ಮದುವೆಯ ಕುರಿತು ಸಾಕಷ್ಟು ಸುದ್ದಿಗಳ ನಡುವೆಯೂ ಕೂಡ ಸಿಹಿ ಸುದ್ದಿ ಹಂಚಿಕೊಂಡ ಸುಚೇಂದ್ರ ಪ್ರಸಾದ್. ಏನಂತೆ ಗೊತ್ತೇ?
ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಅವರು ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡದ ಅದ್ಭುತವಾದ ನಟ ಇವರು. ಕಮರ್ಷಿಯಲ್ ಸಿನಿಮಾಗಳು ಮತ್ತು ಕಲಾತ್ಮಕ ಸಿನಿಮಾಗಳು ಎರಡು ಸಿನಿಮಾಗಳಲ್ಲೂ ಸಹ ನಟಿಸಿ ಹಲವು ಅವಾರ್ಡ್ ಗಳನ್ನು ಸಹ ಗೆದ್ದಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಸಾಹಿತ್ಯದಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇತ್ತು. ಸಿನಿಮಾ ಮತ್ತು ಧಾರವಾಹಿಗಳಿಗೆ ದೃಶ್ಯಗಳನ್ನು ಸಂಯಿಜಾನೆ ಮಾಡುವುದು, ನೃತ್ಯ ಸಂಯೋಜನೆ ಮಾಡುವುದು ಮಾಡುತ್ತಿದ್ದರು. ಇವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು 1999ರಲ್ಲಿ.
ಧಾರವಾಹಿಗಳಲ್ಲಿ ಜನಪ್ರಿಯತೆ ಸಿಕ್ಕಿದ ಬಳಿಕ, ಸುಚೇಂದ್ರ ಪ್ರಸಾದ್ ಅವರು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಹಲವು ವರ್ಷಗಳ ಕಾಲ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸುಚೇಂದ್ರ ಪ್ರಸಾದ್. ಸಿನಿಮಾಗಳಲ್ಲಿ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. 1999ರಲ್ಲಿ ಕಾನೂರು ಹೆಗ್ಗಡತಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಂತರ ಬೇರು, ತುತ್ತೂರಿ, ಬೆಟ್ಟದ ಜೀವ ಹಾಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2007ರಲ್ಲಿ ಇವರು ನಟಿ ಪವಿತ್ರ ಲೋಕೇಶ್ ಅವರೊಡನೆ ಮದುವೆಯಾದರು. ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಪ್ರಸ್ತುತ ಪವಿತ್ರಾ ಲೋಕೇಶ್ ಅವರು ನಟ ನರೇಶ್ ಅವರ ಜೊತೆಗೆ ಮೂರನೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಇಷ್ಟೆಲ್ಲಾ ಸುದ್ದಿಗಳ ಬಳಿಕ ಈಗ ಸುಚೇಂದ್ರ ಪ್ರಸಾದ್ ಅವರು ಗುಡ್ ನ್ಯೂಸ್ ನೀಡಿದ್ದಾರೆ.
ಸುಚೇಂದ್ರ ಪ್ರಸಾದ್ ಅವರು ಪ್ರಸ್ತುತ ನಿರ್ದೇಶನದಲ್ಲಿ ಬ್ಯುಸಿ ಆಗಿದ್ದಾರೆ. 1970ರಲ್ಲಿ ಪದ್ಮಶ್ರೀ ಪುರಸ್ಕೃತರಾದ ದೊಡ್ಡರಂಗೇಗೌಡರು ಬರೆದಿರುವ 10 ಗೀತೆಗಳನ್ನು ಚಿತ್ರೀಕರಿಸಿ ನಿರ್ದೇಶನ ಮಾಡುತ್ತಿದ್ದಾರೆ. ಸುಚೇಂದ್ರ ಪ್ರಸಾದ್ ಅವರು ಈ ಕೆಲಸವನ್ನು ಬಹಳ ಸಂತೋಷದಿಂದ ಮಾಡುತ್ತಿದ್ದು, ಈಗಾಗಲೇ ಎರಡು ಹಾಡುಗಳನ್ನು ಚಿತ್ರೀಕರಣ ಮಾಡಿದ್ದಾರಂತೆ. ಇನ್ನು ಎರಡು ಹಾಡುಗಳ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಬಹಳ ಬೇಗ ನಿರ್ದೇಶನ ಮಾಡಿ ಮುಗಿಸುವ ಪ್ಲಾನ್ ಮಾಡಿಕೊಂಡಿದ್ದಾರೆ ಸುಚೇಂದ್ರ ಪ್ರಸಾದ್ ಅವರು. ಈ ಹಾಡುಗಳಿಗೆ ಸಿ.ಅಶ್ವಥ್ ಅವರು ಸಂಗೀತ ನೀಡಿದ್ದರು, ಹಾಗೂ ಎಸ್.ಪಿ.ಬಿ ಅವರು ಹಾಡಿದ್ದು, ಈ ಹಾಡುಗಳನ್ನು ನಿರ್ದೇಶನ ಮಾಡಿ ಚಿತ್ರೀಕರಣ ಮಾಡುತ್ತಿದ್ದಾರೆ.
Comments are closed.