ಗುಸು ಗುಸುಗಳ ಕುರಿತು ಬ್ರೇಕ್ ಹಾಕಿದ ನಟ ನರೇಶ್, ಬಹಿರಂಗವಾಗಿ ಎಲ್ಲರಿಗೂ ಸವಾಲ್ ಹಾಕಿ ಹೇಳಿದ್ದೇನು ಗೊತ್ತೇ?? ಇವರ ಬಗ್ಗೆ ಯಾರನ್ನು ಕೇಳಬೇಕಂತೆ ಗೊತ್ತೇ?
ತೆಲುಗಿನ ಖ್ಯಾತ ನಟ ನರೇಶ್ ಅವರು ಈಗಾಗಲೇ ಮೂರು ಮದುವೆ ಆಗಿ, ಚಂದನವನದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ಜೊತೆ ನಾಲ್ಕನೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿಗಳು ಜೋರಾಗುಗೆ ಸದ್ದು ಮಾಡುತ್ತಿದೆ. ನರೇಶ್ ಅವರ ಬಗ್ಗೆ ಸಾಕಷ್ಟು ವಿಚಾರಗಳು ಸಹ ಹೊರಬರುತ್ತಿದೆ. ಪವಿತ್ರಾ ಲೋಕೇಶ್ ಅವರು ಈಗಾಗಲೇ ಕನ್ನಡದ ನಟ ಸುಚೇಂದ್ರ ಪ್ರಸಾದ್ ಅವರೊಡನೆ ಎರಡನೇ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಪವಿತ್ರಾ ಲೋಕೇಶ್ ಅವರು ಮೂರನೆ ಬಾರಿ ನರೇಶ್ ಅವರೊಡನೆ ಮದುವೆ ಆಗಿದ್ದಾರೆ ಎನ್ನುವ ವಿಚಾರ ಸುದ್ದಿಯಾಗಿತ್ತು. ಪವಿತ್ರಾ ಲೋಕೇಶ್ ಅವರು ಕನ್ನಡ ಚಿತ್ರರಂಗದಲ್ಲಿ 20 ವರ್ಷಕ್ಕಿಂತ ಹೆಚ್ಚು ಸಮಯದಿಂದ ಸಕ್ರಿಯರಾಗಿದ್ದಾರೆ. 150ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಹ ನಟಿಸಿ ಒಳ್ಳೆಯ ಹೆಸರು ಪಡೆದಿದ್ದಾರೆ. ನರೇಶ್ ಅವರ ಜೊತೆಗೆ ಸಹ ಪವಿತ್ರಾ ಲೋಕೇಶ್ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ಆ ಸಮಯದಿಂದಲೇ ಇಬ್ಬರ ನಡುವೆ ಸ್ನೇಹ, ಪ್ರೇಮ ಶುರುವಾಗಿದೆ ಎನ್ನಲಾಗುತ್ತಿದೆ. ಇವರಿಬ್ಬರು ಕೆಲವು ವರ್ಷಗಳಿಂದ ಲವಿನ್ ರಿಲೇಶನ್ಷಿಪ್ ನಲ್ಲಿದ್ದು ಯಾರಿಗೂ ಗೊತ್ತಾಗದ ಹಾಗೆ ನರೇಶ್ ಅವರೊಡನೆ ಪವಿತ್ರ ಲೋಕೇಶ್ ಅವರ ಮದುವೆ ನಡೆದಿದೆ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಪ್ರತಿಕ್ರಿಯೆ ನೀಡಿದ್ದರು. ಮಾಧ್ಯಮಗಳ ಎದುರು ಮಾತನಾಡಿ, ನರೇಶ್ ಅವರ ನಿಜವಾದ ಸ್ವಭಾವ ಹಾಗೂ, ಗಂಡನಿಂದ ತಮಗೆ ಆದ ಅನ್ಯಾಯದ ಬಗ್ಗೆ ತಿಳಿಸಿದ್ದರು.
ನರೇಶ್ ಹೆಣ್ಣುಬಾಕ ಎಂದಿದ್ದರು ರಮ್ಯಾ. ಅದಕ್ಕೆ ಉತ್ತರವಾಗಿ ನರೇಶ್ ಅವರು ನಿನ್ನೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ನಡೆಸಿ, ರಮ್ಯಾ ಅವರ ಬಗ್ಗೆ ಮಾತನಾಡಿದ್ದಾರೆ. ರಮ್ಯಾ ತಮ್ಮ ವಿರುದ್ಧ ಮಾಡಿರುವ ಆರೋಪ ಎಲ್ಲವೂ ಸುಳ್ಳು. ನಾನು 200ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಮತಿಸಿದ್ದಾರೆ. 200ಕ್ಕಿಂತ ಹೆಚ್ಚು ಹೀರೋಯಿನ್ ಗಳ ಜೊತೆಗೆ ಕೆಲಸ ಮಾಡಿದ್ದೀನಿ, ಒಬ್ಬರಾದರು ನನ್ನ ಬಗ್ಗೆ ಕೆಟ್ಟದಾಗಿ ಹೇಳ್ತಾರಾ, ಯಾರಿಗಾದರೂ ನಾನು ಹಿಂಸೆ ಕೊಟ್ಟಿದ್ದೀನಾ ಕೇಳಿ.. ರಮ್ಯಾ ರಘುಪತಿ ಅವರಿಂದ ನಾನು 8 ವರ್ಷಗಳಿಂದ ದೂರ ಇದ್ದೀನಿ. ಪವಿತ್ರಾ ಲೋಕೇಶ್ ಅವರನ್ನು ಭೇಟಿ ಮಾಡಿದ್ದು 4 ವರ್ಷಗಳ ಹಿಂದೆ.
ನಾವಿಬ್ಬರು ಒಳ್ಳೆಯ ಸ್ನೇಹಿತರು, ರಮ್ಯಾ ರಘುಪತಿ ಬೇರೆಯವರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾರೆ. ಅದರ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ. ನಾನು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ಆಕೆಯ ಎಲ್ಲವು ಸರಿ ಇರುವ ಹಾಗೆ ಕಾಣಿಸುತ್ತಾಳೆ, ಆದರೆ ಆಕೆಯ ಮಾನಸಿಕ ಆರೋಗ್ಯ ಚೆನ್ನಾಗಿಲ್ಲ. ಕೆಲಸಮಯದ ಹಿಂದೆ ಮನೋವೈದ್ಯರನ್ನು ಸಹ ಭೇಟಿ ಮಾಡಿದ್ದಳು. ಒಂದು ಕಲ್ಲಿನಲ್ಲಿ ಐದು ಹಕ್ಕಿ ಹೊಡೆಯುವ ಪ್ಲಾನ್ ಮಾಡಿದ್ದಾಳೆ. ಬೆಂಗಳೂರಿನಲ್ಲಿ ಹಲವು ಜನರಿಂದ ಸಾಲ ಪಡೆದಿದ್ದಾಳೆ, ಅದೆಲ್ಲದಕ್ಕೂ ನನ್ನ ಬಳಿ ಪ್ರೂಫ್ ಇದೆ..” ಎಂದು ರಮ್ಯಾ ರಘುಪತಿ ಅವರ ಬಗ್ಗೆ ಹೇಳಿದ್ದಾರೆ ನಟ ನರೇಶ್.
Comments are closed.