Neer Dose Karnataka
Take a fresh look at your lifestyle.

ಕೊನೆಗೂ ಸಿಕ್ತು ಉತ್ತರ: ಸುದೀಪ್ ಕೈಯಲ್ಲ?? ದರ್ಶನ ಕೈಯಲ್ಲ?? ವಿಷ್ಣು ವರ್ಧನ್ ರವರ ಖಡ್ಗ ನಿಜಕ್ಕೂ ಯಾರ ಬಳಿ ಇದೆ ಗೊತ್ತೇ??

ಕನ್ನಡ ಚಿತ್ರರಂಗದ ಸಾಹಸಸಿಂಹ, ಅಭಿನವ ಭಾರ್ಗವ ಎಂದೇ ಹೆಸರು ಪಡೆದು, ಒಳ್ಳೆಯ ಗುಣ, ಹೃದಯವಂತಿಕೆ ಮತ್ತು ಸರಳತೆಗೆ ಮತ್ತೊಂದು ಹೆಸರು ಎನ್ನುವ ಹಾಗೆ ಬಾಳಿ ಬದುಕಿದವರು ಸಾಹಸಸಿಂಹ ವಿಷ್ಣುವರ್ಧನ್ ಅವರು. ವಿಷ್ಣುದಾದ ಈಗಲೂ ಎಲ್ಲರ ಮನಸ್ಸಿನಲ್ಲಿ ಅಮರವಾಗಿ ಉಳಿದಿದ್ದಾರೆ. ಅವರಿಲ್ಲದೆ ಹೋದರು, ಅವರ ಮೇಲಿನ ಅಭಿಮಾನ, ಪ್ರೀತಿ, ಗೌರವ ಯಾವುದು ಕೂಡ ಅಭಿಮಾನಿಗಳಲ್ಲಿ ಕಡಿಮೆಯಾಗಿಲ್ಲ. ನಾವೆಲ್ಲರು ಗಮನಿಸಿರುವ ಹಾಗೆ ವಿಷ್ಣುದಾದ ಅವರ ಕೈಯಲ್ಲಿ ಸದಾ ಒಂದು ಕಡಗ ಇರುತ್ತಿತ್ತು, ಆ ಕಡಗ ಈಗ ಯಾರ ಬಳಿ ಇದೆ ಗೊತ್ತಾ?

ವಿಷ್ಣುವರ್ಧನ್ ಅವರು ಮೂಲತಃ ಮೈಸೂರಿನವರು. ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದ ಅಪ್ರತಿಮ ಕೊಡುಗೆ ವಿಷ್ಣುವರ್ಧನ್ ಅವರು, ನಾಗರಹಾವು ಸಿನಿಮಾದ ಆಂಗ್ರಿ ಯಂಗ್ ಮ್ಯಾನ್ ಲುಕ್ ಅನ್ನು ಇಂದಿಗೂ ಯಾರು ಮರೆತಿಲ್ಲ. ಆ ಸಿನಿಮಾ ಆಗಿನ ಕಾಲದಲ್ಲಿ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ವಿಷ್ಣುವರ್ಧನ್ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಇಮೇಜ್ ತಂದುಕೊಟ್ಟಿತ್ತು. ಅದಾದ ಬಳಿಕ ವಿಷ್ಣುವರ್ಧನ್ ಅವರು ಹಿಂದಿರುಗಿ ನೋಡಿದ್ದೇ ಇಲ್ಲ, ಹಲವು ರೀತಿಯ ವಿಭಿನ್ನ ಪಾತ್ರಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು, ಅವರಿಗೆ ದೊಡ್ಡ ಅಭಿಮಾನಿ ಬಳಗ ಸಹ ಬೆಳೆಯಿತು. ಸ್ಯಾಂಡಲ್ ವುಡ್ ನ ಲೆಜೆಂಡ್ ಆಗಿರುವವರು ವಿಷ್ಣುದಾದ. ಈ ಮೇರು ನಟ ತಮ್ಮ ಕೊನೆಯ ಘಳಿಗೆಯ ವರೆಗೂ ಅವರ ಕೈಯಲ್ಲಿ ಒಂದು ಕಡಗವನ್ನು ಧರಿಸಿದ್ದರು.

ವಿಷ್ಣುದಾದ ಅವರ ಅಂತ್ಯದ ಬಳಿಕ ಆ ಕಡಗ ಏನಾಯಿತು? ಅದನ್ನು ದರ್ಶನ್ ಅವರ ಬಳಿ ಇದೆಯೇ, ಸುದೀಪ್ ಅವರ ಬಳಿ ಇದೆಯೇ ಅಥವಾ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರ ಬಳಿ ಇದೆಯೇ ಎನ್ನುವ ಪ್ರಶ್ನೆ ಎಲ್ಲಾ ಅಭಿಮಾನಿಗಳಲ್ಲೂ ಇತ್ತು, ಆದರೆ ವಿಷ್ಣುದಾದ ಅವರ ಕಡಗದ ಹಿಂದಿನ ಅಸಲಿ ವಿಚಾರವೇ ಬೇರೆ ಇದೆ. ನಿಜವಾದ ಮಾಹಿತಿಯ ಪ್ರಕಾರ ವಿಷ್ಣುದಾದ ಅವರ ಕಡಗವನ್ನು ಭಾರತಿ ವಿಷ್ಣುವರ್ಧನ್ ಅವರು ಯಾರಿಗೂ ಕೊಟ್ಟಿಲ್ಲ ಎಂದು ತಿಳಿದು ಬಂದಿದೆ. ವಿಷ್ಣು ದಾದ ಅವರಿಗೆ ಆ ಕಡಗವನ್ನು, 80ರ ದಶಕದಲ್ಲಿ ಒಂದು ಸಿನಿಮಾ ಚಿತ್ರೀಕರಣ ಸಮಯದಲ್ಲಿ, ಸಿಖ್ ಗುರೂಜಿ ಒಬ್ಬರು, ಖಡ್ಗವನ್ನು ವಿಷ್ಣುದಾದ ಅವರಿಗೆ ತೊಡಿಸಿದ್ದರು. ಅದನ್ನು ಕೊನೆಯವರೆಗೂ ಧರಿಸಿದ್ದರು ವಿಷ್ಣುದಾದ. ಅವರಿಗೆ ಆಪ್ತವಾಗಿದ್ದ ಆ ವಸ್ತು ಇಂದು ಎಲ್ಲಿದೆ ಎನ್ನುವ ಬಗ್ಗೆ ಯಾರಿಗೂ ತಿಳಿದಿಲ್ಲ. ಅದು ಎಲ್ಲೇ ಇದ್ದರೂ, ವಿಷ್ಣುದಾದ ಅವರಿಗೆ ಸಂತೋಷ ತಂದಿರುತ್ತದೆ ಎಂದೇ ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ.

Comments are closed.