ಇದೀಗ ವಿವಾದಗಳ ಗೂಡಾಗಿರುವ ರಮ್ಯಾ ಹಾಗೂ ನರೇಶ್ ರವರ ಪ್ರೀತಿಯ ಸ್ಟೋರಿ ಹೇಗಿದೆ ಗೊತ್ತೇ?? ಇಬ್ಬರ ನಡುವೆ ಪ್ರೀತಿ ಆಗಿದ್ದು ಹೇಗೆ ಗೊತ್ತೇ?
ಇದೀಗ ಕನ್ನಡ ಮತ್ತು ತೆಲುಗು ಮಾಧ್ಯಮಗಳಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವುದು ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ಮದುವೆಯ ಸುದ್ದಿ. ಇವರಿಬ್ಬರು ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುವ ವಿಚಾರ ಹೊರಬಂದ ನಂತರ ಈ ಸುದ್ದಿ ಶುರುವಾಯಿತು. ಇನ್ನು ಈ ವಿಚಾರವಾಗಿ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಅವರು ಮಾಧ್ಯಮಗಳಲ್ಲಿ ಮಾತನಾಡಿ, ನರೇಶ್ ಅವರಿಂದ ತಮಗೆ ಆಗಿರುವ ಅನ್ಯಾಯ ಮತ್ತು ಪವಿತ್ರಾ ಲೋಕೇಶ್ ಅವರ ಬಗ್ಗೆ ಆರೋಪ ಮಾಡಿದ್ದಾರೆ. ಇಂದು ನರೇಶ್ ಹಾಗೂ ರಮ್ಯಾ ರಘುಪತಿ ಅವರ ಸಂಸಾರ ಹಾದಿ ರಂಪ ಆಗಿದೆ. ಆದರೆ ಇವರಿಬ್ಬರಿಗೂ ಪರಿಚಯ ಆಗಿದ್ದು ಹೇಗೆ? ಇವರ ನಡುವೆ ಪ್ರೀತಿ ಶುರುವಾಗಿದ್ದು ಹೇಗೆ? ಮದುವೆ ಆಗಿದ್ದು ಹೇಗೆ? ಇಂಟರೆಸ್ಟಿಂಗ್ ಕಹಾನಿ ತಿಳಿಸುತ್ತೇವೆ ನೋಡಿ..
ರಮ್ಯಾ ರಘುಪತಿ ಕರ್ನಾಟಕದವರು, ಇವರಿಗೆ ಚಿತ್ರರಂಗ ಹೊಸದಾಗಿರಲಿಲ್ಲ. ನರೇಶ್ ಅವರನ್ನು ಮದುವೆಯಾಗುವ ಅಥವಾ ಭೇಟಿಯಾಗುವ ಮೊದಲೇ ರಮ್ಯಾ ಅವರಿಗೆ ಚಿತ್ರರಂಗದ ಪರಿಚಯ ಇತ್ತು. ಆಸ್ಟ್ರೇಲಿಯಾದಲ್ಲಿ ಸಿನಿಮಾಟೋಗ್ರಾಫಿ ಕೋರ್ಸ್ ಮಾಡಿದ್ದರು ರಮ್ಯಾ. ನರೇಶ್ ಅವರ ತಾಯಿ ವಿಜಯ ನಿರ್ಮಲಾ ಅವರ ಬಳಿ ಅಸಿಸ್ಟಂಟ್ ಆಗಿ ಸೇರಿಕೊಳ್ಳುತ್ತಾರೆ. ಆಗ ಇಬ್ಬರಿಗೂ ಪರಿಚಯ ಆಗುತ್ತದೆ. ನಂದನವನ ಸಿನಿಮಾ ಸೆಟ್ ನಲ್ಲಿ ಇವರಿಬ್ಬರು ಮೊದಲ ಬಾರಿಗೆ ಭೇಟಿ ಮಾಡುತ್ತಾರೆ..ನಂತರ ಇವರಿಬ್ಬರ ನಡುವೆ ಸ್ನೇಹ ಶುರುವಾಗುತ್ತದೆ. ಹೀಗೆ ಇವರ ಸ್ನೇಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಜೀವನದ ವಿಚಾರದಲ್ಲಿ ಒಬ್ಬರಿಗೊಬ್ಬರು ಸಲಹೆ ಕೊಟ್ಟುಕೊಳ್ಳಲು ಶುರು ಮಾಡುತ್ತಾರೆ. ಇಬ್ಬರ ನಡುವೆ ಸಲುಗೆ ಪ್ರೀತಿ ಹೆಚ್ಚಾಗುತ್ತದೆ.
ಒಂದು ಸಮಯದಲ್ಲಿ ರಮ್ಯಾ ರಘುಪತಿ ಅವರು ತಂದೆಯನ್ನು ಕಳೆದುಕೊಂಡು ಡಿಪ್ರೆಷನ್ ನಲ್ಲಿದ್ದಾಗ, ಅವರನ್ನು ಸಾಂತ್ವನಗೊಳಿಸಿ, ಅವರ ಬೆನ್ನಿಗೆ ನಿಂತಿದ್ದು ನರೇಶ್ ಅವರು. ನಂತರ ರಮ್ಯಾ ಅವರ ತಾತನಿಗೆ ಅನಾರೋಗ್ಯ ಉಂಟಾಗಿದ್ದಾಗ, ರಾತ್ರಿ 9 ಗಂಟೆಗೆ ನರೇಶ್ ಅವರು ಚಿತ್ರೀಕರಣ ಮುಗಿಸಿ, ಹೈದರಾಬಾದ್ ಇಂದ ಬೆಂಗಳೂರಿಗೆ ಬಂದು, ಬೆಳಗ್ಗಿನ ವರೆಗೂ ರಮ್ಯಾ ಅವರ ಜೊತೆಗಿದ್ದು ಧೈರ್ಯತುಂಬಿ ಹೋಗುತ್ತಿದ್ದರಂತೆ. ಅಷ್ಟು ಸಪೋರ್ಟ್ ಮಾಡಿ, ನಂಬಿಕೆ ಗಳಿಸಿಕೊಂಡರು ನರೇಶ್. ಆಗ ರಮ್ಯಾ ರಘುಪತಿ ಅವರ ಮನೆಯಲ್ಲಿ. ಲವ್ ಮ್ಯಾರೇಜ್ ಗೆ ಒಪ್ಪಿಗೆ ಕೊಡುವುದು ಸಹ ಕಷ್ಟವಾಗಿತ್ತು, ಆ ಸಮಯದಲ್ಲಿ ಬಹಳ ಕಷ್ಟಪಟ್ಟು, ಎರಡು ಕುಟುಂಬದವರನ್ನು ಒಪ್ಪಿಸಿ, ರಮ್ಯಾ ಮತ್ತು ನರೇಶ್ ಅವರ ಮದುವೆ ಆಯಿತು. ಆದರೆ ಇವರ ಸಂಸಾರದ ವಿಚಾರ ಈಗ ಈ ರೀತಿ ಆಗಿದೆ.
Comments are closed.