ಮದುವೆಯಾದ ಮೇಲೆ ಆತನಿಂದ ಕಷ್ಟ ಪಟ್ಟೆ, ಕೊನೆಗೂ ತನ್ನ ನೋವನ್ನು ಹೊರಹಾಗಿದ ಸಮಂತಾ ಹೇಳಿದ್ದೇನು ಗೊತ್ತೇ?
ತೆಲುಗಿನ ಜೊತೆಗೆ ಸೌತ್ ನ ಹೆಸರಾಂತ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಈ ಮೋಹಕ ನಟಿ ತೆಲುಗಿಗೆ ‘ಯೇ ಮಾಯ ಚೇಸಾವೆ’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ತೆಲುಗಿನ ಟಾಪ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡರು ಹಾಗೂ ದೊಡ್ಡ ಹಿಟ್ ಗಳನ್ನು ಪಡೆದಿದ್ದಾರೆ. ಮೂಲತಃ ಕೇರಳದವರಾದ ಸಮಂತಾ ಬೆಳೆದಿದ್ದು ತಮಿಳುನಾಡಿನಲ್ಲಿ. ಈಗ ಚಿತ್ರರಂಗದಲ್ಲಿ ವಿಶೇಷ ಹೆಸರು ಮಾಡಿದ್ದಾರೆ, ಸಿನಿಮಾಗಳ ಜೊತೆಗೆ ವೆಬ್ ಸಿರೀಸ್ ಮಾಡುತ್ತಾ ಉತ್ತಮ ಫಾರ್ಮ್ ನಲ್ಲಿದ್ದಾರೆ ಸಮಂತಾ. ನಾಯಕಿ ಸಮಂತಾ ತಮ್ಮ ಮೊದಲ ಸಿನಿಮ ನಾಯಕ ಅಕ್ಕಿನೇನಿಯನ್ನು ಪ್ರೀತಿಸಿ ನಾಗ ಚೈತನ್ಯ ಅವರನ್ನು ವಿವಾಹವಾದರು.
ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ನಡುವಿನ ಲವ್ ಟ್ರ್ಯಾಕ್ ವರ್ಷಗಳ ಕಾಲ ನಡೆಯಿತು. ಹಲವು ದಿನಗಳಿಂದ ಒಟ್ಟಿಗೆ ಇದ್ದ ಈ ಜೋಡಿ, ತಾವು ಬೇರೆಯಾಗುತ್ತಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿ ಆಗಿದೆ. ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ಬೇರ್ಪಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾಗ ಚೈತನ್ಯ ಜೊತೆಗಿನ ಬ್ರೇಕಪ್ ನಂತರ ಸಮಂತಾ ಕೆರಿಯರ್ ನಲ್ಲಿ ವೇಗವಾಗಿ ಸಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳು, ವೆಬ್ ಸೀರೀಸ್ ಗಳು ಮತ್ತು ಫೋಟೋ ಶೂಟ್‌ಗಳಲ್ಲಿ ಬ್ಯುಸಿ ಆಗಿದ್ದಾರೆ ಸಮಂತಾ. ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಸಹ ಕಾಣಿಸಿಕೊಂಡರು.
ಆದರೆ ಹಿಂದಿಯಲ್ಲಿ ವೆಬ್ ಸಿರೀಸ್ ಮೂಲಕ ಜನಪ್ರಿಯತೆ ಗಳಿಸಿರುವ ಸಮಂತಾ ತಮ್ಮ ವಾಸಸ್ಥಳವನ್ನು ಮುಂಬೈಗೆ ಬದಲಾಯಿಸಿದ್ದಾರೆ. ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದ ಎರಡನೇ ಸೀಸನ್ ಆರಂಭಿಸಿದ್ದಾರೆ, ಅದರಲ್ಲಿ ದಕ್ಷಿಣದ ಸಮಂತಾ ಅವರು ಪಾಲ್ಗೊಂಡಿದ್ದು, ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಇತ್ತೀಚಿನ ಪ್ರೋಮೋದಲ್ಲಿ ಸಮಂತಾ ಮದುವೆಯ ನಂತರ ಏಕೆ ಸಂತೋಷವಾಗಿಲ್ಲ ಎಂದು ವಿವರಿಸಿದ್ದಾರೆ, “ಅದಕ್ಕೆ ನೀವೆ (ಕರಣ್ ಜೋಹರ್) ಕಾರಣ..” ಎಂದು ಸಮಂತಾ ತಮಾಷೆಯಾಗಿ ಕರಣ್ ಅವರನ್ನು ಚುಡಾಯಿಸಿದ್ದಾರೆ. ಯಾಕೆಂದರೆ ಮದುವೆಯ ನಂತರದ ಜೀವನ ಕಭಿ ಖುಷಿ ಕಭಿ ಗಮ್ ಅಂತ ತೋರಿಸಿದ್ದಾರೆ ಕರಣ್ ಜೋಹರ್.. ಆದರೆ ವಾಸ್ತವದಲ್ಲಿ ಕೆಜಿಎಫ್ ಇದ್ದಂತೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
Comments are closed.