ನಟಿ ಮೀನಾ ರವರ ಪತ್ನಿ ಇದ್ದಕ್ಕಿದ್ದ ಹಾಗೆ ಅಗಲಿದ ನಂತರ ತಿಳಿದು ಬಂತು ಅಸಲಿ ಸತ್ಯ. ಇಷ್ಟಕ್ಕೆ ಈಗೆಲ್ಲ ಆಗಿತ್ತ??
ಬಹುಭಾಷಾ ನಟಿ ಮೀನಾ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವವರು, ನಾಯಕಿಯಾಗಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿ ಮೀನಾ ಮಿಂಚಿದ್ದಾರೆ. ಈಗ ಪೋಷಕ ಪಾತ್ರಗಳಲ್ಲಿ ಹಾಗೂ ಕೆಲಬು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮೊನ್ನೆಯಷ್ಟೇ ನಟಿ ಮೀನಾ ಅವರ ಜೀವನದಲ್ಲಿ ದೊಡ್ಡ ದುರಂತ ನಡೆಯಿತು. ಅದೇನೆಂದರೆ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ಇದ್ದಕ್ಕಿದ್ದ ಹಾಗೆ ವಿಧಿವಶರಾದರು. ವಿದ್ಯಾಸಾಗರ್ ಅವರಿಗೆ ಈ ರೀತಿ ಆಗಿದ್ದು, ನಿಜಕ್ಕೂ ಎಲ್ಲರಿಗೂ ದೊಡ್ಡ ಶಾಕ್ ನೀಡಿತ್ತು. ಈ ರೀತಿ ಆಗಲು ಕಾರಣ ಏನು ಎನ್ನುವ ಸುದ್ದಿ ಈಗ ಪ್ರಶ್ನೆ ಆಗಿ ನಿಂತಿದೆ.
ನಟಿ ಮೀನಾ ಅವರ ಪತಿ ವಿದ್ಯಾಸಾಗರ್, ಕೆಲವು ವರ್ಷಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಅವರ ಆರೋಗ್ಯ ಸಮಸ್ಯೆ ಹೆಚ್ಚಾಗಿ, ವೈದ್ಯರು ಎಷ್ಟೇ ಪ್ರಯತ್ನ ಪಟ್ಟರು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಸಮಸ್ಯೆ ಶುರುವಾಗಲು ಕಾರಣ ಪರಿವಾಳದ ಹಿಕ್ಕೆ ಎನ್ನುವ ಮಾಹಿತಿ ಸಿಕ್ಕಿದೆ. ಮೀನಾ ಮತ್ತು ವಿದ್ಯಾಸಾಗರ್ ಅವರು ವಾಸ ಮಾಡುತ್ತಿರುವ ಮನೆಯ ಹತ್ತಿರ ಸಾಕಷ್ಟು ಪಾರಿವಾಳಗಳಿದ್ದು, ಅದರ ಹಿಕ್ಕೆ ಇರುವ ಗಾಳಿಯನ್ನು ಉಸಿರಾಡಿದ ಕಾರಣ, ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಅಲರ್ಜಿ ಶುರುವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಧ್ಯಯನಗಳ ಪ್ರಕಾರ, ಪಾರಿವಾಳದ ಹಿಕ್ಕೆಯಿಂದ ಈ ರೀತಿ ಗಂಭೀರ ಸಮಸ್ಯೆಗಳು ಆಗಬಹುದು ಎಂದು ತಿಳಿದುಬಂದಿದೆ.
ಮೀನಾ ಅವರ ಇಡೀ ಕುಟುಂಬಕ್ಕೆ ಈ ವರ್ಷ ಜನವರಿ ತಿಂಗಳಿನಲ್ಲಿ ಕೋವಿಡ್ ಸೋಂಕು ಉಂಟಾಗಿತ್ತು, ಆಗಿನಿಂದ ವಿದ್ಯಾಸಾವರ್ ಅವರಿಗೆ ಇರುವ ಸಮಸ್ಯೆ ಉಲ್ಬಣವಾಗಿದೆ ಎಂದು ತಿಳಿದುಬಂದಿದೆ. ವಿದ್ಯಾಸಾಗರ್ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಇವರಿಗೆ ಶ್ವಾಸಕೋಶದ ಕಸಿ ಮಾಡಿಸಿಕೊಳ್ಳಲು ಹೇಳಿದ್ದರು. ಆದರೆ ದಾನಿಗಳು ಸರಿಯಾಗಿ ಸಿಕ್ಕಿರಲಿಲ್ಲ ಎನ್ನಲಾಗಿದೆ. ಶ್ವಾಸಕೋಶದ ಕಸಿಯನ್ನು ಬ್ರೇನ್ ಡೆಡ್ ಆಗಿರುವ ವ್ಯಕ್ತಿಯಿಂದ ಮಾತ್ರ ಪಡೆಯಬಹುದು, ಹಾಗಾಗಿ ತೊಂದರೆ ಆಗಿ, ಮೀನಾ ಅವರ ಪತಿಗೆ ಶ್ವಾಸಕೋಶದ ಕಸಿ ಮಾಡಿಸಲು ಸಾಧ್ಯವಾಗಿಲ್ಲ. ವೈದ್ಯರು ಔಷಧಿಗಳ ಮೂಲಕ ಗುಣಮಾಡುವ ಪ್ರಯತ್ನ ಮಾಡಿದ್ದು ಪ್ರಯೋಜನವಾಗಿಲ್ಲ. ಈ ಕಾರಣದಿಂದ ವಿದ್ಯಾಸಾಗರ್ ಅವರು ವಿಧಿವಶರಾಗುವ ಹಾಗೆ ಆಗಿದೆ.
Comments are closed.