ಹೊಸ ಬಿಸಿನೆಸ್ ಆರಂಭ ಮಾಡಿದ ಪ್ರಿಯಾಂಕಾ ಚೋಪ್ರಾ: ಬೆಲೆ ಕೇಳಿ ಕಂಗಾಲಾದ ಅಭಿಮಾನಿಗಳು.
ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಇಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿ, ಹಾಲಿವುಡ್ ನಲ್ಲಿ ಸಹ ಬ್ಯುಸಿ ಆಗಿದ್ದಾರೆ. ಪ್ರಿಯಾಂಕ ಚೋಪ್ರಾ ಅವರು ಖ್ಯಾತ ಪಾಪ್ ಸಿಂಗರ್ ನಿಕ್ ಜೋನಸ್ ಅವರ ಜೊತೆ ಮದುವೆಯಾಗಿ ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಪ್ರಿಯಾಂಕ ಚೋಪ್ರಾ ಅವರು ಒಬ್ಬ ನಟಿಯಷ್ಟೇ ಅಲ್ಲ, ಒಳ್ಳೆಯ ಉದ್ಯಮಿ ಸಹ ಹೌದು. ಅವರು ಮುಂಬೈ ಹಾಗೂ ಬೇರೆ ನಗರಗಳಲ್ಲಿ ರೆಸ್ಟೋರೆಂಟ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮ ಹೊಂದಿದ್ದಾರೆ. ಇದೀಗ ಹೊಸ ಬ್ಯುಸಿನೆಸ್ ಒಂದನ್ನು ಸಹ ಶುರು ಮಾಡಿದ್ದಾರೆ. ಪ್ರಿಯಾಂಕ, ಆದರೆ ಆ ಬೈಸಿನೆಸ್ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಜೂನ್ 23ರಂದು ಪ್ರಿಯಾಂಕ ಚೋಪ್ರಾ ಅವರ ಹೊಸ ಬ್ಯುಸಿನೆಸ್ ಲಾಂಚ್ ಆಗಿದೆ, ಇವರು ಲಾಂಚ್ ಮಾಡಿರುವ ಹೊಸ ಬ್ಯುಸಿನೆಸ್ ಅಮೆರಿಕಾದಲ್ಲಿ, ಅದರ ಹೆಸರು ಸೋನಾ ಹೋಮ್. ಈ ಸಂಸ್ಥೆಯ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಮನೆಗೆ ಉಪಯೋಗ ಆಗುವಂತಹ ವಸ್ತುಗಳು, ಹಾಗೂ ಮನೆಯ ಡಿಸೈನ್, ಪ್ಲಾನಿಂಗ್,ಟೆಕ್ನಾಲಜಿ ಬಳಸಿರುವ ಸ್ಮಾರ್ಟ್ ಹೋಮ್ ನಿರ್ಮಿಸಲು ಇವರ ಸಂಸ್ಥೆ ಸಹಾಯ ಮಾಡುತ್ತದೆ. ಈ ಬ್ಯುಸಿನೆಸ್ ಐಡಿಯಾ ಏನೋ ಚೆನ್ನಾಗಿದೆ, ಆದರೆ ಇಲ್ಲಿ ಸಿಗುವ ವಸ್ತುಗಳ ಬೆಲೆ ಕೇಳಿ ನೆಟ್ಟಿಗರು ದಂಗಾಗಿದ್ದಾರೆ. ಇಲ್ಲಿ ಟೇಬಲ್ ಕ್ಲಾತ್, ಕಪ್ ಸಾಸರ್, ಬೆಡ್, ಲೈಟ್, ಟವಲ್, ಸ್ಪೂನ್ ಹಾಗೂ ಇನ್ನಿತರ ವಸ್ತುಗಳು ಸಿಗುತ್ತವೆ. ಇವುಗಳಿಗೆ ಅತ್ಯಂತ ದುಬಾರಿ ಬೆಲೆ ನಿಗದಿ ಪಡಿಸಿದ್ದಾರೆ.
ಇವರು ಟೇಬಲ್ ಕ್ಲಾತ್ ಗೆ ಇಟ್ಟಿರುವ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಸಿಗುತ್ತದೆ, ಎರಡು ಟೇಬಲ್ ಕ್ಲಾತ್ ಬೆಲೆಯಲ್ಲಿ ಅಮೆರಿಕಾದಲ್ಲಿ ಐಫೋನ್13 ಸಿಗುತ್ತದೆ. ಅಷ್ಟು ದುಬಾರಿ ಇದೆ ಬೆಲೆಗಳು. ಒಂದು ಟೇಬಲ್ ಕ್ಲಾತ್ ನ ಬೆಲೆ ಬರೋಬ್ಬರಿ $398 ಡಾಲರ್, ಭಾರತದ ರೂಪಾಯಿಯಲ್ಲಿ ಹೇಳುವುದಾದರೆ, ₹31 ಸಾವಿರಕ್ಕಿಂತ ಹೆಚ್ಚು. ಸಣ್ಣ ಸೈಜ್ ಇರುವ ತಟ್ಟೆಯ ಬೆಲೆ $198 ಡಾಲರ್, ಭಾರತದ ರೂಪಾಯಿಯ ಬೆಲೆಯಲ್ಲಿ ಇದು ₹15,700 ರೂಪಾಯಿ ಆಗಿದೆ. ಇಷ್ಟು ದುಬಾರಿ ಬೆಲೆಯನ್ನು ಅಮೆರಿಕಾದ ಸಾಮಾನ್ಯ ಜನರು ಖರೀದಿಸಲಾಗದು, ಶ್ರೀಮಂತ ಜನರು ಸಹ ಇಷ್ಟು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಇನ್ನು ಭಾರತದ ನೆಟ್ಟಿಗರು, ಪ್ರಿಯಾಂಕ ಚೋಪ್ರಾ ಅವರ ಈ ಪ್ರಾಡಕ್ಟ್ ಗಳ ಬಗ್ಗೆ ಕಮೆಂಟ್ಸ್ ಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ, ಪ್ರಿಯಾಂಕ ಅವರ ಟೇಬಲ್ ಕ್ಲಾತ್ ಪರ್ಚೆಸ್ ಮಾಡುವಷ್ಟು ಸಂಬಳ ಪಡೆದುಕೊಂಡರೆ ಸಾಕು ಎನ್ನುತ್ತಿದ್ದಾರೆ ನೆಟ್ಟಿಗರು.
Comments are closed.