ದೊರೆಸಾನಿ ಧಾರಾವಾಹಿಯಲ್ಲಿ ಹೊಸ ಪಾತ್ರಧಾರಿಯಾಗಿ ಬಂದಿರುವ ಹೊಸ ನಟನ ಹಿನ್ನೆಲೆ ಏನು ಗೊತ್ತೇ??
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದೊರಸಾನಿ ಧಾರವಾಹಿ ಎಲ್ಲರ ಗಮನ ಸೆಳೆದಿದೆ. ಕೆಲವು ತಿಂಗಳುಗಳಿಂದ ಪ್ರಸಾರವಾಗುತ್ತಿರುವ ಈ ಧಾರವಾಹಿ ವೀಕ್ಷಕರ ಫೇವರೆಟ್ ಲಿಸ್ಟ್ ಗೆ ಸೇರಿದೆ ಎಂದರೆ ತಪ್ಪಾಗುವುದಿಲ್ಲ. ದೊರಸಾನಿ ಧಾರವಾಹಿ ಯಲ್ಲಿ ದೀಪಿಕಾಳನ್ನು ವಿಶ್ವನಾಥನ್ ಆನಂದ್ ತುಂಬಾ ಪ್ರೀತಿ ಮಾಡುತ್ತಿದ್ದಾನೆ, ಆದರೆ ದೀಪಿಕಾ ತಂದೆಗೆ ಕೆಲವು ಕಾರಣಗಳಿಂದ, ಆನಂದ್ ಇಷ್ಟವಿದ್ದರು, ಮಗಳನ್ನು ಅವನಿಗೆ ಕೊಟ್ಟು ಮದುವೆ ಮಾಡಲು ಆಗುತ್ತಿಲ್ಲ. ಇವರಿಬ್ಬರ ಮದುವೆಗೆ ದೀಪಿಕಾ ತಂದೆಯೇ ಅಡ್ಡವಾಗಿದ್ದಾರೆ.
ದೀಪಿಕಾಳನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಆನಂದ್ ಅಂದುಕೊಂಡಿದ್ದು, ಇದೀಗ ದೀಪಿಕಾಳನ್ನು ತನ್ನ ಬೆಸ್ಟ್ ಫ್ರೆಂಡ್ ಮದುವೆ ಆಗಬೇಕು ಎಂದು ತನ್ನ ಫ್ರೆಂಡ್ ನನ್ನು ಕರೆಸಿದ್ದಾರೆ ಆನಂದ್. ಈ ಮೂಲಕ ದೊರಸಾನಿ ಧಾರವಾಹಿಗೆ ಹೊಸ ಪಾತ್ರದ ಎಂಟ್ರಿ ಆಗಿದೆ. ಆನಂದ್ ಫ್ರೆಂಡ್ ಪಾತ್ರದಲ್ಲಿ ದೊರಸಾನಿ ಧಾರವಾಹಿಗೆ ಎಂಟ್ರಿ ಕೊಟ್ಟಿರುವುದು ನಟ ಸುಶ್ಮಿತ್ ಜೈನ್. ಇವರು ಈಗಾಗಲೇ ಕಿರುತೆರೆಯಲ್ಲಿ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಉದಯ ಟಿವಿ ಯ ಕನ್ಯಾದಾನ ಧಾರವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದರು. ಇನ್ನು ಕೆಲವು ಧಾರವಾಹಿಗಳಲ್ಲಿ ಸಹ ನಟಿಸಿ ಅನುಭವ ಇದೆ ಸುಶ್ಮಿತ್ ಜೈನ್ ಅವರಿಗೆ. ಇದೀಗ ದೊರಸಾನಿ ಧಾರವಾಹಿ ಮೂಲಕ ಹೊಸ ಧಾರಾವಾಹಿಗೆ ಬರುತ್ತಿದ್ದಾರೆ ಸುಶ್ಮಿತ್ ಜೈನ್.
ದೊರಸಾನಿ ಧಾರವಾಹಿಯಲ್ಲಿ ಸುಶ್ಮಿತ್ ಜೈನ್ ಅವರದ್ದು ಮುಖ್ಯವಾದ ಪಾತ್ರ ಎನ್ನಲಾಗಿದ್ದು, ಇವರ ಪಾತ್ರ ಬಹಳ ದೊಡ್ಡ ಟ್ವಿಸ್ಟ್ ಗಳನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತಿದೆ. ಹೊಸ ಧಾರವಾಹಿ, ಹೊಸ ಪಾತ್ರ ಹೊಸ ಉತ್ಸಾಹವನ್ನು ದೊರಸಾನಿ ಧಾರವಾಹಿಗೆ ತಂದಿದ್ದು ಮುಂದಿನ ದಿನಗಳಲ್ಲಿ ಧಾರವಾಹಿ ಇನ್ನಷ್ಟು ಇಂಟರೆಸ್ಟಿಂಗ್ ಆಗಿರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈಗ ಆನಂದ್ ಮಾಡುತ್ತಿರುವ ಹಾಗೆ ದೀಪಿಕಾ ಮದುವೆ ಆನಂದ್ ಸ್ನೇಹಿತನ ಜೊತೆಗೆ ಆಗುತ್ತಾ ಅಥವಾ ಆನಂದ್ ಜೊತೆಗೆ ಆಗುತ್ತಾ ಎಂದು ಕಾದು ನೋಡಬೇಕಿದೆ
Comments are closed.