ಕೊನೆಗೂ ಮತ್ತೆ ವಾಪಸ್ಸು ಬಂದ ಅನುಪಮಾ, ತುದಿ ಕಾಲಲ್ಲಿ ಕಾದು ನಿಂತಿದ್ದ ಅಭಿಮಾನಿಗಳು ದಿಲ್ ಖುಷ್. ಯಾವ ರೀತಿ ವಾಪಸ್ಸಾಗಿದ್ದಾರೆ ಗೊತ್ತೇ?
ಅನುಪಮ ಗೌಡ, ಕನ್ನಡ ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿರುವ ಹೆಸರು. ಅನುಪಮ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಕ್ಕ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ನಟಿ ಅನುಪಮ ಅಕ್ಕ ಸೀರಿಯಲ್ ನಲ್ಲಿ ಅದ್ಭುತವಾಗಿ ಅಭಿನಯಿಸುತ್ತಿದ್ದರು. ಪಾಸಿಟಿವ್ ಮತ್ತು ನೆಗಟಿವ್ ಎರಡು ರೋಲ್ ಗಳಲ್ಲಿ ನಟಿಸುತ್ತಿದ್ದರು ಅನುಪಮಾ ಗೌಡ. ಡ್ಯುಯೆಲ್ ಪಾತ್ರದಲ್ಲಿ ಅನುಪಮಾ ಗೌಡ ಅವರ ಅಭಿನಯ ಅದ್ಭುತವಾಗಿ ಮೂಡಿಬಂದಿತ್ತು. ಅನುಪಮಾ ಅವರ ಪಾಸಿಟಿವ್ ಪಾತ್ರ ನೋಡಿ ಹೋಗಳುತ್ತಿದ್ದ ಜನ, ನೆಗಟಿವ್ ಪಾತ್ರ ನೋಡಿ ಬಯ್ಯುವ ವರೆಗೂ ಹೋಗಿದ್ದರು. ಎರಡು ಪಾತ್ರಗಳಿಂದ ಜನರ ಮನಸ್ಸಿಗೆ ಬಹಳ ಹತ್ತಿರವಾಗಿದ್ದರು ನಟಿ ಅನುಪಮಾ ಗೌಡ.
ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಅನುಪಮಾ ಗೌಡ ಸ್ಪರ್ಧಿಯಾಗಿ ಮನೆಯೊಳಗೆ ಬಂದ ನಂತರ ಅನುಪಮಾ ಗೌಡ ಅವರ ನಿಜ ಸ್ವಭಾವ ಜನರಿಗೆ ಗೊತ್ತಾಯಿತು. ಅನುಪಮಾ ಬಹಳ ಕಷ್ಟ ಪಟ್ಟು ಈ ಹಂತಕ್ಕೆ ಬಂದಿದ್ದಾರೆ, ಎನ್ನುವುದು ಜನರಿಗೆ ಗೊತ್ತಾಗುತ್ತಾ ಹೋಯಿತು. ಫಿನಾಲೆವರೆಗೂ ಬಂದಿದ್ದರು ಅನುಪಮಾ ಗೌಡ. ಬಿಗ್ ಬಾಸ್ ನಂತರ ಸಿನಿಮಾದಲ್ಲಿ ನಟಿಸಿ ಅವಾರ್ಡ್ ಸಹ ಪಡೆದುಕೊಂಡ ಅನುಪಮಾ, ಮಜಾಭಾರತ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು.ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜಾ ರಾಣಿ ಶೋ ನಿರೂಪಣೆ ಮಾಡಿದ್ದ ಅನುಪಮಾ ಈಗ ಅದೇ ಚಾನೆಲ್ ನಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಶೋ ನಿರೂಪಣೆ ಮಾಡಿದ್ದರು. ರಾಜ ರಾಣಿ ಸೀಸನ್2 ನಲ್ಲಿ ಸಹ ಅನುಪಮಾಆ ಗೌಡ ಅವರೇ ನಿರೂಪಣೆ ಮಾಡುತ್ತಾರೆ ಎನ್ನಲಾಗಿತ್ತು.
ಆದರೆ ವಾಹಿನಿಯ ಕಡೆಯಿಂದ ಯಾವುದೇ ಕರೆ ಬರದ ಕಾರಣ, ಅನುಪಮಾ ಗೌಡ ಅವರು ನಿರೂಪಣೆಗೆ ಬರಲಿಲ್ಲ ಎಂದು ಇನ್ಸ್ಟಾಗ್ರಾಮ್ ಲೈವ್ ನಲ್ಲಿ ತಿಳಿಸಿದ್ದರು. ಕಿರುತೆರೆ ವೀಕ್ಷಕರು ಹಾಗೂ ಅನುಪಮಾ ಗೌಡ ಅವರ ಅಭಿಮಾನಿಗಳು ನಿಜಕ್ಕೂ ಅನುಪಮಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ತಮ್ಮ ಎಲ್ಲಾ ಅಭಿಮಾನಿಗಳಿಗೂ ಅನುಪಮಾ ಗೌಡ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೊಮ್ಮೆ ಕಿರುತೆರೆಗೆ ಬಂದಿದ್ದಾರೆ ಅನುಪಮಾ. ಸ್ಟಾರ್ ಸುವರ್ಣ ವಾಹಿನಿಯ ಕಾಮಿಡಿ ಗ್ಯಾಂಗ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯಲ್ಲಿ ಅನುಪಮಾ ಅವರು ಸ್ಪೆಷಲ್ ಪರ್ಫಾರ್ಮೆನ್ಸ್ ನೀಡುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ. ಇದನ್ನು ಕೇಳಿ ಅನುಪಮಾ ಗೌಡ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
Comments are closed.