ಮದುವೆಯಾದ ಕೆಲವೇ ದಿನಕ್ಕೆ ಮತ್ತೆ ಮನೆಗಳನ್ನು ಖರೀದಿಸಿದ ನಯನತಾರ: ಇವುಗಳ ಬೆಲೆ ಕೇಳಿದರೆ ತಲೆ ತಿರುಗುತ್ತದೆ. ಎಷ್ಟು ಗೊತ್ತೇ?
ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ನಯನತಾರಾ ಚೆನ್ನೈನಲ್ಲಿ ಹೊಸದಾದ ಎರಡು ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಈಗ ಕೇಳಿ ಬರುತ್ತಿದೆ. ಪೋಯಸ್ ಗಾರ್ಡನ್ ನಲ್ಲಿಯೇ ಎರಡು ಮನೆಗಳನ್ನು ನಯನ ಖರೀದಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಯನತಾರ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾದರು. ಮದುವೆ ನಂತರ ಹನಿಮೂನ್ ಗೆ ಸಹ ಹೋಗಿಬಂದರು. ಇದೀಗ ಚೆನ್ನೈನ ಅತ್ಯಂತ ದುಬಾರಿ ಪ್ರದೇಶದಲ್ಲಿ ಎರಡು ಮನೆಗಳನ್ನು ಖರೀದಿಸಿದ್ದಾರೆ ಎನ್ನುವ ಸುದ್ದಿ ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮನೆ ವೇದನಿಲಯದ ಬಳಿ ನಯನತಾರ ಅವರು ಹೊಸ ಮನೆಗಳನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ತಮಿಳುನಾಡಿನ ಪ್ರಸಿದ್ಧ ವ್ಯಕ್ತಿಗಳು ಪೋಯಸ್ ಗಾರ್ಡನ್ ನಲ್ಲಿ ನೆಲೆಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಇದೇ ಪೋಯಸ್ ಗಾರ್ಡನ್ ನಲ್ಲಿ ನೆಲೆಸಿದ್ದಾರೆ. ಇಷ್ಟು ದುಬಾರಿ ಪ್ರದೇಶದಲ್ಲಿ ನಯನತಾರಾ ಎರಡು ಮನೆ ಖರೀದಿಸಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಪ್ರತಿ ಮನೆ ಎಂಟು ಸಾವಿರ ಚದರ ಅಡಿ ಇದೆ ಎಂದು ಹೇಳಲಾಗಿದೆ.
ಈ ಮನೆಗಳ ಇಂಟೀರಿಯರ್ ಡಿಸೈನ್ ಮಾಡುವ ಜವಾಬ್ದಾರಿಯನ್ನು ಮುಂಬೈನಲ್ಲದ ಪ್ರಮುಖ ಸಂಸ್ಥೆಗೆ ವಹಿಸಲಾಗಿದೆ ಎನ್ನುತ್ತಿವೆ ಮೂಲಗಳು. ಇದಕ್ಕಾಗಿ 25 ಕೋಟಿ ರೂಪಾಯಿ ಒಪ್ಪಂದಕ್ಕೆ ನಯನತಾರ ಅವರು ಸಹಿ ಹಾಕಿದ್ದಾರೆ ಎಂದು ಗೊತ್ತಾಗಿದೆ. ಒಟ್ಟಿನಲ್ಲಿ ಕಾಲಿವುಡ್ ನಲ್ಲಿ ನಟಿ ನಯನತಾರಾ ಮನೆ ಖರೀದಿ ಮಾಡಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಐಷಾರಾಮಿ ಮದುವೆ ಇಂದಲೂ ಸಹ, ನಯನತಾರ ಅವರು ಭಾರಿ ಸುದ್ದಿಯಾಗಿದ್ದರು. ಇವರ ಮದುವೆ ವಿಚಾರ ಸಹ ಬಹಳ ಗುಟ್ಟಾಗಿಯೇ ಇತ್ತು. ಇದೀಗ ಹೊಸ ಮನೆ ವಿಚಾರದಿಂದ ಸುದ್ದಿಯಾಗಿದ್ದಾರೆ.
Comments are closed.