ಮದುವೆಯಾಗಿ ಹತ್ತು ವರ್ಷವಾದರೂ ಮಗು ಆಗಿಲ್ಲ ಎನ್ನುತ್ತಿರುವಾದ ಸದ್ಗುರು ಬಳಿ ತೆರಳಿದ ರಾಮ್ ಚರಣ್ ಪತ್ನಿ, ಸದ್ಗುರು ಬಳಿ ಹೇಳಿದ್ದೇನು ಗೊತ್ತೇ??
ತೆಲುಗು ಚಿತ್ರರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಮನೆತನಕ್ಕೆ ದೊಡ್ಡ ಮಟ್ಟದಲ್ಲಿ ಗೌರವ ಇದೆ. ಚಿರಂಜೀವಿ ಅವರು ಹಾಗೂ ಚಿರಂಜೀವಿ ಅವರ ಮಗ ರಾಮ್ ಚರಣ್ ಅವರು ಇಬ್ಬರು ಸಹ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ರಾಮ್ ಚರಣ್ ಅವರು ಹುಟ್ಟಿದ್ದು ಮಾರ್ಚ್ 27, 1985ರಲ್ಲಿ ಚೆನ್ನೈನಲ್ಲಿ. ಇವರು ಓದಿದ್ದು ಬೆಳೆದದ್ದು ಎಲ್ಲವೂ ಹೈದರಾಬಾದ್ ನಲ್ಲಿ, ಮುಂಬೈನಲ್ಲಿ ನಟನೆಯ ಕೋರ್ಸ್ ಮುಗಿಸಿದ, ರಾಮ್ ಚರಣ್ ಅವರು ಚಿರುತ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.ರಾಮ್ ಚರಣ್ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ, ಇವರು ತಮ್ಮ ಬಾಲ್ಯದ ಗೆಳತಿ ಉಪಾಸನಾ ಕಮಿನೇನಿ ಅವರನ್ನು ಪ್ರೀತಿಸುತ್ತಿದ್ದರು. ಉಪಾಸನಾ ಅವರು ಸಹ ದೊಡ್ಡ ಕುಟುಂಬದಿಂದ ಬಂದಿರುವ ಹುಡುಗಿ, ಇವರ ತಾತ ಅಪೋಲೊ ಸಂಸ್ಥೆಯ ಉಪಾಧ್ಯಕ್ಷ ಆಗಿದ್ದರು.
ರಾಮ್ ಚರಣ್ ಹಾಗೂ ಉಪಾಸನಾ ಜೋಡಿಯ ನಿಶ್ಚಿತಾರ್ಥ 2011ರಲ್ಲಿ ನಡೆದು, 2012ರಲ್ಲಿ ರಾಮ್ ಚರಣ್ ಅವರಿಗೆ 27 ವರ್ಷವಿದ್ದಾಗ, ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂದು ಈ ಜೋಡಿ ಬಹಳ ಸಂತೋಷವಾದ ಜೀವನ ಸಾಗಿಸುತ್ತಿದ್ದಾರೆ. ಆದರೆ ಇವರಿಬ್ಬರು ಇನ್ನು ಮಕ್ಕಳಾಗಿಲ್ಲ ಎನ್ನುವ ವಿಚಾರ ಮಾತ್ರ, ದೊಡ್ಡದಾಗಿ ಚರ್ಚೆ ಆಗುತ್ತಿದೆ. ಉಪಾಸನಾ ಅವರು ಅನೇಕ ಒಳ್ಳೆಯ ವಿಚಾರಗಳ ಮೂಲಕ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಉಪಾಸನಾ ಅವರು ಸದ್ಗುರು ಅವರನ್ನು ಕಾರ್ಯಕ್ರಮ ಒಂದರಲ್ಲಿ ಭೇಟಿಯಾದರು, ಅದರಲ್ಲಿ ಉಪಾಸನಾ ಅವರು ಸದ್ಗುರು ಅವರ ಜೊತೆ ಮಾತನಾಡುವಾಗ, ಮಕ್ಕಳ ವಿಚಾರದ ಬಗ್ಗೆ ಪ್ರಶ್ನೆ ಕೇಳಿದರು, ನನಗೆ ಮದುವೆ ಆಗಿ 10 ವರ್ಷ ಆಗಿದೆ, ನನ್ನ ಜೀವನದಲ್ಲಿ ನಾನು ತುಂಬಾ ಸಂತೋಷವಾಗಿದ್ದೇನೆ. ಜೀವನವನ್ನು ಹಾಗೂ ನನ್ನ ಕುಟುಂಬವನ್ನು ನಾನು ಪ್ರೀತಿಸುತ್ತೇನೆ..
ಆದರೆ ಕೆಲವರು ನನ್ನ ಬಗ್ಗೆ ಚರ್ಚೆ ಮಾಡುತ್ತಾರೆ, ನನ್ನ ಅವರ ಸಂಬಂಧದ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು ಉಪಾಸನಾ. ಅದಕ್ಕೆ ಸದ್ಗುರು ಅವರು ಅದಕ್ಕೆ ಉತ್ತರ ನೀಡಿ, ಸಂಬಂಧದ ಬಗ್ಗೆ ನಾನು ಮಾತನಾಡುವುದಿಲ್ಲ, ಅದು ನಿಮ್ಮ ವೈಯುಕ್ತಿಕ ವಿಚಾರ. ರೀಪ್ರೊಡ್ಯುಸ್ ವಿಚಾರದ ಬಗ್ಗೆ ಹೇಳುವುದಾದರೆ, ಆರೋಗ್ಯವಾಗಿದ್ದು ಮಕ್ಕಳು ಬೇಡ ಎಂದು ನಿರ್ಧಾರ ಮಾಡುವುದನ್ನು ಪ್ರಶಂಸಿಸಬೇಕು, ಯಾಕಂದ್ರೆ ಈಗಾಗಲೇ ಹೆಚ್ಚಾಗಿದೆ ಎಂದು ಉತ್ತರ ನೀಡಿದ್ದಾರೆ. ಉಪಾಸನಾ ಅವರು ಕೇಳಿರುವ ಈ ಪ್ರಶ್ನೆಗೆ, ವಿವಿಧ ಪ್ರತಿಕ್ರಿಯೆ ಬಂದಿದೆ. ಹಲವರು ಉಪಾಸನಾ ಅವರು ಈ ಪ್ರಶ್ನೆ ಕೇಳಿದ್ದಕ್ಕೆ, ಅವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಉಪಾಸನಾ ಅವರು ಈಗ ಅಪೋಲೊ ಸಂಸ್ಥೆಯ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ.
Comments are closed.