವಿ ಮುಗಿಸಿ, ನೆಟ್ವರ್ಕಿಂಗ್ ಇಂಜಿನಿಯರ್ ಆಗಿ, ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದಾಗಲೇ ಅವರಿಗೆ ಪದ್ಮನಾಭ್ ಅವರೊಡನೆ ಮದುವೆ ಆಗಿತ್ತು.
ಕಂಪನಿಯಲ್ಲಿ ಕೆಲಸ ಮಾಡುವಾಗ, ಜ್ಯೋತಿ ರೈ ಅವರನ್ನು ನಿರ್ದೇಶಕ ವಿನು ಬಳಂಜ ಅವರು ನೋಡಿ, ನಟನೆಯ ಲೋಕಕ್ಕೆ ಕರೆತಂದರು. ಇವರು ನಟಿಸಿದ ಮೊದಲ ಧಾರವಾಹಿ ಬಂದೆ ಬರತಾವ ಕಾಲ.. ಈ ಧಾರವಾಹಿ ಮೂಲಕ ಅಭಿನಯ ಶುರು ಮಾಡಿದ ಜ್ಯೋತಿ ಅವರು ಜನರ ಮನಮುಟ್ಟುವಂತಹ ಅನೇಕ ಪಾತ್ರಗಳಲ್ಲಿ ನಟಿಸಿದ್ದಾರೆ. ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಗುಳ ಧಾರವಾಹಿಯಲ್ಲಿ ಜ್ಯೋತಿ ಅವರ ಅಭಿನಯವನ್ನು ಇಂದಿಗೂ ಯಾರು ಮರೆಯಲು ಸಾಧ್ಯವಿಲ್ಲ. ನಂತರದ ದಿನಗಳಲ್ಲಿ ಕಲರ್ಸ್ ಕನ್ನಡ, ಉದಯ ಟಿವಿ, ಕಸ್ತೂರಿ ಟಿವಿ ಹೀಗೆ ಎಲ್ಲಾ ಚಾನೆಲ್ ಗಳಲ್ಲೂ ಅನೇಕ ಧಾರವಾಹಿಗಳಲ್ಲಿ ನಟಿಸಿ ಕಿರುತೆರೆಯ ಬಹುಬೇಡಿಕೆಯ ನಟಿಯಾಗಿದ್ದಾರೆ. ಇಂದಿಗೂ ಸಹ ಜ್ಯೋತಿ ಅವರು ಕಿರುತೆರೆ ಲೋಕದಲ್ಲಿ ಬಹಳ ಬೇಡಿಕೆ ಇದೆ.
ಪ್ರಸ್ತುತ ಜ್ಯೋತಿ ಅವರು ಕನ್ನಡದಲ್ಲಿ ಕಸ್ತೂರಿ ನಿವಾಸ ಧಾರವಾಹಿಯಲ್ಲಿ ಹಾಗೂ ತೆಲುಗು ಭಾಷೆಯಲ್ಲಿ ಗುಪ್ಪೆದಂತ ಮನಸು ಧಾರವಾಹಿಯಲ್ಲಿ ನಟಿಸಿ ತೆಲುಗು ಕಿರುತೆರೆ ವೀಕ್ಷಕರ ಫೇವರೆಟ್ ನಟಿ ಸಹ ಆಗಿದ್ದಾರೆ. ಇದಲ್ಲದೆ ಕಿನ್ನರಿ, ಬ್ರಹ್ಮಗಂಟು, ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಜ್ಯೋತಿ ಅವರು ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಗೆ ಕೂಡ ಪಾದಾರ್ಪಣೆ ಮಾಡಿದ್ದಾರೆ. 99, ದಿಯಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜ್ಯೋತಿ ಮತ್ತು ಪದ್ಮನಾಭ್ ದಂಪತಿಗೆ ಉರ್ವೇಶ್ ಹೆಸರಿನ ಮಗ ಇದ್ದಾನೆ, ಇವರ ಮಗನಿಗೆ ಈಗ 10 ವರ್ಷ ವಯಸ್ಸು. ಮಗನಿಗೆ ಸ್ವಲ್ಪ ಆಟಿಸಂ ಸಮಸ್ಯೆ ಇದೆ. ಆದ್ರೆ ಜ್ಯೋತಿ ರೈ ಅವರ ಮಗ ಬಹಳ ಪ್ರತಿಭಾನ್ವಿತ ಮಗು ಆಗಿದ್ದು, ಟಿವಿ ನೋಡಿಯೇ ಐದಾರು ಭಾಷೆ ಮಾತನಾಡುವುದನ್ನು ಕಲಿತಿದ್ದಾರೆ ಉರ್ವೇಶ್. ಇವರ ಸುಂದರವಾದ ಸಂಸಾರ ಸದಾ ನಗುನಗುತ್ತಾ ಇರಲಿ ಎಂದು ಹಾರೈಸೋಣ.
Comments are closed.