ಬಿಗ್ ಷಾಕಿಂಗ್: ಸುಚೇಂದ್ರ ಪ್ರಸಾದ್ ರವರ ಜೊತೆ ನಾನು ಮದುವೆನೇ ಆಗಿಲ್ಲ ಎಂದ ಪವಿತ್ರ ಲೋಕೇಶ್. ಆದರೆ ನಡೆದಿದ್ದೇ ಬೇರೆ. ಏನಾಗಿದೆ ಗೊತ್ತೇ?
ನಟಿ ಪವಿತ್ರಾ ಲೋಕೇಶ್ ಅವರ ಮೂರನೇ ಮದುವೆಯ ವಿಚಾರ ಎಲ್ಲೆಡೆ ಜೋರಾಗಿ ಚರ್ಚೆಯಾಗುತ್ತಿದೆ. ಪವಿತ್ರಾ ಲೋಕೇಶ್ ಅವರು ತೆಲುಗಿನ ಖ್ಯಾತ ನಟ ನರೇಶ್ ಅವರೊಡನೆ ಮೂರನೇ ಮದುವೆ ಆಗಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಈ ಬಗ್ಗೆ ಸುಚೇಂದ್ರ ಪ್ರಸಾದ್ ಅವರು ಮಾತನಾಡಿ, ಪವಿತ್ರಾ ಲೋಕೇಶ್ ಅವರ ಬಗ್ಗೆ ಮಾತನಾಡಿರುವುದು ಮಾಧ್ಯಮಗಳಲ್ಲಿ ವೈರಲ್ ಆಗಿತ್ತು, ಪವಿತ್ರಾ ಲೋಕೇಶ್ ಅವರು ಹಣದ ಆಸೆಗಾಗಿ ನರೇಶ್ ಅವರ ಜೊತೆ ಇದ್ದಾರೆ ಎಂದು ಸುಚೇಂದ್ರ ಪ್ರಸಾದ್ ಅವರು ಹೇಳಿದ್ದರು. ಇದೀಗ ಸುಚೇಂದ್ರ ಪ್ರಸಾದ್ ಅವರ ಮಾತಿಗೆ ಪವಿತ್ರಾ ಲೋಕೇಶ್ ಅವರು ಉತ್ತರ ಕೊಟ್ಟಿದ್ದಾರೆ.
ಪವಿತ್ರಾ ಲೋಕೇಶ್ ಅವರು ಸುದ್ದಿಗೋಷ್ಠಿ ನಡೆಸಿ, ಎಲ್ಲಾ ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ. “ಹಣಕ್ಕಾಗಿ ನಾನು ಈ ರೀತಿ ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ. ಸುಚೇಂದ್ರ ಪ್ರಸಾದ್ ಅವರ ಜೊತೆ ನಾನು 11 ವರ್ಷದಿಂದ ಇದ್ದೀನಿ. ಕಳೆದ 5ವರ್ಷಗಳಿಂದ ಅವರ ಜೊತೆಯಲ್ಲಿಲ್ಲ. ನಾನು ಅವರ ಜೊತೆ ಇದ್ದಾಗ, ಅವರ ಹತ್ರ ಕಾರ್, ಮನೆ, ಹಣ ಏನು ಇರಲಿಲ್ಲ. ನಾನು ಆ ರೀತಿ ಆಗಿದ್ದರೆ, 1 ವರ್ಷಕ್ಕೆ ಆ ಸಂಬಂಧ ನಿಂತು ಹೋಗ್ತಾ ಇತ್ತು. ಅಷ್ಟು ವರ್ಷಗಳ ಕಾಲ ಇರ್ತಾ ಇರ್ಲಿಲ್ಲ. ಅವರ ಒಳ್ಳೆಯತನ, ಅವರ ವಿದ್ಯಾಭ್ಯಾಸ ಇದೆಲ್ಲದಕ್ಕೂ ಬೆಲೆ ಕೊಟ್ಟು, ನಾನು ಅವರ ವ್ಯಕ್ತಿತ್ವಕ್ಕೆ ಲೋಪ ಬರದ ಹಾಗೆ ನಡೆದುಕೊಂಡಿದ್ದೇನೆ, ಯಾವ ವಿಷಯವನ್ನು ಸಹ ನಾನು ಬಾಯಿ ಬಿಟ್ಟಿಲ್ಲ.
ಜೀವನ ನಡೆಸೋಕೆ ಒಂದು ಕೆಲಸ ಬೇಕು, ಹಾಗೆ ಗಂಜಿ ತಿಂದುಕೊಂಡು ಇರೋದಕ್ಕೆ ಆಗಲ್ಲ. ನಾನು ಒಬ್ಬ ನಟಿ, ರೋಡಲ್ಲಿ ನಡೆದುಕೊಂಡು ಓಡಾಡೋದಕ್ಕೆ ಆಗಲ್ಲ. ನನಗೆ ಕಾರ್ ಬೇಕು, ಅದನ್ನ ಅತಿಯಾಸೆ ಹಣದ ಆಸೆ ಅಂತ ಹೇಳಿದ್ರೆ ಅದು ಅವರ ಮೂರ್ಖತನ. ಸುಚೇಂದ್ರ ಪ್ರಸಾದ್ ಅವರನ್ನು ನಾನು ಮದುವೆಯೂ ಆಗಿಲ್ಲ. ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಮಾತಾಡೋದಕ್ಕೆ ಇದು ಸರಿಯಾದ ಸಮಯ ಅಲ್ಲ, ಈಗ ನನ್ನ ಬಗ್ಗೆ ಅಪಪ್ರಚಾರ ಆಗುತ್ತಿದೆ. ಅದರ ಬಗ್ಗೆ ಸ್ಪಷ್ಟನೆ ಕೊಡೋದಕ್ಕೇ ಮಾಧ್ಯಮದ ಎದುರು ಬಂದಿದ್ದೇನೆ..” ಎಂದು ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಮಾತನಾಡಿದ್ದಾರೆ ಪವಿತ್ರಾ ಲೋಕೇಶ್.
Comments are closed.