ರೋಹಿತ್ ನಾಯಕತ್ವದಿಂದ ಅಪಾಯಕ್ಕೆ ಸಿಲಿಕಿದ ಸ್ಟಾರ್ ಕನ್ನಡಿಗ ಆಟಗಾರನ ಭವಿಷ್ಯ. ರೋಹಿತ್ ಮಾಡುತ್ತಿರುವುದಾದರೂ ಏನು ಗೊತ್ತೆ?
ನಮ್ಮ ಭಾರತ ಕ್ರಿಕೆಟ್ ತಂಡವು ಈಗಷ್ಟೇ ಸೌತ್ ಆಫ್ರಿಕಾ ತಂಡದ ವಿರುದ್ಧದ ಸರಣಿ ಪಂದ್ಯಗಳನ್ನು ಮುಗಿಸಿದೆ. ಐದು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಸೌತ್ ಆಫ್ರಿಕಾ ಗೆದ್ದರೆ, ಇನ್ನು 2 ಪಂದ್ಯಗಳನ್ನು ಭಾರತ ತಂಡ ಗೆದ್ದಿತು. ನಿರ್ಣಾಯಕ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಹಾಗಾಗಿ ಎರಡು ತಂಡಗಳಿಗೂ ಸಮವಾಗಿ ಪಾಯಿಂಟ್ಸ್ ಗಳು ಹಂಚಿಕೆಯಾಯಿತು. ಇದಾದ ಬಳಿಕ ಈಗ ಇಂಗ್ಲೆಂಡ್ ಸರಣಿ ಪಂದ್ಯಗಳಿಗೆ ಭಾರತ ತಂಡ ಸಜ್ಜಾಗುತ್ತಿದೆ.
ಜುಲೈ 1 ರಿಂದ ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಶುರುವಾಗಲಿದೆ. ಈ ಟೀಮ್ ಗೆ ಕ್ಯಾಪ್ಟನ್ ಆಗಿರುವುದು ರೋಹಿತ್ ಶರ್ಮಾ ಅವರು. ರೋಹಿತ್ ಅವರೊಡನೆ ಆರಂಭಿಕ ಬ್ಯಾಟ್ಸ್ಮನ್ ಆಗಿ ಕೆ.ಎಲ್.ರಾಹುಲ್ ಅವರು ಆಡಬೇಕಿತ್ತು, ಆದರೆ ರಾಹುಲ್ ಅವರ ಕಾಲಿಗೆ ಗಾಯ ಆಗಿರುವ ಕಾರಣ, ಅವರು ಸಂಪೂರ್ಣವಾಗು ಗುಣಮುಖರಾಗಿಲ್ಲದೆ ಇರುವುದರಿಂದ ರಾಹುಲ್ ಅವರು ಇಂಗ್ಲೆಂಡ್ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ರಾಹುಲ್ ಅವರ ಆರಂಭಿಕ ಬ್ಯಾಟ್ಸ್ಮನ್ ಸ್ಥಾನವನ್ನು ಶುಬ್ಮನ್ ಗಿಲ್ ಅವರಿಗೆ ಕೊಡಲಾಗಿದೆ. ಆದರೆ ಮತ್ತೊಬ್ಬ ಕನ್ನಡಿಗನನ್ನೇ ಈ ಸ್ಥಾನಕ್ಕೆ ಆಯ್ಕೆಮಾಡಬಹುದಾಗಿತ್ತು ಎನ್ನುವ ಅಭಿಪ್ರಾಯ ಕ್ರಿಕೆಟ್ ಅಭಿಮಾನಿಗಳಲ್ಲಿ ಶುರುವಾಗಿದೆ.
ಮಯಾಂಕ್ ಅಗರ್ವಾಲ್ ಅವರು ಭಾರತ ತಂಡದ ಪರವಾಗಿ ಹಲವು ಪಂದ್ಯಗಳನ್ನು ಆಡಿದ್ದಾರೆ. ಆದರೆ ಕಳೆದ ಬಾರಿ ಇವರ್ಜ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ, 3 ಪಂದ್ಯಗಳಲ್ಲಿ 19.66 ಸರಾಸರಿಯಲ್ಲಿ ಕೇವಲ 59 ರನ್ ಗಳನ್ನು ಗಳಿಸಿದರು. ಅಂದಿನ ಪಂದ್ಯದಲ್ಲಿ ಇವರು ವೈಫಲ್ಯ ಅನುಭವಿಸಿದ ಕಾರಣ, ಟೀಮ್ ಇಂಡಿಯಾ ಇವರನ್ನು ಕೈಬಿಟ್ಟಿದೆ. ಮತ್ತೊಮ್ಮೆ ಇವರನ್ನು ಭಾರತ ತಂಡಕ್ಕೆ ಆಯ್ಕೆಮಾಡಿಕೊಂಡಿಲ್ಲ. ಆದರೆ ಮಯಾಂಕ್ ಅಗರ್ವಾಲ್ ಅವರು ಈವರೆಗೂ ಆಡಿರುವ 21 ಟೆಸ್ಟ್ ಪಂದ್ಯಗಳಲ್ಲಿ 41.33ರ ಸರಾಸರಿಯಲ್ಲಿ 1488 ರನ್ ಗಳನ್ನು ಗಳಿಸಿದ್ದಾರೆ. ಆದರೆ ಒಮ್ಮೆ ವೈಫಲ್ಯದ ಕಾರಣ ಅವರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ.
Comments are closed.