ಕೊನೆಗೂ ಸಿಕ್ತು ಉತ್ತರ: ಕನ್ನಡತಿಯಲ್ಲಿ ರತ್ನಮ್ಮ ಪಾತ್ರದ ಮುಂದೇನು ಆಗಲಿದೆ ಗೊತ್ತೇ?? ಆಸ್ಪತ್ರೆಯಿಂದ ಮತ್ತೆ ವಾಪಸ್ಸು ಬರುವುದಿಲ್ಲವೇ??
ಕನ್ನಡತಿ ಧಾರವಾಹಿ ಈಗ ಎಲ್ಲರೂ ಕಾಯುತ್ತಿದ್ದ ಕ್ಷಣ ಕೊನೆಗೂ ನಡೆದಿದೆ. ಎಲ್ಲಾ ಸಮಸ್ಯೆ ಹಾಗೂ ತೊಂದರೆಗಕ ನಡುವೆಯೇ ಹರ್ಷ ಭುವಿಯ ಮದುವೆ ನಡೆಯಿತು. ವರುಧಿನಿ ಮತ್ತು ಸಾನಿಯಾ ಏನೇ ಮಾಡಿದರೂ ಸಹ, ಮದುವೆ ನಿಲ್ಲಿಸಲು ಆಗಲಿಲ್ಲ. ಅಡೆತಡೆಗಳ ನಡುವೆಯೇ ಹರ್ಷ ಭುವಿ ಮದುವೆ ನೆರವೇರಿದೆ. ಧಾರವಾಹಿಯಲ್ಲಿ ಹರ್ಷ ಭುವಿಯ ಮದುವೆ ಒಂದು ಕಡೆಯಾದರೆ, ಮತ್ತೊಂದು ಕಡೆ ಅಮ್ಮಮ್ಮನ ಆರೋಗ್ಯ. ಧಾರವಾಹಿ ಶುರು ಆದಾಗಿನಿಂದಲೂ ಅಮ್ಮಮ್ಮ ಅವರ ಆರೋಗ್ಯ ಚೆನ್ನಾಗಿಲ್ಲ ಎನ್ನುವ ಹಾಗೆಯೇ ತೋರಿಸಲಾಗಿತ್ತು.
ಹರ್ಷ ಭುವಿ ಮದುವೆ ಸಮಯದಲ್ಲಿ ಕೂಡ ಅಮ್ಮಮ್ಮನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅಭಿಮಾನಿಗಳು ಮತ್ತು ಕಿರುತೆರೆ ವೀಕ್ಷಕರು ಸಹ ಅಮ್ಮಮ್ಮನ ಪಾತ್ರ ಕೊನೆಯಾಗುತ್ತದೆ ಎಂದೇ ಅಂದುಕೊಂಡಿದ್ದರು. ಆದರೆ ಧಾರವಾಹಿಯಿಂದ ಅಮ್ಮಮ್ಮ ಈಗ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಮದುವೆ ನಂತರ ಎಲ್ಲರಿಗೂ ಬಾಯ್ ಹೇಳು ಹೊರಟಿದ್ದಾರೆ ಅಮ್ಮಮ್ಮ. ಹರ್ಷ ಭುವಿ ಮದುವೆ ಮುಗಿದ ನಂತರ ಅಮ್ಮಮ್ಮ ಆಸ್ಪತ್ರೆಗೆ ಸೇರಬೇಕು. ಹಾಗಾಗಿ ಅಮ್ಮಮ್ಮ ಎಲ್ಲರಿಗೂ ಬಾಯ್ ಹೇಳಿ ಹೊರಟಿದ್ದಾರೆ. ಇಲ್ಲಿನ ನಾವು ಹೇಳಲು ಹೊರಟಿರುವ ವಿಚಾರ ಬೇರೆಯೇ ಇದೆ. ಅಮ್ಮಮ್ಮ ಪಾತ್ರದಲ್ಲಿ ನಟಿಸುತ್ತಿರುವ ಚಿತ್ಕಲಾ ಬಿರಾದರ್ ಅವರು ಅಮೆರಿಕಾಗೆ ಹೋಗಿದ್ದಾರೆ.
ಮದುವೆ ಚಿತ್ರೀಕರಣ ಮುಗಿಸಿ ಚಿತ್ಕಲಾ ಬಿರಾದಾರ್ ಅವರು ಅಮೆರಿಕಾಗೆ ಹೊರಟಿದ್ದು, ಪ್ರಸ್ತುತ ಅವರು ಅಮೆರಿಕಾದಲ್ಲೇ ಇದ್ದಾರೆ. ಹಾಗಿದ್ದಮೇಲೆ ಅಮ್ಮಮ್ಮ ಅವರು ಇನ್ನುಮುಂದೆ ಕನ್ನಡತಿ ಧಾರವಾಹಿಯಲ್ಲಿ ಕಾಣಿಸಿಕೊಳ್ಳುವುದಿಲ್ಲವೇ ಎನ್ನುವ ವಿಚಾರ ಈಗ ಅಭಿಮಾನಿಗಳ ನಡುವೆ ಚರ್ಚೆಯಾಗುತ್ತಿದೆ. ಧಾರವಾಹಿಯಲ್ಲಿ ಇವರು ಹರ್ಷ ಭುವಿ ಮದುವೆ ಮುಗಿದ ಬಳಿಕ ಆಸ್ಪತ್ರೆಗೆ ಸೇರಿಕೊಳ್ಳಲಿದ್ದಾರೆ. ನಿಜ ಜೀವನದಲ್ಲಿ ಅಮೇರಿಕಾಗೆ ಹೋಗಿದ್ದಾರೆ. ಹಾಗಾಗಿ ಮುಂದಿನ ಎಪಿಸೋಡ್ ಗಳಲ್ಲಿ ಅಮ್ಮಮ್ಮ ಅವರ ಪಾತ್ರ ಕೊನೆಯಾಗುತ್ತಾ ಎನ್ನುವ ಚಿಂತೆ ಈಗ ಅಭಿಮಾನಿಗಳಲ್ಲಿ ಶುರುವಾಗಿದೆ.
Comments are closed.