ನಮ್ಮ ಮನೆಗೆ ಯಾವುದೇ ಕಾರಣಕ್ಕೂ ಮತ್ತೆ ಕಾಲು ಇಡಬೇಡ ಎಂದು ಎಚ್ಚರಿಕೆ ನೀಡಿದ ಖ್ಯಾತ ನಟಿ, ಕಿಯರಾ ಅಡ್ವಾಣಿ. ಯಾರಿಗೆ ಮತ್ತು ಯಾಕೆ ಗೊತ್ತೇ??
ಸಿನಿಮಾ ಕಲಾವಿದರು ಎಂದಮೇಲೆ ಅವರಿಗೆ ಸಾಕಷ್ಟು ಅಭಿಮಾನಿಗಳಿರುತ್ತಾರೆ. ಅಭಿಮಾನಿಗಳು ತಮ್ಮ ಮೆಚ್ಚಿನ ಕಲಾವಿದರಿಗಾಗಿ ಕ್ರೇಜಿ ಆಗಿ ಏನೇನೋ ಮಾಡುವುದನ್ನು ಕೇಳಿದ್ದೇವೆ ಹಾಗೂ ನೋಡಿರುತ್ತೇವೆ. ಅದರಲ್ಲೂ ನಾಯಕಿಯರನ್ನು ಇಂಪ್ರೆಸ್ ಮಾಡಲು, ಹುಡುಗರು ಏನಾದರೂ ವಿಭಿನ್ನವಾಗಿ ಮಾಡುತ್ತಾರೆ. ಅದೇ ರೀತಿ ನಟಿ ಕಿಯಾರ ಅಡ್ವಾಣಿ ಅವರಿಗೆ ಆದ ಒಂದು ಘಟನೆಯ ಬಗ್ಗೆ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಇವರಿಗೆ ಆಗಿದ್ದೇನು? ಯಾರು ಏನು ಮಾಡಿದರು? ತಿಳಿಸುತ್ತೇವೆ ನೋಡಿ..
ನಟಿ ಕಿಯಾರ ಅಡ್ವಾಣಿ ಅಭಿನಯಿಸುತ್ತಿರುವ ಎಲ್ಲಾ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಆಗುತ್ತಿದ್ದು, ಅದರ ಸಂತೋಷದಲ್ಲಿದ್ದಾರೆ ನಟಿ ಕಿಯಾರ. ಶೇರ್ಷ, ಭೂಲ್ ಭುಲೈಯಾ ಹಾಗೂ ಜುಗ್ ಜುಗ್ ಜಿಯೋ ಸಿನಿಮಾ ಸೂಪರ್ ಹಿಟ್ ಆಗಿದೆ. ಸಕ್ಸಸ್ ಸಂತೋಷದಲ್ಲಿರುವ ಕಿಯಾರಾ ಅಡ್ವಾಣಿ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದು, ತಮಗಾದ ಒಂದು ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ ಅವರು ಮುಂಬೈನಲ್ಲಿರುವ ಐಷಾರಾಮಿ ಅಪಾರ್ಟ್ನೆಂಟ್ ಒಂದರಲ್ಲಿ ವಾಸವಾಗಿದ್ದಾರೆ, ಇವರು ಇರುವುದು ಮೇಲಿನ ಫ್ಲೋರ್ ನಲ್ಲಿ, ತುಂಬಾ ಎತ್ತರದಲ್ಲಿದ್ದಾರೆ ಕಿಯಾರಾ. ಇವರನ್ನು ಹುಡುಕಿಕೊಂಡು ಅಭಿಮಾನಿಯೊಬ್ಬ ಅಪಾರ್ಟ್ಮೆಂಟ್ ಫ್ಲ್ಯಾಟ್ ನ ಬಳಿ ಬಂದಿದ್ದಾನೆ. ಲಿಫ್ಟ್ ನಲ್ಲಿ ಮೇಲೆ ಹೋಗದೆ, ಮೆಟ್ಟಿಲುಗಳನ್ನೇ ಹತ್ತಿಕೊಂಡು ಹೋಗಿದ್ದಾನೆ.
ಕಿಯಾರ ಅಡ್ವಾಣಿ ಅವರ ಫ್ಲ್ಯಾಟ್ ಡೋರ್ ತಟ್ಟಿದ್ದು, ಆತ ಬಳಲಿ ಸುಸ್ತಾಗಿ ಬೆವರುತ್ತಿದ್ದಿದ್ದನ್ನು ನೋಡಿ ಕಿಯಾರಾ ಅಡ್ವಾಣಿ ಅವರಿಗೆ ಗಾಬರಿಯಾಗಿ, ಏನಾಯಿತು ಎಂದು ಕೇಳಿ, ಲಿಫ್ಟ್ ನಲ್ಲಿ ಯಾಕೆ ಬರಲಿಲ್ಲ ಎಂದು ಕೇಳಿದ್ದಕ್ಕೆ, ಆತ ನಿಮ್ಮ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಆ ರೀತಿ ಮಾಡಿದೆ ಎಂದು ಹೇಳಿದ್ದಾನೆ. ಅದರಿಂದ ಕಿಯಾರಾ ಅಡ್ವಾಣಿ ಅವರಿಗೆ ಭಯದ ಜೊತೆಗೆ ಆತಂಕವೂ ಆಗಿ, ಇನ್ನೊಂದು ಸಾರಿ ನನ್ನ ಮನೆಗೆ ಬರಬೇಡ ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟು ಮನೆಯಿಂದ ಕಳಿಸಿದ್ದರಂತೆ. ಈ ಘಟನೆಯನ್ನು ಇಂಟರ್ವ್ಯೂ ನಲ್ಲಿ ಹಂಚಿಕೊಂಡಿದ್ದಾರೆ ಕಿಯಾರ ಅಡ್ವಾಣಿ. ಅಭಿಮಾನಿಗಳು ಏನೆಲ್ಲಾ ಮಾಡುತ್ತಾರೆ ಎನ್ನುವುದಕ್ಕೆ ಇದು ಸಹ ಒಂದು ಉದಾಹರಣೆ ಆಗಿದೆ.
Comments are closed.