Neer Dose Karnataka
Take a fresh look at your lifestyle.

ಅಸಲಿಗೆ ಪವಿತ್ರ, ನರೇಶ್ ವಿಚಾರದಲ್ಲಿ ಇಷ್ಟೆಲ್ಲ ಗಾಸಿಪ್ ಹರಡಲು ಕಾರಣವೇನು ಗೊತ್ತೇ?? ಅದೊಂದು ದುಬಾರಿ ಉಡುಗೊರೆ ಕಾರಣವಾಯಿತೆ?? ನರೇಶ್ ಕೊಟ್ಟ ಉಡುಗೊರೆ ಏನು ಗೊತ್ತೇ??

ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ಮದುವೆ ವಿಚಾರ ದೊಡ್ಡ ಮಟ್ಟಕ್ಕೆ ವಿವಾದವಾಗಿದೆ. ಮಾಧ್ಯಮಗಳ ತುಂಬೆಲ್ಲಾ ಇದೇ ಸುದ್ದಿ ಹರಿದಾಡುತ್ತಿದೆ. ತೆಲುಗು ಮತ್ತು ಕನ್ನಡ ಎರಡು ಮಾಧ್ಯಮಗಳಲ್ಲೂ ಚರ್ಚೆಯಾಗುತ್ತಿರುವುದು ನರೇಶ್ ಪವಿತ್ರಾ ಮದುವೆ ವಿಚಾರ. ಈ ವಿಷಯ ಶುರುವಾದ ಬಳಿಕ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಕನ್ನಡ ಮಾಧ್ಯಮಗಳಿಗೆ ಸಂದರ್ಶನ ನೀಡಿ, ನರೇಶ್ ಅವರ ಮೇಲೆ ಆರೋಪ ಮಾಡಿದ್ದಾರೆ..ಪವಿತ್ರಾ ಲೋಕೇಶ್ ಅವರ ಮೇಲು ಆರೋಪಗಳನ್ನು ಮಾಡಿದ್ದಾರೆ.

ನಟ ನರೇಶ್ ಅವರು ಸಹ ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ನಡೆಸಿ, ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಮ್ಯಾ ರಘುಪತಿ ಅವರಿಗೆ ಇವರಿಬ್ಬರ ಸ್ನೇಹದ ಮೇಲೆ ಅನುಮಾನ ಮೂಡಿದ್ದು ಯಾಕೆ ಎಂದು ತಿಳಿಸಿದ್ದಾರೆ. ನರೇಶ್ ಅವರು ಹೇಳಿರುವುದು ಏನೆಂದರೆ, “ಪವಿತ್ರಾ ಲೋಕೇಶ್ ಅವರು ಶಿವನನ್ನು ಆರಾಧಿಸುತ್ತಾರೆ. ಶಿವನ ಪರಮಭಕ್ತೆ ಅವರು, ಹಾಗಾಗಿ ಅವರು ಒಂದು ಸ್ಕ್ರಿಪ್ಟ್ ಮಾಡುತ್ತಿದ್ದು, ಅದಕ್ಕೆ ಸಹಾಯ ಮಾಡಿ ಎಂದು ನನ್ನನ್ನು ಕೇಳಿದರು. ಅದು ಅವರು ನಿರ್ದೇಶನ ಮಾಡುತ್ತಿದ್ದಾರೆ, ನಾನು ಸ್ಪಾನ್ಸರ್ ಮಾಡಿದೆ. ನಾವಿಬ್ಬರು ಒಂದು ದೇವಸ್ಥಾನವನ್ನು ದತ್ತು ಪಡೆದೆವು, ಅದಕ್ಕಾಗಿಯೇ ದೇವಸ್ಥಾನಕ್ಕೆ ಹೋಗಿದ್ದು. ಅದನ್ನು ನಾನು ಗಿಫ್ಟ್ ಆಗಿ ಪವಿತ್ರಾ ಲೋಕೇಶ್ ಅವರಿಗೆ ನೀಡಿದೆ. ಅಲ್ಲಿಂದಲೇ ಅನುಮಾನ ಶುರುವಾಯಿತು..

ಪವಿತ್ರಾ ಲೋಕೇಶ್ ಅವರು ನನಗೆ ನಾಲ್ಕು ವರ್ಷಗಳಿಂದ ಪರಿಚಯ. ಆಗಿನಿಂದ ಏನು ತೊಂದರೆ ಇರಲಿಲ್ಲ. ಹಲವು ಬಾರಿ ಅವರು ನಾನು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದೇವೆ, ಆಗೆಲ್ಲಾ ಯಾವುದೇ ರೀತಿಯ ಸುದ್ದಿಗಳು ಇರಲಿಲ್ಲ. ಆದರೆ ಈಗ ಎಲ್ಲವೂ ಶುರುವಾಗಿದೆ. ಆ ಗಿಫ್ಟ್ ಕೊಟ್ಟ ನಂತರ ರಮ್ಯಾ ರಘುಪತಿ ಅವರು ಇದೆಲ್ಲವನ್ನು ಶುರು ಮಾಡಿದ್ದಾರೆ.. ನಾನು ಪವಿತ್ರಾ ಲೋಕೇಶ್ ಒಳ್ಳೆಯ ಸ್ನೇಹಿತರು, ಅವರು ನನಗೆ ಸ್ನೇಹಿತೆ, ಸಂಗಾತಿ, ಫಿಲಾಸಫರ್ ಎಲ್ಲವೂ ಆಗಿದ್ದಾರೆ. ಅವರು ನನ್ನ ಬಳಿ ಅವರ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ, ನಾನು ಅವರ ಬಳಿ ನನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತೇನೆ..” ಎಂದು ನರೇಶ್ ಅವರು ಅಸಲಿ ವಿಚಾರವನ್ನು ತಿಳಿಸಿದ್ದಾರೆ.

Comments are closed.