ಮತ್ತೊಂದು ಹಾದಿ ಹಿಡಿದ ಪವಿತ್ರ ರವರ ವಿವಾದ, ಎಲ್ಲರ ಮನ ಗೆದ್ದಿದ್ದ ನಟಿಗೆ ಮೊದಲ ಶಾಕ್. ಈ ರೀತಿಯ ಸರಿಯೇ?? ಈಗ್ಯಾಕೆ ಆಗುತ್ತಿದೆ ಗೊತ್ತೇ??
ಖ್ಯಾತ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಅವರ ಮದುವೆ ಗಾಸಿಪ್ ದಿನದಿಂದ ದಿನಕ್ಕೆ ಬೇರೆಯ ತಿರುವುಗಳನ್ನೇ ಪಡೆದುಕೊಳ್ಳುತ್ತಿದೆ. ಮೊದಲಿಗೆ ಇವರಿಬ್ಬರ ಮದುವೆ ನಡೆದೇ ಹೋಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು, ನಂತರ ಇಬ್ಬರ ಮದುವೆ ನಡೆದಿಲ್ಲ, ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಈ ಬಗ್ಗೆ ಯಾವುದೇ ಸಾಕ್ಷಿ ಪುರಾವೆ ಇದುವರೆಗೂ ಸಿಕ್ಕಿಲ್ಲ. ಆದರೆ ಈ ವಿಚಾರವು ದಿನದಿಂದ ದಿನಕ್ಕೆ ಬೇರೆಯದೇ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತಿದೆ.
ನಟ ನರೇಶ್ ತೆಲುಗು ಚಿತ್ರರಂಗದ ದೊಡ್ಡ ಕುಟುಂಬದಿಂದ ಬಂದವರು. ಸೂಪರ್ ಸ್ಟಾರ್ ಕೃಷ್ಣ ಅವರ ಮಲಮಗ ಹಾಗೂ ಹಿರಿಯನಟಿ ಹಾಗೂ ನಿರ್ದೇಶಕಿ ವಿಜಯ ನಿರ್ಮಲ ಅವರ ಮಗ ಆಗಿದ್ದಾರೆ ನಟ ನರೇಶ್, ಇನ್ನು ಪವಿತ್ರಾ ಲೋಕೇಶ್ ಅವರು ಸಹ ಹಲವು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಗಳಿಗೆ ಅಮ್ಮನ ಪಾತ್ರದಲ್ಲಿ ನಟಿಸುತ್ತಾ, ಸಕ್ರಿಯವಾಗಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ. ಈ ಇಬ್ಬರು ಸಹ ಬಹಳ ಪಾಪ್ಯುಲಾರಿಟಿ ಹೊಂದಿರುವ ಕಾರಣ, ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಈ ವಿಷಯಗಳು ಮಾಧ್ಯಮದಲ್ಲಿ ದೊಡ್ಡದಾದ ಬಳಿಕ, ಪವಿತ್ರಾ ಲೋಕೇಶ್ ಅವರು ಮಾಧ್ಯಮಗಳಲ್ಲಿ ಮಾತನಾಡಿದ್ದರು, ನಟ ನರೇಶ್ ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಹಾಗೂ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಸಹ ಮಾಧ್ಯಮದ ಎದುರು ಬಂದು, ನರೇಶ್ ಅವರ ಬಗ್ಗೆ ಹಾಗೂ ಪವಿತ್ರಾ ಲೋಕೇಶ್ ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿ, ತಾವು ನರೇಶ್ ಅವರಿಗೆ ವಿಚ್ಛೇದನ ಕೊಡುವುದಿಲ್ಲ ಎಂದು ಹೇಳಿದ್ದರು.
ಇದೀಗ ಇವರಿಬ್ಬರ ಪ್ರಕರಣಕ್ಕೆ ಒಂದು ಹೊಸ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ, ನಟಿ ಪವಿತ್ರಾ ಲೋಕೇಶ್ ಅವರ ವಿರುದ್ಧ ಈ ರೀತಿಯ ವಿವಾದ ಒಂದು ಭುಗಿಲೆದ್ದಿರುವ ಕಾರಣ, ಪವಿತ್ರಾ ಲೋಕೇಶ್ ಅವರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಈಗ ಸದ್ದು ಮಾಡುತ್ತಿದೆ. ಇಂತಹ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಪವಿತ್ರಾ ಲೋಕೇಶ್ ಅವರನ್ನು ತಾಯಿಯ ಪಾತ್ರಕ್ಕೆ, ಎರಡು ಬಿಗ್ ಬಜೆಟ್ ಸಿನಿಮಾಗಳಿಗೆ ಆಯ್ಕೆಮಾಡಿಕೊಂಡಿದ್ದರಂತೆ. ಎರಡು ಸ್ಟಾರ್ ನಟರ ಸಿನಿಮಾಗಳು ಎನ್ನಲಾಗುತ್ತಿದೆ.
ಆದರೆ ಆ ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಅವರನ್ನು ಕೈಬಿಡುವ ನಿರ್ಧಾರ ಮಾಡಲಾಗಿದೆ ಎನ್ನುವ ಮಾತುಗಳು ಈಗ ಕೇಳಿಬರುತ್ತಿದೆ. ತಾಯಿಯ ಪಾತ್ರ ಎಂದರೆ, ಆ ಪಾತ್ರದಲ್ಲಿ ನಟಿಸಲು ಪರಿಪೂರ್ಣತೆ ಇರಬೇಕು ಎನ್ನುವ ಕಾರಣಕ್ಕೆ, ಪವಿತ್ರಾ ಲೋಕೇಶ್ ಅವರ ವಿರುದ್ಧ ವಿವಾದಗಳು ಬಂದಿರುವ ಕಾರಣ, ಅವರನ್ನು ಸಿನಿಮಾಗಳಿಂದ ತೆಗೆದುಹಾಕಿ ಬೇರೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆ ಚಿತ್ರತಂಡಗಳು ಎನ್ನುವ ಗಾಸಿಪ್ ಈಗ ಜೋರಾಗಿಯೇ ಸದ್ದು ಮಾಡುತ್ತಿದೆ. ಇದು ನಿಜವೋ ಸುಳ್ಳೋ ಅಷ್ಟಕ್ಕೂ ಇದು ಯಾವ ನಟನ ಸಿನಿಮಾ ಇರಬಹುದು ಎನ್ನುವುದಕ್ಕೆ ಉತ್ತರ ಸಿಕ್ಕಿಲ್ಲ.
ಒಟ್ಟಿನಲ್ಲಿ ಇದು ನಿಜವೇ ಆಗಿದ್ದು, ಪವಿತ್ರಾ ಲೋಕೇಶ್ ಅವರು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದರೆ, ಅದು ಅವರ ಅಭಿಮಾನಿಗಳಿಗೆ ಬೇಸರ ತರಲಿದೆ. ಪವಿತ್ರಾ ಲೋಕೇಶ್ ಅವರಿಗೂ ಅವಕಾಶಗಳು ಕಡಿಮೆ ಆಗಲಿದೆ. ಈ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಇದು ನಿಜವೋ ಸುಳ್ಳೋ ಎಂದು ತಿಳಿಯಲು ಇನ್ನು ಕೆಲ ಸಮಯ ಕಾದು ನೋಡಬೇಕಿದೆ.
Comments are closed.