Neer Dose Karnataka
Take a fresh look at your lifestyle.

ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಸಮಂತಾ ಧರಿಸಿದ್ದ ಬಟ್ಟೆಯ ಬೆಲೆ ಎಷ್ಟು ಗೊತ್ತೇ?? ಚಿಕ್ಕದಾಗಿದ್ದರೂ ಬಟ್ಟೆ ಬೆಲೆ ಕೇಳಿದರೆ ಶಾಕ್ ಆಗ್ತೀರಾ.

ತೆಲುಗಿನ ಜೊತೆಗೆ ಸೌತ್‌ ನ ಹೆಸರಾಂತ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಈ ಮೋಹಕ ನಟಿ ತೆಲುಗಿಗೆ ‘ಯೇ ಮಾಯ ಚೇಸಾವೆ’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ತೆಲುಗಿನ ಟಾಪ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡರು ಹಾಗೂ ದೊಡ್ಡ ಹಿಟ್‌ ಗಳನ್ನು ಪಡೆದಿದ್ದಾರೆ. ಮೂಲತಃ ಕೇರಳದವರಾದ ಸಮಂತಾ ಬೆಳೆದಿದ್ದು ತಮಿಳುನಾಡಿನಲ್ಲಿ. ಈಗ ಚಿತ್ರರಂಗದಲ್ಲಿ ವಿಶೇಷ ಹೆಸರು ಮಾಡಿದ್ದಾರೆ, ಸಿನಿಮಾಗಳ ಜೊತೆಗೆ ವೆಬ್ ಸಿರೀಸ್ ಮಾಡುತ್ತಾ ಉತ್ತಮ ಫಾರ್ಮ್ ನಲ್ಲಿದ್ದಾರೆ ಸಮಂತಾ. ನಾಯಕಿ ಸಮಂತಾ ತಮ್ಮ ಮೊದಲ ಸಿನಿಮ ನಾಯಕ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು..

ನಾಗಚೈತನ್ಯ ಮತ್ತು ಸಮಂತಾ ನಡುವಿನ ಲವ್ ಟ್ರ್ಯಾಕ್ 8 ವರ್ಷಗಳ ಕಾಲ ನಡೆಯಿತು. ಮದುವೆಯಾಗಿ 4 ವರ್ಷಗಳ ಕಾಲ ಒಟ್ಟಿಗೆ ಇದ್ದ ಈ ಜೋಡಿ, ತಾವು ಬೇರೆಯಾದ ಬಗ್ಗೆ ಅಧಿಕೃತವಾಗಿ ಘೋಷಿಸಿ ಆಗಿದೆ. ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ಬೇರ್ಪಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾಗ ಚೈತನ್ಯ ಜೊತೆಗಿನ ಬ್ರೇಕಪ್ ನಂತರ ಸಮಂತಾ ಕೆರಿಯರ್ ನಲ್ಲಿ ವೇಗವಾಗಿ ಸಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳು, ವೆಬ್ ಸೀರೀಸ್ ಗಳು ಮತ್ತು ಫೋಟೋ ಶೂಟ್‌ಗಳಲ್ಲಿ ಬ್ಯುಸಿ ಆಗಿದ್ದಾರೆ ಸಮಂತಾ. ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಸಹ ಕಾಣಿಸಿಕೊಂಡರು. ಇನ್ನು ಫ್ಯಾಮಿಲಿ ಮ್ಯಾನ್2 ವೆಬ್ ಸೀರೀಸ್ ಮೂಲಕ ಬಾಲಿವುಡ್ ನಲ್ಲೂ ಗುರುತಿಸಿಕೊಂಡು, ಹಿಂದಿಯಲ್ಲಿ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಇದೀಗ ಸಮಂತಾ ಅವರು ಬಾಲಿವುಡ್ ನಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಖ್ಯಾತ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಿರೂಪಣೆ ಮಾಡುವ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಅವರನ್ನು ಅತಿಥಿಯಾಗಿ ಕರೆಯಲಾಗಿದೆ. ಸಮಂತಾ ಅವರು ಈ ಶೋನಲ್ಲಿ ಪಾಲ್ಗೊಂಡಿದ್ದಾರೆ. ಸೌತ್ ಬ್ಯೂಟಿಯನ್ನು ಬಾಲಿವುಡ್ ಶೋನಲ್ಲಿ ನೋಡುವುದು ನಿಜಕ್ಕೂ ಸಂತೋಷದ ವಿಚಾರವೇ. ಈ ಶೋನಲ್ಲಿ ಕೆಂಪು ಬಣ್ಣದ ಬಹಳ ಟ್ರೆಂಡಿ ಆದ ಔಟ್ ಫಿಟ್ ಧರಿಸಿದ್ದರು ಸಮಂತಾ. ಈ ಡ್ರೆಸ್ ನ ಬೆಲೆಯ ಬಗ್ಗೆ ಈಗ ಚರ್ಚೆ ಶುರುವಾಗಿದೆ ಸಮಂತಾ ಅವರು ಧರಿಸಿರುವ ಈ ಡ್ರೆಸ್ ನ ಬೆಳೆ ಬರೋಬ್ಬರಿ 43 ಸಾವಿರ ರೂಪಾಯಿಗಳು ಎನ್ನುವ ಮಾಹಿತಿ ಸಿಕ್ಕಿದ್ದು, ಒಂದು ಡ್ರೆಸ್ ನ ಬೆಲೆ ಇಷ್ಟೊಂದ ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.

Comments are closed.