Neer Dose Karnataka
Take a fresh look at your lifestyle.

ಬಡವನಾಗಿ ಹುಟ್ಟಿ, ಇಂದು ಕೋಟಿ ಕೋಟಿಗಳ ಒಡೆಯನಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಹಿನ್ನಲೆ ಗೊತ್ತಾ?? ಮುಂಬೈನಲ್ಲಿ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಗೊತ್ತೆ?

ಸರಳ ವಾಸ್ತು ಕಾರ್ಯಕ್ರಮದ ಮೂಲಕ ಅನೇಕ ಜನರ ಜೀವನಕ್ಕೆ ಹೊಸ ರೂಪ ತಂದುಕೊಡುತ್ತಿದ್ದವರು, ಚಂದ್ರಶೇಖರ್ ಗುರೂಜಿ. ಇವರು ಟಿವಿಯಲ್ಲಿ ಸರಳ ವಾಸ್ತು ಕಾರ್ಯಕ್ರಮದ ಮೂಲಕ ಒಳ್ಳೆಯ ಹೆಸರು ಮಾಡಿದ್ದರು. ಅನೇಕ ಭಕ್ತರು ಇವರನ್ನು ಅನುಸರಿಸುತ್ತಿದ್ದರು, ಇವರ ಬಳಿ ವಾಸ್ತು ಸಲಹೆ ಪಡೆಯುತ್ತಿದ್ದರು. ಆದರೆ ಈ ಚಂದ್ರಶೇಖರ್ ಗುರೂಜಿ ಅವರನ್ನು ಇತ್ತೀಚೆಗೆ ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಕೊಲೆ ಮಾಡಲಾಗಿದೆ. ಭಕ್ತರ ಗೆಟಪ್ ನಲ್ಲಿ ಬಂದ ದುಷ್ಕರ್ಮಿಗಳು ಇವರ ಪ್ರಾಣ ತೆಗೆದಿದ್ದಾರೆ. ಅಷ್ಟಕ್ಕೂ ಚಂದ್ರಶೇಖರ್ ಗುರೂಜಿ ಯಾರು? ಅವರ ಹಿನ್ನಲೆ ಏನು? ಅವರು ಸಂಪಾದನೆ ಮಾಡಿರುವ ಆಸ್ತಿ ಎಷ್ಟು ಗೊತ್ತಾ? ತಿಳಿಸುತ್ತೇವೆ ನೋಡಿ..

ಚಂದ್ರಶೇಖರ್ ಗುರೂಜಿ ಅವರ ಪೂರ್ತಿ ಹೆಸರು, ಚಂದ್ರಶೇಖರ್ ವಿರುಪಾಕ್ಷ ಅಂಗಡಿ, ಚಂದ್ರಶೇಖರ್ ಗುರೂಜಿ ಹುಟ್ಟಿದ್ದು ಬೆಳೆದದ್ದು ಬಡತನದ ಕುಟುಂಬದಲ್ಲಿ. ಇವರು ಬಾಗಲಕೋಟೆಯವರು, ಅಲ್ಲಿಯೇ ಸಿವಿಲ್ ಇಂಜಿನಿಯರಿಂಗ್ ಮುಗಿಸಿದರು. ಬಳಿಕ ಗುರೂಜಿ ಅವರು ಒಳ್ಳೆಯ ರೀತಿಯಲ್ಲಿ ಹಣ ಸಂಪಾದನೆ ಮಾಡಬೇಕು ಎಂದು ಮುಂಬೈಗೆ ತೆರಳಿ ಅಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಸಹ ಮಾಡಿದರರು. ಆದರೆ ಅವರ ಸ್ನೇಹಿತರೆ ಮಾಡಿದ ಕೆಲವು ಕುತಂತ್ರದಿಂದ ಚಂದ್ರಶೇಖರ್ ಗುರೂಜಿ ಅವರು ಅಲ್ಲಿಂದ ಹೊರಬರುವ ಹಾಗೆ ಆಯಿತು. ಮುಂಬೈ ಇಂದ ಮತ್ತೆ ಕರ್ನಾಟಕಕ್ಕೇ ಬಂದ ಚಂದ್ರಶೇಖರ್ ಅವರು, ಬಹಳ ಕಷ್ಟಪಡುತ್ತಿದ್ದ ಜನರನ್ನು ನೋಡಿದ ಗುರೂಜಿ ಅವರಿಗೆಲ್ಲ ಸಹಾಯ ಮಾಡಬೇಕು ಎಂದುಕೊಂಡರು. ಆ ಸಮಯದಲ್ಲಿ ಗುರೂಜಿ ಅವರಿಗೆ, ವಾಸ್ತು ಶಾಸ್ತ್ರದ ಮೇಲೆ ಆಸಕ್ತಿ ಬೆಳೆಯಿತು. ಆಗ ಅವರು, ಸಿಂಗಾಪುರಕ್ಕೆ ಹೋಗಿ, ವಾಸ್ತು ಶಾಸ್ತ್ರವನ್ನು ಕಲಿತು ಬಂದರು.

ನಂತರ ಮುಂಬೈ ನಲ್ಲಿ ಸರಳ ವಾಸ್ತು ಎನ್ನುವ ಕಂಪನಿಯನ್ನು ಶುರು ಮಾಡಿದರು, ಈ ಕಂಪನಿ ಅಲ್ಲಿ ಯಶಸ್ಸು ಗಳಿಸಿದ ಬಳಿಕ, ಗುರೂಜಿ ಅವರು ಕರ್ನಾಟಕದಲ್ಲಿ ಸಹ ಸರಳ ವಾಸ್ತು ಸಂಸ್ಥೆಯನ್ನು ಶುರು ಮಾಡಿದರು, ಇದರಿಂದಾಗಿ, ಕಷ್ಟದಲ್ಲಿರುವ ಅನೇಕರಿಗೆ ವಾಸ್ತು ಮೂಲಕ ಸಹಾಯ ಮಾಡಿದ್ದಾರೆ. ಇನ್ನು ಗುರೂಜಿ ಅವರ ವೈಯಕ್ತಿಕ ಜೀವನದ ವಿಚಾರದ ಬಗ್ಗೆ ಹೇಳುವುದಾದರೆ, ಗುರೂಜಿ ಅವರು ಎರಡು ಮದುವೆ ಆಗಿದ್ದರು. ಇವರ ಮೊದಲ ಪತ್ನಿ ವಿಧಿವಶರಾದ ಬಳಿಕ ಎರಡನೇ ಮದುವೆ ಮಾಡಿಕೊಂಡರು. ಚಂದ್ರಶೇಖರ್ ಗುರೂಜಿಗೆ ಅವರಿಗೆ ಒಬ್ಬರು ಮಗಳು ಸಹ ಇದ್ದಾರೆ. ಗುರೂಜಿ ಅವರಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಸಹ ಇದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರಿಗೆ ಸಾಕಷ್ಟು ಅವಾರ್ಡ್ ಗಳು ಸಹ ಬಂದಿದೆ. ಸರಳ ಜೀವನ ಎನ್ನುವ ಹೊಸ ಚಾನೆಲ್ ಒಂದನ್ನು ಸಹ ಇವರು ಶುರು ಮಾಡಿ, ಅದರ ಮೂಲಕ ಅನೇಕ ಜನರಿಗೆ ವಾಸ್ತು ವಿಚಾರದಲ್ಲಿ ಸಹಾಯ ಮಾಡಿದ್ದಾರೆ.

Comments are closed.