ಇದ್ದಕ್ಕಿದ್ದ ಹಾಗೆ ಸ್ಟಾರ್ ನಟಿ ಬಳಿ ಓಡೋಡಿ ಹೋಗಿ, ಕ್ಷಮೆ ಕೇಳಿದ್ದ ಎನ್ಟಿಆರ್, ಯಾಕೆ ಅಂತೇ ಗೊತ್ತೇ?? ನಟಿ ಬಳಿ ಕ್ಷಮೆ ಕೇಳಲು ಕಾರಣವನು ಗೊತ್ತೇ?
ಯಂಗ್ ಟೈಗರ್ ಜ್ಯೂನಿಯರ್ ಎನ್.ಟಿ.ಆರ್ ಅವರು ಆರ್.ಆರ್.ಆರ್ ಸಿನಿಮಾದ ಅದ್ವಿತೀಯ ಯಶಸ್ಸಿನಿಂದ ಅವರ ಬುತ್ತಿಗೆ ಮತ್ತೊಂದು ಬ್ಲಾಕ್ ಬಸ್ಟರ್ ಸೇರ್ಪಡೆಯಾಗಿದೆ. ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಆರ್.ಆರ್.ಆರ್ ಸಿನಿಮಾವನ್ನು ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ನಿರ್ದೇಶನ ಮಾಡಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾದ ಆರ್.ಆರ್.ಆರ್ ಸಿನಿಮಾ ವಿಶ್ವಾದ್ಯಂತ ಬ್ಲಾಕ್ ಬಸ್ಟರ್ ಹಿಟ್ ಆಗಿ, 1000 ಕೋಟಿ ಹಣಗಳಿಸಿ ಹೆಸರು ಮಾಡಿದೆ. ಈಗ ಜ್ಯೂನಿಯರ್ ಎನ್.ಟಿ.ಆರ್ ಅವರು ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿದ್ದು, ದೊಡ್ಡ ಮಟ್ಟದಲ್ಲಿ ಇವರ ಫ್ಯಾನ್ ಬೇಸ್ ಸಹ ಹೆಚ್ಚಾಗಿದೆ.
ಆರ್.ಆರ್.ಆರ್ ಸಿನಿಮಾ ಬಳಿಕ ಜ್ಯೂನಿಯರ್ ಎನ್.ಟಿ.ಆರ್ ಅವರು ಕೊರಟಲ ಶಿವ ಅವರ ನಿರ್ದೇಶನದಲ್ಲಿ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅದಾದ ಬಳಿಕ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ನಟಿಸಲಿದ್ದಾರೆ. ಜ್ಯೂನಿಯರ್ ಎನ್.ಟಿ.ಆರ್ ಅವರು ಒಳ್ಳೆಯ ಹೃದಯ ಇರುವ ವ್ಯಕ್ತಿ ಎನ್ನುವ ವಿಚಾರ ಎಲ್ಲರಿಗು ಗೊತ್ತಿದೆ. ಅದಕ್ಕೆ ಉದಾಹರಣೆ ಎನ್ನುವ ಹಾಗೆ ಹಿಂದಿನ ಒಂದು ಘಟನೆಯ ಬಗ್ಗೆ ಹೇಳಬಹುದು. ನಿರ್ದೇಶಕ ರಾಜಮೌಳಿ ಹಾಗೂ ಜ್ಯೂನಿಯರ್ ಎನ್.ಟಿ.ಆರ್ ಅವರ ಕಾಂಬಿನೇಶನ್ ನಲ್ಲಿ ಸಿಂಹಾದ್ರಿ ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಬಳಿಕ ಸ್ಟೂಡೆಂಟ್ ನಂಬರ್1 ಸಿನಿಮಾದಲ್ಲಿ ಸಹ ಈ ಕಾಂಬಿನೇಷನ್ ಧೂಳೆಬ್ಬಿಸಿತ್ತು.
ಸ್ಟೂಡೆಂಟ್ ನಂಬರ್1 ಸಿನಿಮಾದಲ್ಲಿ ಖ್ಯಾತ ನಟಿ ರಮ್ಯಾ ಕೃಷ್ಣನ್ ಅವರು ಸ್ಪೆಷಲ್ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಭರ್ಜರಿಯಾದ ಡ್ಯಾನ್ಸ್ ಸ್ಟೆಪ್ಸ್ ಹಾಕಬೇಕಿತ್ತು. ವಯಸ್ಸಿನಲ್ಲಿ ರಮ್ಯಾ ಕೃಷ್ಣನ್ ಅವರಿಗಿಂತ ಎನ್.ಟಿ.ಆರ್ ಬಹಳ ಚಿಕ್ಕವರಾಗಿದ್ದರು, ಆದರೆ ಹಾಡಿನಲ್ಲಿ ರಮ್ಯಾ ಕೃಷ್ಣನ್ ಅವರನ್ನು ಹಲವು ಸ್ಪರ್ಶಿಸಿ ಡ್ಯಾನ್ಸ್ ಮಾಡಬೇಕಿತ್ತು. ಹಾಗಾಗಿ ಮುಜುಗರ ಪಟ್ಟುಕೊಂಡಿದ್ದರಂತೆ ಜ್ಯೂನಿಯರ್ ಎನ್.ಟಿ.ಆರ್. ಜೊತೆಗೆ ಚಿತ್ರೀಕರಣ ನಡೆಯುವಾಗ ರಮ್ಯಾ ಕೃಷ್ಣನ್ ಅವರ ಬಳಿ ಹೋಗಿ, “ನನ್ನಿಂದ ಏನಾದರೂ ತೊಂದರೆ ಆಗಿದ್ದರೆ ದಯವಿಟ್ಟು ಕ್ಷಮಿಸಿ..” ಎಂದು ಹೇಳಿದ್ದರಂತೆ. ಜ್ಯೂನಿಯರ್ ಎನ್.ಟಿ.ಆರ್ ಮಾತಿಗೆ ನಕ್ಕಿದ್ದ ರಮ್ಯಾಕೃಷ್ಣನ್ ಅವರು, “ಆ ಥರಾ ಏನು ಇಲ್ಲ, ನೀವು ಏನೇನೋ ಕಲ್ಪಿಸಿಕೊಳ್ಳಬೇಡಿ. ನೀವು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಿರಿ, ಅದರಿಂದ ನಾನು ಕೂಡ ಡಬಲ್ ಎನರ್ಜಿಯಿಂದ ಡ್ಯಾನ್ಸ್ ಮಾಡುವ ಹಾಗೆ ಆಯಿತು..” ಎಂದು ಹೇಳಿದ್ದಾರಂಗೆ.
Comments are closed.