ಇನ್ನು ಆರಂಭವಾಯಿತು ಅದೃಷ್ಟ: ಜುಲೈ 2 ರಿಂದ ನಾಲ್ಕು ರಾಶಿಯವರಿಗೆ ಮುಗಿಯಿತು ಎಲ್ಲಾ ಕಷ್ಟ ಕಾಲ. ಯಾವ್ಯಾವ ರಾಶಿಯವರಿಗೆ ಗೊತ್ತೇ?
ಗ್ರಹಗಳ ಸ್ಥಾನ ಬದಲಾವಣೆ, ಗ್ರಹಗಳ ಸಂಯೋಜನೆ ಇದೆಲ್ಲವೂ ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಜುಲೈ 2ರಂದು ಬುಧ ಗ್ರಹವು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈಗಾಗಲೇ ಸೂರ್ಯನು ಕೂಡ ಮಿಥುನ ರಾಶಿಯಲ್ಲಿದ್ದು, ಜುಲೈ 2ರಂದು ಮಿಥುನ ರಾಶಿಯಲ್ಲಿ ಸೂರ್ಯ ಮತ್ತು ಬುಧ ಇಬ್ಬರು ಇರಲಿದ್ದಾರೆ. ಇದರಿಂದಾಗಿ ಹಲವು ರಾಶಿಗಳಿಗೆ ಶುಭಫಲ ಸಿಗಲಿದೆ. ಸೂರ್ಯನು ಯಶಸ್ಸು, ಆತ್ಮವಿಶ್ವಾಸ, ಗೌರವ ಉನ್ನತ ಯಶಸ್ಸಿನ ಸಂಕೇತವಾದರೆ, ಬುಧನು ಬುದ್ಧಿವಂತಿಕೆ, ತರ್ಕ, ಸಂಭಾಷಣೆ, ಗಣಿತದ ಸಂಕೇತ. ಈ ಎರಡು ಗ್ರಹಗಳು ಮಿಥುನ ರಾಶಿಗೆ ಬರುವುದರಿಂದ 4 ರಾಶಿಗಳಿಗೆ ಶುಭಫಲ ಇದೆ, ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಕುಂಭ ರಾಶಿ :- ಸೂರ್ಯ ಮತ್ತು ಬುಧ ಜೊತೆಯಾಗುತ್ತಿರುವುದರಿಂದ ಕುಂಭ ರಾಶಿಯವರಿಗೆ ಶುಭಫಲ ಸಿಗಲಿದೆ. ಶುಭಯೋಗ ಉಂಟಾಗಲಿದೆ. ಒಳ್ಳೆಯ ಕಾರ್ಯಗಳು ನಡೆಯುತ್ತವೆ. ಹೆಚ್ಚಿನ ಹಣ ಸಿಗುವ ಸೂಚನೆ ಇದೆ.
ಧನು ರಾಶಿ :- ಈ ರಾಶಿಯವರಿಗೆ ಸೂರ್ಯ ಮತ್ತು ಬುಧ ಒಳ್ಳೆಯ ಫಲವನ್ನು ತಂದುಕೊಡುತ್ತಾರೆ. ಇಷ್ಟು ದಿನಗಳ ಕಠಿಣ ಪರಿಶ್ರಮದ ಫಲವನ್ನು ಈ ರಾಶಿಯವರು ಪಡೆಯುತ್ತಾರೆ. ಹಣದ ಹರಿವು ಸಹ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ :- ಸೂರ್ಯ ಮತ್ತು ಬುಧನ ಸಮಾಗಮದ ಈ ಸಮಯದಲ್ಲಿ ಆಸ್ತಿ, ಮನೆ, ಖರೀದಿ, ವಾಹನ ಖರೀದಿ ಮಾಡುವ ಯೋಗವಿದೆ. ಒಳ್ಳೆಯ ಯೋಗ ಕೂಡಿಬರಲಿದೆ. ಒಂದು ವೇಳೆ ಹೂಡಿಕೆ ಮಾಡುವ ಯೋಜನೆ ಇದ್ದರೆ, ಎರಡು ಸಾರಿ ಯೋಚನೆ ಮಾಡಿ, ಹೂಡಿಕೆ ಮಾಡಿ.
ಮಿಥುನ ರಾಶಿ :- ಸೂರ್ಯ ಮತ್ತು ಬುಧನ ಸಮಾಗಮದಿಂದ ಮಿಥುನ ರಾಶಿಯವರಿಗೆ ಬಹಳ ಅನುಕೂಲ ತಂದುಕೊಡಲಿದೆ. ನಿಂತಿದ್ದ, ಕೈಕೊಟ್ಟಿರುವ ಎಲ್ಲಾ ಕೆಲಸಗಳು ಈಗ ಯಶಸ್ವಿಯಾಗಲಿದೆ. ನಿಮ್ಮ ಊಹೆಗೂ ನಿಲುಕದ ಯಶಸ್ಸು ಸಿಗುತ್ತದೆ.
Comments are closed.