Neer Dose Karnataka
Take a fresh look at your lifestyle.

ನಿಜಕ್ಕೂ ಪ್ರೀತಿ ಮಾಡಿ ಮದುವೆಯಾದವರು, ಬೇಗನೆ ವಿಚೇದನ ಪಡೆದುಕೊಳ್ಳಲು ಕಾರಣವೇನು ಗೊತ್ತೇ??

ಮೊದಲೆಲ್ಲಾ ಒಮ್ಮೆ ಮದುವೆಯಾದ ನಂತರ ಜೀವನ ಪರ್ಯಂತ ಅವರೊಂದಿಗೆ ಇರುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ಇಷ್ಟವಿಲ್ಲದಿದ್ದರೆ ವಿಚ್ಛೇದನ ಪಡೆದು ತಮ್ಮ ಜೀವನವನ್ನು ತಾವು ನೋಡಿಕೊಳ್ಳುತ್ತಾರೆ. ಆದರೆ ಕೆಲವು ಸಮೀಕ್ಷೆಗಳು ಹೇಳುವಂತೆ ಈಗಲೂ ದೊಡ್ಡವರು ನೋಡಿದವರ ಜೊತೆಗೆ ಮದುವೆಯಾದವರು ಜೊತೆಯಾಗಿಯೇ ಇರುತ್ತಿದ್ದರೆ, ಪ್ರೇಮವಿವಾಹ ಮಾಡಿಕೊಂಡಿರುವ ಜೋಡಿಗಳು ಹೆಚ್ಚು ವಿಚ್ಛೇದನ ಪಡೆಯುತ್ತಿದ್ದಾರೆ.

ಆದರೆ ಪ್ರೇಮ ವಿವಾಹಿತ ದಂಪತಿಗಳು ಹೆಚ್ಚಾಗಿ ಬೇರ್ಪಡಲು ಕೆಲವು ಕಾರಣಗಳಿವೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಆ ಕಾರಣಗಳು ಏನೆಂದು ಈಗ ತಿಳಿಸುತ್ತೇವೆ ನೋಡಿ. ಮದುವೆಗೂ ಮುನ್ನ ಒಬ್ಬರಿಗೊಬ್ಬರು ತುಂಬಾ ಪ್ರೀತಿ ತೋರಿಸುವುದು ಕೂಡ ಒಂದು ಕಾರಣ, ಆದರೆ ಮದುವೆಯ ನಂತರ ಪ್ರೀತಿ ಉಳಿಯುವುದಿಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಪ್ರೀತಿಸಿ ವಿವಾಹ ಆದವರು ಹೆಚ್ಚಾಗಿ ವಿಚ್ಛೇದನ ಪಡೆಯುತ್ತಿದ್ದಾರೆ. ಅದೇ ರೀತಿ ಹಿರಿಯರು ನಿಶ್ಚಯಿಸಿದ ಮದುವೆ ಆದರೆ ,

ಯಾವುದೇ ಕಷ್ಟ ಬಂದರು ಎರಡೂ ಕುಟುಂಬದ ಹಿರಿಯರು ಸಹಾಯಕ್ಕೆ ಬರುತ್ತಾರೆ. ಆದರೆ ಪ್ರೇಮ ವಿವಾಹ ಮಾಡಿಕೊಂಡವರಿಗೆ ಸಮಸ್ಯೆಯಾದರೆ ಅವರೇ ಪರಿಹರಿಸಿಕೊಳ್ಳಬೇಕು. ಕಷ್ಟಗಳನ್ನು ಸಹಿಸಲಾಗದೆ ಕೆಲವರು ಹತಾಶೆಯಿಂದ ಜಗಳಕ್ಕೆ ಬಿದ್ದು ಬೇರ್ಪಡುತ್ತಾರೆ ಎನ್ನಲಾಗಿದೆ. ಅದೂ ಅಲ್ಲದೆ ಅರೇಂಜ್ಡ್ ಮ್ಯಾರೇಜ್ ಗಳಲ್ಲಿ, ಇಬ್ಬರ ನಡುವೆ ಜಗಳವಾದಾಗ ಅವರ ತಂದೆ-ತಾಯಿಯ ಹಿರಿಯರು ಪಂಚಾಯ್ತಿ ಮಾಡಿ ಮತ್ತೆ ಒಂದಾಗಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಪ್ರೀತಿಸಿ ಮದುವೆಯಾದವರನ್ನು ಒಂದು ಮಾಡಲು ಹಿರಿಯರು ಮುಂದೆ ಬರುವುದಿಲ್ಲ. ಮದುವೆಗೂ ಮುನ್ನ ಸುಳ್ಳು ಹೇಳಿ ಮೋಸ ಮಾಡುವವರೂ ಇದ್ದಾರೆ. ಇಷ್ಟೆಲ್ಲಾ ಪ್ರೀತಿಸುವ ಜೋಡಿಗಳು ಕೂಡ ಮದುವೆಯ ನಂತರ ಅದೆಲ್ಲ ಸುಳ್ಳು ಎಂದು ತಿಳಿದ ನಂತರ ಬೇರೆಯಾಗುತ್ತಾರೆ ಎನ್ನುತ್ತಾರೆ ಮನೋವಿಜ್ಞಾನಿಗಳು.

Comments are closed.