ಈಗಾಗಲೇ ಮದುವೆ ಆಗಿರುವ ಪುರುಷನನ್ನು ಪ್ರೀತಿ ಮಾಡಿ, ಒಲಿಸಿಕೊಳ್ಳಲು ಆತನ ಪತ್ನಿ ಮಕ್ಕಳನ್ನು ಆ ಮಹಿಳೆ ಏನು ಮಾಡಿದ್ದಾಳೆ ಗೊತ್ತೇ? ಯಪ್ಪಾ ಈಗೂ ಇರ್ತಾರ??
ಪ್ರಪಂಚದಲ್ಲಿ ಅತಿ ಆಸೆಯಿಂದ ಏನೆಲ್ಲಾ ಕೃತ್ಯಗಳು ನಡೆದು ಹೋಗುತ್ತದೆ ಎಂದು ಅನೇಕ ವಿಚಾರಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಇತ್ತೀಚೆಗೆ ಇಂಥದ್ದೇ ಒಂದು ಘಟನೆ ಆಂಧ್ರಪ್ರದೇಶದ ಕೋಮರಗಿರಿಪಟ್ಟಣಂ ನಲ್ಲಿ ನಡೆದಿದ್ದು, ಸ್ಥಳೀಯರಿಗೆ ಶಾಕ್ ನೀಡಿದೆ. ತಾನು ಪ್ರೇಮಿಸಿದ್ದ ಹುಡುಗ, ಮತ್ತೊಬ್ಬ ಹುಡುಗಿಯನ್ನು ಮದುವೆ ಆಗಿದ್ದಕ್ಕೆ, ಈ ಮಹಿಳೆ ತನ್ನ ಮಕ್ಳಳನ್ನೇ ಬಳಸಿ, ಆತನ ಕುಟುಂಬಕ್ಕೆ ಏನು ಮಾಡಿದ್ದಾಳೆ ಎಂದು ತಿಳಿಸುತ್ತೇವೆ ನೋಡಿ… ಇಂಥಹ ಘಟನೆಗಳು ಇಂದಿಗೂ ನಡೆಯುತ್ತವೆಯೇ ಎನ್ನುತ್ತಿದ್ದಾರೆ ನೆಟ್ಟಿಗರು.
ಈ ಮಹಿಳೆಯ ಹೆಸರು ನಾಗಲಕ್ಷ್ಮೀ, ಈಕೆಗೆ ಇಬ್ಬರು ಹೆಣ್ಣುಮಕ್ಕಳು. ಸುರೇಶ್ ಎನ್ನುವ ಗಂಡಸಿನ ಜೊತೆ ಪ್ರೇಮದಲ್ಲಿದ್ದಳು ಈ ಮಹಿಳೆ. ಆದರೆ ಆತ ಜ್ಯೋತಿ ಎನ್ನುವ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗುತ್ತಾನೆ. ಇದನ್ನು ಸಹಿಸಲು ನಾಗಲಕ್ಷ್ಮಿಗೆ ಆಗಲಿಲ್ಲ. ಹೇಗಾದರೂ ಮಾಡಿ ಅವರಿಬ್ಬರನ್ನು ಬೇರೆ ಮಾಡಬೇಕು ಎಂದು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಾಳೆ, ಜ್ಯೋತಿಗೆ ಬೇರೊಬ್ಬರ ಜೊತೆಗೆ ಸಂಬಂಧ ಇದೆ ಎನ್ನುವ ಹಾಗೆ ಬಿಂಬಿಸಿ ಪ್ರೇಮಪತ್ರಗಳನ್ನು ಬರೆಯುತ್ತಿರುತ್ತಾಳೆ, ಆದರೆ ಸುರೇಶ್ ಇದ್ಯಾವುದಕ್ಕೂ ಬಗ್ಗಲಿಲ್ಲ. ನಾಗಲಕ್ಷ್ಮೀ ಈ ರೀತಿ ಮಾಡುತ್ತಿದ್ದಾಳೆ ಎಂದು ಆತನಿಗೆ ಗೊತ್ತಾಗುತ್ತದೆ.
ಸುರೇಶ್ ಯಾವುದಕ್ಕೂ ಬಗ್ಗದೆ ಇದ್ದದ್ದನ್ನು ನೋಡಿ, ಇನ್ನು ತೀವ್ರವಾಗಿ ಹೋದ ನಾಗಲಕ್ಷ್ಮೀ, ತನ್ನ ಇಬ್ಬರು ಹೆಣ್ಣುಮಕ್ಕಳ ಕೈಗೆ ಪೆಟ್ರೋಲ್ ಮತ್ತು ಬೆಂಕಿಪೊಟ್ಟಣ ಕೊಟ್ಟು, ಸುರೇಶ್ ಮನೆಯಲ್ಲಿಲ್ಲದ ಸಮಯದಲ್ಲಿ ಮನೆಗೆ ಬೆಂಕಿ ಹಚ್ಚಲು ಹೇಳಿದ್ದಾಳೆ. ಮಕ್ಕಳು ಅದೇ ರೀತಿ ಮಾಡಿ ಎಸ್ಕೇಪ್ ಆಗಿದ್ದಾರೆ. ಸ್ಥಳೀಯರು ಇದ್ದಕ್ಕಿದ್ದ ಹಾಗೆ ಮನೆಗೆ ಬೆಂಕಿ ಹಚ್ಚಿಕೊಂಡಿದ್ದನ್ನು ನೋಡಿ, ನೀರು ಹಾಕಿ ಉಳಿಸುವ ಪ್ರಯತ್ನ ಮಾಡಿದರು ಸಹ, ಅಷ್ಟರಲ್ಲಿ ಜ್ಯೋತಿ ಮತ್ತು ಸುರೇಶ್ ತಾಯಿಯ ಸಜೀವ ದಹನ ನಡೆದಿತ್ತು. ಮೊದಲಿಗೆ ಪೊಲೀಸರು ಈ ರೀತಿ ಮಾಡಿದ್ದು ಸುರೇಷನೆ ಇರಬಹುದು ಎಂದು ಅನುಮಾನಿಸಿದ್ದರು.ಆದರೆ ವಿಚಾರ ನಡೆದು, ಸ್ಥಳೀಯರು ಹೇಳಿಕೆ ನೀಡಿ, ಎಲ್ಲಾ ವಿಚಾರ ಗೊತ್ತಾದ ಬಳಿಕ, ಬೆಂಕಿ ಹಚ್ಚಿದ್ದು ನಾಗಲಕ್ಷ್ಮೀ ಮಕ್ಕಳು, ಆಕೆಯೇ ಈ ಕೆಲಸ ಮಾಡಿಸಿದ್ದು ಎಂದು ತಿಳಿದುಬಂದಿದೆ.
Comments are closed.