ಸಮಂತಾ ರವರ ಪ್ರೀತಿ ಮಾಡಿ ಮದುವೆಯಾಗುವ ಮುನ್ನ ನಾಗ ಚೈತನ್ಯ ಪ್ರೀತಿ ಮಾಡಿದ್ದು ಯಾರನ್ನು ಗೊತ್ತೇ?? ಮೊದಲ ಲವ್ ಯಾವ ಹುಡುಗಿಯಂತೆ ಗೊತ್ತೇ?
ಟಾಲಿವುಡ್ ನ ರೀಲ್ ಕಂ ರಿಯಲ್ ಜೋಡಿಗಳಲ್ಲಿ ಕ್ಯೂಟ್ ಜೋಡಿಯಾಗಿದ್ದ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ರುತ್ ಪ್ರಭು ಜೊತೆ ಜೊತೆಯಾಗಿಯೇ ಸಿನಿಮಾ ರಂಗಕ್ಕೆ ಬಂದು ಪ್ರೀತಿಯ ಲೋಕಕ್ಕೆ ಇಳಿದು, ಬಹಳ ಸಮಯ ಪ್ರೀತಿಸಿ ಮದುವೆ ಮಾಡಿಕೊಂಡರು. ಟಾಲಿವುಡ್ ಆಪಲ್ ಬ್ಯುಟಿ ನಗುವಿನ ಮೂಲಕವೇ ಬೆಳದಿಂಗಳು ಹರಿಸುವ ಕ್ಯೂಟಿ ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ತಾವಿಬ್ಬರು ದೂರ ಆಗುತ್ತಿರುವ ಬಗ್ಗೆ ಅಧಿಕೃತವಾದ ಹೇಳಿಕೆಗಳನ್ನು ನೀಡಿದರು. ಸೋಷಿಯಲ್ ಮೀಡಿಯಾ ಮೂಲಕ ತಾವಿಬ್ಬರು ಬೇರೆ ಆಗುತ್ತಿರುವ ಬಗ್ಗೆ ತಿಳಿಸಿದ ಚೈತನ್ಯ ಮತ್ತು ಸಮಂತಾ ಕೆರಿಯರ್ ಬಗ್ಗೆ ಗಮನ ಹರಿಸುತ್ತಿದ್ದಾರೆ.
ಇಬ್ಬರು ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರು ದೂರವಾಗಲು ಪಾತ್ರಗಳ ವಿಚಾರದಲ್ಲಿ ಸಮಂತಾ ಮಾಡಿದ ಆಯ್ಕೆ, ನಾಗಚೈತನ್ಯ ಅವರಿಗೆ ಸಮಂತಾ ಮಾಡುತ್ತಿರುವ ಪಾತ್ರಗಳು ಇಷ್ಟವಾಗುತ್ತಿರಲಿಲ್ಲ ಎಂದು ಸುದ್ದಿಗಳು ಕೇಳಿ ಬಂದಿದ್ದವು. ಸಮಂತಾ ಅವರ ಕೆರಿಯರ್ ಗ್ರಾಫ್ ಅದ್ಭುತವಾಗಿ ಸಾಗುತ್ತಿದೆ. ಇತ್ತ ನಾಗಚೈತನ್ಯ ಅವರು ಸಹ ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಾಗಚೈತನ್ಯ ಮತ್ತು ರಾಶಿ ಖನ್ನಾ ಅಭಿನಯಿಸಿರುವ ಥ್ಯಾಂಕ್ ಯೂ ಸಿನಿಮಾ ಬಿಡುಗಡೆ ಆಗಲಿದೆ. ಇದೀಗ ನಾಗಚೈತನ್ಯ ಅವರಿಗೆ ಸಮಂತಾ ಅವರಿಗಿಂತ ಮೊದಲು, ಮತ್ತೊಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎನ್ನುವ ವಿಚಾರ ಈಗ ಜೋರಾಗಿ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಥ್ಯಾಂಕ್ ಯೂ ಸಿನಿಮಾದ ಹಾಡೊಂದು ಕಾಲೇಜಿನಲ್ಲಿ ಬಿಡುಗಡೆ ಆಯಿತು. ಸಾಂಗ್ ರಿಲೀಸ್ ಸಮಯದಲ್ಲಿ ತಮ್ಮ ಕಾಲೇಜು ದಿನಗಳ ಬಗ್ಗೆ ಮಾತನಾಡಿದ ನಾಗಚೈತನ್ಯ, ಕಾಲೇಜಿಗೆ ಬಂದರೆ ಬೇಸರವಾಗುತ್ತದೆ ಹಳೆಯ ದಿನಗಳು ನೆನಪಾಗುತ್ತದೆ ಎಂದು ಹೇಳಿಕೊಂಡಿರುವ ಅವರು, ಕಾಲೇಜು ದಿನಗಳಲ್ಲಿ ಒಬ್ಬ ಹುಡುಗಿಯನ್ನು ಪ್ರೀತಿ ಮಾಡಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆದರೆ ನಾಗಚೈತನ್ಯ ಅವರು ಪ್ರೀತಿ ಮಾಡಿದ್ದ ಹುಡುಗಿ ಯಾರು ಎನ್ನುವುದು ಬಹಿರಂಗವಾಗಿಲ್ಲ. ಒಟ್ಟಿನಲ್ಲಿ ಸಮಂತಾ ಅವರಿಗಿಂತ ಮೊದಲು ನಾಗಚೈತನ್ಯ ಮತ್ತೊಬ್ಬ ಹುಡುಗಿಯನ್ನು ಇಷ್ಟಪಟ್ಟಿದ್ದರು ಎನ್ನುವ ಸುದ್ದಿ ಮಾತ್ರ ಜೋರಾಗಿ ಸದ್ದು ಮಾಡುತ್ತಿದೆ.
Comments are closed.