Neer Dose Karnataka
Take a fresh look at your lifestyle.

ಖ್ಯಾತ ನಟ ವಿಶಾಲ್ ಹಾಗೂ ಕಾರ್ತಿಕ್ ರವರಿಗೆ ಬರುತ್ತಿವೆ ಬೆದರಿಕೆ ಕರೆಗಳು. ನೇರವಾಗಿ ಮುಗಿಸುತ್ತೇವೆ ಎನ್ನುತ್ತಿರುವುದು ಯಾಕಂತೆ ಗೊತ್ತೇ? ಅವರು ಮಾಡಿದ್ದು ಏನು ಅಂತೇ ಗೊತ್ತೇ?

45

ಕಾಲಿವುಡ್‌ ನಲ್ಲಿ ಈಗ ವಾತಾವರಣ ಬಿಸಿಯಾಗುತ್ತಿರುವ ಹಾಗೆ ತೋರುತ್ತಿದೆ. ತಮಿಳು ಚಿತ್ರರಂಗದ ನಡಿಗರ್ ಸಂಗಮ್ ಚುನಾವಣೆಗಳು ಈ ಹಿಂದೆ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದ್ದವು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.ಕೆಲವು ವರ್ಷಗಳಿಂದ ಮುಂದೂಡಲ್ಪಟ್ಟಿದ್ದ ಈ ಚುನಾವಣೆಗೆ ಸಂಬಂಧಿಸಿದಂತೆ ಈಗ ಒಂದು ಸ್ಪಷ್ಟತೆ ಬಂದಿದೆ. ಆದರೆ ಸದ್ಯ ನಡಿಗರ್ ಸಂಗಮ್ ನಲ್ಲಿ ಸಿನಿಮಾ ನಾಯಕರಾದ ವಿಶಾಲ್ ಮತ್ತು ಕಾರ್ತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕಾಲಿವುಡ್ ನಟರೊಬ್ಬರು ಕೊಲೆ ಬೆದರಿಕೆ ಹಾಕಿದ್ದು, ನಡಿಗರ್ ಸಂಗಮ ನವರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಟಾಲಿವುಡ್‌ ನಲ್ಲಿ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ​​ಚುನಾವಣೆಗಳಂತೆ ತಮಿಳುನಾಡು ನಡಿಗರ ಸಂಗಮ್ ಚುನಾವಣೆಗಳು ಬಹುತೇಕ ವಿವಾದಗಳನ್ನು ಸೃಷ್ಟಿಸಿವೆ.  ನಾವೇ ಗೆದ್ದೆವು ಎಂಬಂತೆ ಎರಡು ಬಣಗಳಾಗಿ ಒಡೆದ ನಟರು ಭಾರೀ ವಿವಾದವನ್ನೇ ಸೃಷ್ಟಿಸಿದ್ದರು. ನ್ಯಾಯಾಲಯದ ಆದೇಶದ ಅನ್ವಯ  ನಟ ನಾಸರ್ ಅವರು ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರು ಎಂದು ಘೋಷಿಸಲಾಯಿತು. ನಾಸರ್ ಅವರ ತಂಡದಲ್ಲಿ ಹೀರೋಗಳಾದ ವಿಶಾಲ್ ಮತ್ತು ಕಾರ್ತಿ ಪ್ರಮುಖ ಪಾತ್ರಗಳನ್ನು ವಹಿಸಿದ್ದಾರೆ. 

ಈ ಹಿನ್ನಲೆಯಲ್ಲಿ ಸಿಟ್ಟು ಬೆಳೆಸಿಕೊಂಡಿರುವ ರಾಜದೊರೈ ಎಂಬ ನಟ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ವಿರುದ್ಧವೂ ಸುಳ್ಳು ಪ್ರಚಾರ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನಡಿಗರ್ ಸಂಗಮ್ ನ ಪದಾಧಿಕಾರಿಗಳು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ದೂರಿನಲ್ಲಿ ವಿಶಾಲ್ ಅವರಿಗೆ ಮತ್ತು ಕಾರ್ತಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಮೆಂಟ್‌ಗಳನ್ನು ಮಾಡಿ ಅವರ ಅನೇಕ ಅಭಿಮಾನಿಗಳನ್ನು ಕೆರಳಿಸಿದ್ದಾರೆ. ರಾಜಾ ದೊರೈ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.  ಅಲ್ಲದೇ ನಟರಾದ ವಿಶಾಲ್ ಮತ್ತು ಕಾರ್ತಿ ಕೂಡ ಪೊಲೀಸ್ ರಕ್ಷಣೆ ಕೇಳಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.