ಮತ್ತೊಂದು ರಾಶಿಯಲ್ಲಿ ಸೃಷ್ಟಿಯಾಗುತ್ತಿದೆ ವಿಶೇಷ ಯೋಗ: ತ್ರಿಗ್ರಾಹಿ ಯೋಗದಿಂದ ದಿಡೀರ್ ಲಾಭ ಪಡೆದು ಹಣ ಪಡೆಯುವವರು ಯಾವ್ಯಾವ ರಾಶಿಯವರು ಗೊತ್ತೇ?
ಗ್ರಹಗಳ ರಾಶಿ ಬದಲಾವಣೆ ಎನ್ನುವುದು ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವಾಗ, ಆ ರಾಶಿಯಲ್ಲಿ ಬೇರೆಯ ಗ್ರಹ ಇದ್ದರೆ, ಆ ಸಂಯೋಗ ಬೇರೆ ಎಲ್ಲಾ ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಸಂಚಾರ ಮತ್ತು ಸಂಯೋಗ ಎನ್ನುವುದು ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಿದರೆ, ಇನ್ನು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜುಲೈ 13ರಂದು ಗುರುಪೂರ್ಣಿಮಾ, ಅಂದು ಮೂರು ಗ್ರಹಗಳ ಸಂಗಮದಿಂದ, ತ್ರಗಾಹಿ ಯೋಗ ಶುರುವಾಗಲಿದೆ. ಮಿಥುನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಶುಕ್ರನ ಸಂಗಮವಾಗಲಿದೆ. ಇದರಿಂದಾಗಿ, ಮೂರು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ.
ವೃಷಭ ರಾಶಿ :- ಮಿಥುನ ರಾಶಿಯಲ್ಲಿ ತ್ರಿಗಾಹಿ ಯೋಗದಲ್ಲಿ, ಇದು ಹಣ ಮತ್ತು ಮಾತುಗಳ ಬಗ್ಗೆ ಸೂಚಿಸುತ್ತದೆ. ಇದರಿಂದಾಗಿ ನಿಮಗೆ, ದಿಢೀರ್ ಎಂದು ಧನಲಾಭ ಸಿಗುವ ಸಾಧ್ಯತೆ ಇದೆ. ನೀವು ಬೇರೊಬ್ಬರಿಗೆ ಸಾಲವಾಗಿ ಕೊಟ್ಟ ಹಣ ಹಿಂದಿರುಗಿ ಪಡೆಯುತ್ತೀರಿ. ವಿವಿಧವಾದ ರೀತಿಯಲ್ಲಿ ನೀವು ಹಣ ಪಡೆಯಬಹುದು. ಆರ್ಥಿಕ ವಿಚಾರದಲ್ಲಿ ಏನು ತೊಂದರೆ ಆಗುವುದಿಲ್ಲ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಮದುವೆ ಆಗದೆ ಇರುವವರಿಗೆ, ಮದುವೆಯಾಗುವ ಸೂಚನೆ ಇದೆ.
ಸಿಂಹ ರಾಶಿ :- ಈ ರಾಶಿಯಲ್ಲಿ ತ್ರಿಗಾಹಿ ಯೋಗ ನಡೆಯಲಿದೆ, ಈ ರಾಶಿಯವರ ಜಾತಕದ 11ನೇ ಮನೆಯಲ್ಲಿ ತ್ರಿಗಾಹಿ ಯೋಗ ಶುರುವಾಗಲಿದೆ. ಇದೊಂದು ಆದಾಯದ ಜಾಗ ಆಗಿದ್ದು, ಹಾಗಾಗಿ ನಿಮ್ಮ ಆದಾಯ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ನೂತನ ಮೂಲಗಳ ಮೂಲಕ ಆದಾಯ ಹೆಚ್ಚಾಗುತ್ತದೆ. ಸೂರ್ಯ ಮತ್ತು ಬುಧ ಪ್ರಭಾವದಿಂದ, ಸಮಾಜದಲ್ಲಿ ಗೌರವ ಸಿಗಲಿದ್ದು, ನಿಮ್ಮ ಕುಟುಂಬ ಸಂತೋಷವಾಗಿರುತ್ತದೆ.
ಕನ್ಯಾ ರಾಶಿ :- ಈ ರಾಶಿಯವರಿಗೆ ಧನಾತ್ಮಕ ಲಾಭ ಬರುತ್ತದೆ. ಈ ರಾಶಿಯ 10ನೇ ಮನೆಯಲ್ಲಿ ಸೂರ್ಯ ಮತ್ತು ಬುಧ ಮತ್ತು ಶುಕ್ರ ಸಂಯೋಗವಾಗಲಿದೆ, ಇದು ಕೆಲಸಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ನಿಮಗೆ ಈ ಸಮಯದಲ್ಲಿ ಹೊಸ ಕೆಲಸ ಸಿಗುವ, ಸಂಭವವಿದೆ. ವ್ಯಾಪಾರ ಮಾಡುತ್ತಿರುವವರು ಉತ್ತಮವಾದ ಲಾಭ ಸಿಗಲಿದೆ. ನಿಮಗೆ ಹೊಸ ಆರ್ಡರ್ ಗಳು ಸಿಗಲಿದ್ದು, ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆಗಿದೆ.
Comments are closed.