ಕನ್ನಡದಿಯಲ್ಲಿ ಮಿಂಚಿ ಎಲ್ಲರ ಮನಗೆದ್ದಿದ್ದ ಆದಿ ಬಗ್ಗೆ ಹೊಸ ಗುಸುಗುಸು. ನಿಜಕ್ಕೂ ಕನ್ನಡತಿಗೆ ಬಿಡುತ್ತಿರುವುದು ಸತ್ಯವೇ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡತಿ ಧಾರಾವಾಹಿ ಗೆ ತನ್ನದೇ ಅದ ವೀಕ್ಷಕರ ಬಳಗವಿದೆ. ವಿಭಿನ್ನ ಕಥಾಹಂದರದ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿರುವ ಕನ್ನಡತಿ. ಸರಿಯಾದ ಕನ್ನಡವನ್ನು ಬಳಸಬೇಕು ಹಾಗೆಯೇ ಅಪ್ಪಟ ಕನ್ನಡ ಪ್ರೇಮ ಹೊಂದಿರುವ ಟೀಚರ್ ಒಬ್ಬರ ಹಿಂದೆ ಸುತ್ತುವ ಕತೆಯಾಗಿದೆ. ಇನ್ನೂ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ರಂಜನಿ ರಾಘವನ್, ಕಿರಣ್ ರಾಜ್, ರಕ್ಷಿತ್ ಅಭಿನಯಿಸಿದ್ದಾರೆ. ರಕ್ಷಿತ್ ಆದಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಇತ್ತೀಚಿಗೆ ಹೊರಬೀಳುತ್ತಿರುವ ಮಾಹಿತಿಯ ಪ್ರಕಾರ ಅವರು ತಮ್ಮ ಪಾತ್ರದಿಂದ ಹೊರ ಬಿದ್ದಿದ್ದಾರೆ ಎಂದು ಗಾಸಿಪ್ ಹಬ್ಬಿಸಲಾಗುತ್ತಿದೆ. ಆದರೆ ವಾಹಿನಿಯಿಂದ ಆಗಲಿ ಅಥವಾ ಧಾರವಹಿದಿಂದ ಈ ಕುರಿತಾಗಿ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಈಗಾಗಲೇ ಧಾರವಾಹಿಯಲ್ಲಿ ಹಲವಾರು ಪಾತ್ರಗಳ ಬದಲಾವಣೆಯಾಗಿದೆ ಬಿಂದು, ಬಿಂದು ಅಮ್ಮ ಹಾಗೆಯೇ ಇತ್ತೀಚಿಗಷ್ಟೇ ಸಾನಿಯಾ ಪಾತ್ರವು ಕೂಡ ಬದಲಾಯಿಸಲಾಗಿತ್ತು. ನಂತರ ಹೊಸ ಕಲಾವಿದರು ಪಾತ್ರಗಳಲ್ಲಿ ನಟಿಸಿದ್ದರು. ಈ ಮದುವೆ ಸಂಚಿಕೆ ಸಂದರ್ಭದಲ್ಲಿ ದೇವ್ ಪಾತ್ರ ಬದಲಾವಣೆಯನ್ನು ಕೂಡ ಮಾಡಲಾಗಿತ್ತು. ಹೀಗೆ ಸಾಕಷ್ಟು ಪಾತ್ರಗಳು ಧಾರವಾಹಿಯಲ್ಲಿ ಬದಲಾಗಿದೆ. ಆದರೆ ಇತ್ತೀಚೆಗೆ ಮತ್ತೊಂದು ಸುದ್ದಿ ಗುಸುಗುಸು ಪಿಸುಪಿಸು ಕೇಳುತ್ತಿದ್ದು. ಆದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಕ್ಷಿತ್ ತಂಡದಿಂದ ಹೊರಬಂದರು ಎನ್ನಲಾಗುತ್ತಿದೆ. ಈ ಕುರಿತು ಅವರು ಸ್ಪಷ್ಟನೆ ನೀಡಿಲ್ಲವಾದರೂ ವಿವಿಧ ಮಾಧ್ಯಮಗಳು ಈ ಕುರಿತಾಗಿ ಮಾತನಾಡುತ್ತಿವೆ.
ಕನ್ನಡತಿ ಧಾರವಾಹಿಯಲ್ಲಿ ಸದ್ಯ ಕನ್ನಡದ ಮದುವೆಯಲ್ಲಿ ನಾಯಕ-ನಾಯಕಿಯ ಮದುವೆಯಾಗುತ್ತಿದ್ದು, ಸದ್ಯಕ್ಕೆ ಧಾರವಾಹಿಯಲ್ಲಿ ಹರ್ಷ ಭುವಿ ಮದುವೆಯಾಗುತ್ತಿತ್ತು. ಕನ್ನಡದ ಮದುವೆ ಎನ್ನುವ ಹೆಸರಿನಲ್ಲಿ ಅದ್ದೂರಿ ಮದುವೆ ಸಂಚಿಕೆಗಳನ್ನು ಚಿತ್ರಿಸಲಾಗಿದ್ದು, ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದೆ. ಆದರೆ ಕಥೆಯ ನಡುವೆ ಈಗ ಹರ್ಷನನ್ನು ತಾನೆ ಮದುವೆಯಾಗಬೇಕು ಎಂದು ವರು ಭುವಿ ಹಿಂದೆ ಬೇಡುತ್ತಿದ್ದಾಳೆ. ಕತೆ ಕುತೂಹಲಕಾರಿ ಘಟ್ಟ ತಲುಪಿರುತ್ತದೆ. ಹರ್ಷ ಈಗ ಯಾರನ್ನು ಮದುವೆಯಾಗುತ್ತಾನೆ ಎನ್ನುವ ಕುತೂಹಲಕ್ಕೆ ಕಾರಣವಾಗಿದೆ.
Comments are closed.