ತಾಯಿಯಾದ ಖುಷಿಯನ್ನು ಎಂಜಾಯ್ ಮಾಡುತ್ತಿರುವಾಗ ತಾಳ್ಮೆ ಕಳೆದುಕೊಂಡ ಆಲಿಯಾ, ಮೀರಿ ಮೀರಿ ಕೋಪ ಮಾಡಿಕೊಂಡದ್ದು ಯಾಕೆ ಗೊತ್ತೆ?
ಬಾಲಿವುಡ್ ಬೆಡಗಿ ಆಲಿಯಾ ಭಟ್ ಗರ್ಭಿಣಿ ಆಗಿರುವ ವಿಚಾರ ಎಲ್ಲೆಡೆ ಜೋರಾಗಿ ಸದ್ದು ಮಾಡುತ್ತಿದೆ. ಈ ವಿಷಯವನ್ನು ಸ್ವತಃ ಆಲಿಯಾ ಅವರೇ, ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಪಡಿಸಿದ್ದಾರೆ. ಆಲಿಯಾ ಭಟ್ ಅವರು ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಬಹುಕಾಲದಿಂದ ಪ್ರೀತಿ ಮಾಡುತ್ತಿದ್ದ ರಣಬೀರ್ ಕಪೂರ್ ಅವರೊಡನೆ ಮದುವೆಯಾದರು. ರಣಬೀರ್ ಕಪೂರ್ ಅವರ ಜೊತೆಗೆ ಬಹಳ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ಆಲಿಯಾ ಭಟ್. ಸಧ್ಯಕ್ಕೆ ಆಲಿಯಾ ಭಟ್ ವಿದೇಶದಲ್ಲಿದ್ದಾರೆ. ಆಕೆ ಮನೆಗೆ ಬರುತ್ತಿದ್ದು, ಆಕೆಯನ್ನು ಕರೆತರಲು ರಣಬೀರ್ ಕಪೂರ್ ವಿದೇಶಕ್ಕೆ ತೆರಳುತ್ತಿದ್ದಾರೆ ಎಂಬ ಸುದ್ದಿಯಿದೆ.
ಆದರೆ, ಈ ಸುದ್ದಿಗೆ ಆಲಿಯಾ ಭಟ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ತಾನು ಮಹಿಳೆ, ಪಾರ್ಸೆಲ್ ಅಲ್ಲ, ಯಾರ ಸಹಾಯವೂ ಇಲ್ಲದೆ ಮುಂಬೈಗೆ ಒಬ್ಬಂಟಿಯಾಗಿ ಬರಬಹುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಲವಾದ ವಿವರಣೆಯನ್ನು ನೀಡಿದ್ದಾರೆ ನಟಿ ಆಲಿಯಾ ಭಟ್. ತಾಯಿಯಾಗಲಿರುವ ಆಲಿಯಾ ಭಟ್ ಅವರಿಗೆ ಅಸಹನೆ ಯಾಕೆ? ಮುಂಬೈಗೆ ಬಂದ ನಂತರ ಕೆಲ ದಿನ ವಿಶ್ರಾಂತಿ ಪಡೆಯುತ್ತೇನೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಆ ಕಾರಣಕ್ಕೆ ಆಕೆಗೆ ಅಷ್ಟು ಕೋಪವೇಕೆ? ತಾನು ನಟನೆ ಮಾಡುತ್ತಿರುವ ಯಾವ ಸಿನಿಮಾವೂ ನಿಂತು ಹೋಗುವುದಿಲ್ಲ ಎಂದು ಆಲಿಯಾ ಭಟ್ ಗಟ್ಟಿಯಾಗಿ ಹೇಳಿದ್ದಾರೆ.
2022ಪೂರ್ತಿ ಇದು ನಡೆಯುತ್ತದೆ ಎಂದು ಹೇಳಿ, ‘ಶಾಟ್‌ಗೆ ಹೋಗಬೇಕು’ ಎಂದು ಆಲಿಯಾ ಭಟ್ ಅವರು ಎದ್ದು ಹೋಗಿದ್ದಾರೆ. ವಾಸ್ತವವಾಗಿ, ಆಲಿಯಾ ಉಲ್ಲೇಖಿಸಿದ ಯಾವುದೇ ಮಾಧ್ಯಮ ಸುದ್ದಿಗಳಲ್ಲಿ ಆಕ್ಷೇಪಾರ್ಹ ಏನೂ ಆಗಿರಲಿಲ್ಲ.. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮದುವೆ ಕೆಲ ತಿಂಗಳುಗಳ ಹಿಂದೆ ನಡೆದಿತ್ತು. ಮದುವೆ ನಂತರ ಇದೀಗ ಆಲಿಯಾ ಭಟ್ ಗರ್ಭಿಣಿಯಾಗಿದ್ದಾರೆ. ಟ್ರೋಲಿಂಗ್ ಬಗ್ಗೆ ಅಸಹನೆ ಸಹ ಆಲಿಯಾ ಅವರಿಗೆ ಇದೆ. ಅದರಿಂದಲೇ ಮಾಧ್ಯಮದವರ ಮೇಲು ಸಹ ಆ ರೀತಿ ಪ್ರತಿಕ್ರಿಯೆ ನೀಡಿರಬಹುದು ಎಂದು ಹೇಳಲಾಗುತ್ತಿದೆ.
Comments are closed.