ಅಪ್ಪಿ ತಪ್ಪಿಯೂ ಕೂಡ ಈ ರಾಶಿ ಜನರನ್ನು ಕೆಣಕಲು ಹೋಗಬೇಡಿ, ಕೆಣಕಿದರೆ ನಿಮ್ಮ ಕಥೆ ಅಷ್ಟೇ ಮುಗಿತು ಎಂದರ್ಥ. ಯಾವ್ಯಾವ ರಾಶಿಯವರನ್ನು ಗೊತ್ತೇ?
ಎಲ್ಲಾ ಮನುಷ್ಯರು ಒಂದಲ್ಲಾ ಒಂದು ಸಮಯದಲ್ಲಿ ಕೋಪ ಮಾಡಿಕೊಳ್ಳುತ್ತಾರೆ. ಕೋಪ ಎನ್ನುವುದು ಸಹಜ.. ಆದರೆ ಕೆಲವು ಜನರ ಕೋಪ ಸಾಮಾನ್ಯವಾಗಿ ಎಲ್ಲರ ಕೋಪದಂತೆ ಅಲ್ಲ. ಅವರ ಕೋಪ ಎದುರಿರುವ ವ್ಯಕ್ತಿಯನ್ನು ಸುಟ್ಟು ಹಾಕಬಹುದು, ಅಷ್ಟರ ಮಟ್ಟಿಗೆ ಇರುತ್ತದೆ. ಅಂತಹ ವ್ಯಕ್ತಿಗಳ ಜೊತೆಗೆ ಯಾವುದೇ ಕಾರಣಕ್ಕೂ ಕೋಪ ದ್ವೇಷ ಕಟ್ಟಿಕೊಳ್ಳಬಾರದು ಎನ್ನುತ್ತಾರೆ ಜ್ಯೋತಿಷಿಗಳು. ಆ ವ್ಯಕ್ತಿಗಳ ದ್ವೇಷಕ್ಕೆ ಕಾರಣವಾದರೆ, ಅವರಿಂದ ದೂರ ಸರಿಯುವುದೇ ಒಳ್ಳೆಯದು ಎಂದು ಹೇಳುತ್ತಾರೆ. ಆ ರಾಶಿಗಳು ಯಾವುವು ತಿಳಿಸುತ್ತೇವೆ ನೋಡಿ..
ವೃಷಭ :- ಈ ರಾಶಿಯವರು ಸ್ವಭಾವದಲ್ಲಿ ಹಠಮಾರಿ ಆಗಿರುತ್ತಾರೆ. ಆದರೆ ಚೆನ್ನಾಗಿಯೇ ಇರುತ್ತಾರೆ. ಒಂದು ವೇಳೆ ಇವರಿಗೆ ಕೋಪ ಬಂದರೆ ಮಾತ್ರ, ಅದು ಉದ್ವಿಗ್ನಕ್ಕೆ ಏರುತ್ತದೆ. ಅವರಿಗೆ ಒಂದು ವಿಷಯದಿಂದ ಕೋಪ ಬರುತ್ತದೆ ಎಂದು ಗೊತ್ತಾದರೆ, ಆ ವಿಚಾರದ ಬಗ್ಗೆ ಕೆದಕಲು ಹೋಗಬೇಡಿ. ಅದರಿಂದ ಅವರಿಗೆ ಕೋಪ ಬಂದರೆ, ಮುಂದಿನ ಸಮಯದಲ್ಲಿ ಅದರ ಬಗ್ಗೆ ನೀವೇ ಪಶ್ಚಾತಾಪ ಪಡುತ್ತೀರಿ. ನೀವು ಅವರ ಶತ್ರು ಆಗಿದ್ದರು ಸಹ, ನಿಮ್ಮನ್ನು ನಗುತ್ತಲೇ ಸ್ವಾಗತಿಸುತ್ತಾರೆ. ಆದರೆ ನಿಮ್ಮಿಬ್ಬರ ನಡುವೆ ಇರುವ ಉದ್ವಿಗ್ನತೆಯನ್ನು ಮಾತ್ರ ಅವರನ್ನು ಸಹಿಸುವುದಿಲ್ಲ.
ಕರ್ಕಾಟಕ ರಾಶಿ :- ಈ ರಾಶಿಯವರಿಗೆ ನೀವು ಕೋಪ ಬರುವ ಹಾಗೆ ಮಾಡಿದರೆ, ಅವರಿಗೆ ಸಿಟ್ಟು ಬರುವ ಹಾಗೆ ಮಾಡಿದರೆ, ಅದರಿಂದ ದೊಡ್ಡ ಪರಿಣಾಮ ನಿಮ್ಮ ಮೇಲೆ ಬೀರುತ್ತದೆ. ಸುಖಾಸುಮ್ಮನೆ ನೀವು ಅವರ ದ್ವೇಷಿಯ ಪಟ್ಟಿಗೆ ಸೇರಬಹುದು. ನಿಮ್ಮ ಮೇಲೆ ಕೋಪ ಕಾಡಿಕೊಳ್ಳುವುದು ಮಾತ್ರವಲ್ಲದೆ, ನಿಮ್ಮ ವಿರುದ್ಧ ಗಾಸಿಪ್ ಗಳನ್ನು ಸಹ ಈ ರಾಶಿಯವರು ಶುರು ಮಾಡುತ್ತಾರೆ. ಇವರ ಮಾತುಗಳು ವಿಷದ ಹಾಗಿರುತ್ತದೆ, ಹಾಗಾಗಿ ಕರ್ಕಾಟಕ ರಾಶಿಯವರ ಕೋಪಕ್ಕೆ ಗುರಿಯಾದರೆ, ನೀವು ಖಂಡಿತವಾಗಿ ವಿಷಾದ ಪಡುತ್ತೀರಿ.
ವೃಶ್ಚಿಕ ರಾಶಿ :- ಈ ರಾಶಿಯವರ ಕೋಪಕ್ಕೆ ಅರ್ಥ ಇರುತ್ತದೆ..ಆದರೆ ಕೋಪ ಕಡಿಮೆ ಅಂತೂ ಇರುವುದಿಲ್ಲ. ಇವರಿಗೆ ನಟಿಸಲು ಬರುವುದಿಲ್ಲ, ಜನರ ಎದುರು ಈ ರಾಶಿಯವರು ನಿಮ್ಮನ್ನು ಶತ್ರುಗಳಂತೆ ನೋಡಿದರು ಸಹ, ಅವರ ಮನಸ್ಸಿನಲ್ಲಿ ಅದು ಇರುವುದಿಲ್ಲ. ಆ ರಾಶಿಯವರು ನಿಮ್ಮನ್ನು ಅಷ್ಟು ಸುಲಭವಾಗಿ ಬಿಡುವುದು ಇಲ್ಲ. ಈ ರಾಶಿಯವರಿಗೆ ನೀವು ಶತ್ರುವಾದರೆ, ನಿಮ್ಮ ಮೇಲೆ ಪ್ರತಿದಾಳಿ ಯಾವಾಗ ನಡೆಯುತ್ತದೆ ಎಂದು ಸಹ ನಿಮಗೆ ಗೊತ್ತಾಗುವುದಿಲ್ಲ. ಆ ಪ್ರತಿದಾಳಿಗೆ ಸಿದ್ಧತೆ ಮಾಡಿಕೊಳ್ಳುವ ಅವಕಾಶ ಸಹ ಸಿಗುವುದಿಲ್ಲ.
ಧನು ರಾಶಿ :- ಈ ರಾಶಿಯವರು ಬಹಳ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಇವರಿಗೆ ನೋವನ್ನುಂಟು ಮಾಡುವುದು ಬಹಳ ಸುಲಭದ ವಿಚಾರ. ದ್ವೇಷವನ್ನು ಹಿಡಿತದಲ್ಲಿ ಇಟ್ಟುಕೊಳ್ಳುತ್ತಾರೆ. ಈ ರಾಶಿಯವರು ಕೋಪದ ಬಿಸಿ ನಿಮಗೆ ಬೇರೆ ರೀತಿಯಲ್ಲಿ ಸ್ಪರ್ಶವಾಗುವವರೆಗೂ ಅವರ ಕೋಪದ ಬಗ್ಗೆ ನಿಮಗೆ ತಿಳಿಯುವುದಿಲ್ಲ. ಈ ರೀತಿ ಆದಾಗ ನೀವು ಮಾಡುವ ತಮಾಷೆ ಸಹ ಅವರಿಗೆ ಸಿಟ್ಟು ಬರಿಸಬಹುದು.
Comments are closed.