ಇನ್ನೇನು ಎಲ್ಲಾ ತಣ್ಣಗೆ ಆಯಿತು, ಮುಗಿಯಿತು ಎನ್ನುವಷ್ಟರಲ್ಲಿ ಊಹೆಗೂ ನಿಲುಕದ ಮೆಗಾ ಟ್ವಿಸ್ಟ್, ಈ ಬಾರಿ ಸುಚೇಂದ್ರ ರವರ ಕಡೆಯಿಂದ. ಏನಾಗಿದೆ ಗೊತ್ತೇ??
ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ಮದುವೆಯ ಸುದ್ದಿ ಕೆಲವು ದಿನಗಳಿಂದ ದೊಡ್ಡದಾಗಿ ಸದ್ದು ಮಾಡುತ್ತಿದೆ. ತೆಲುಗಿನ ಹಿರಿಯನಟಿ ವಿಜಯ ನಿರ್ಮಲಾ ಅವರ ಮಗ ನಟ ನರೇಶ್, ಇನ್ನು ಪವಿತ್ರಾ ಲೋಕೇಶ್ ಅವರು ಕನ್ನಡದ ಹಿರಿಯ ಖಳನಟ ಮೈಸೂರು ಲೋಕೇಶ್ ಅವರ ಮಗಳು. ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ. ನರೇಶ್ ಅವರಿಗೆ ಇದು ಮೂರನೇ ಮದುವೆ ಎನ್ನುವುದು ಬಹಳ ಹಾಟ್ ಟಾಪಿಕ್ ಆಗಿದೆ. ಇವರಿಬ್ಬರ ಮದುವೆ ಆಗಿಯೇ ಹೋಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಹೇಳಿದರೆ, ಇನ್ನು ಕೆಲವು ಮಾಧ್ಯಮಗಳಲ್ಲಿ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಚಾರದ ಬಗ್ಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಮಾತನಾಡಿ, ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಬಗ್ಗೆ ಆರೋಆ ಮಾಡಿದ್ದರು.
ಮತ್ತೊಂದೆಡೆ ಪವಿತ್ರಾ ಲೋಕೇಶ್ ಅವರು ಮಾತನಾಡಿ, ನರೇಶ್ ಹಾಗೂ ತಾವು ಒಳ್ಳೆಯ ಸ್ನೇಹಿತರು ಹಣಕ್ಕಾಗಿ ರಮ್ಯಾ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಇನ್ನು ನರೇಶ್ ಅವರು ಸಹ ಈ ವಿಚಾರದ ಬಗ್ಗೆ ಮಾತನಾಡಿ, ರಮ್ಯಾ ರಘುಪತಿ ತಮ್ಮ ವಿರುದ್ಧ ಮಾಡಿರುವ ಆರೋಪಗಳೆಲ್ಲವು ಸುಳ್ಳು, ಅವರಿಗೆ ಅನೈತಿಕ ಸಂಬಂಧ ಇದೆ ಅದರ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. ಹಾಗೆಯೇ ಪವಿತ್ರಾ ಲೋಕೇಶ್ ಅವರ ಪತಿ ಸುಚೇಂದ್ರ ಪ್ರಸಾದ್ ಅವರು ಸಹ ಈ ವಿಚಾರದ ಬಗ್ಗೆ ಈಗ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಮೊದಲಿಗೆ ಸುಚೇಂದ್ರ ಪ್ರಸಾದ್ ಅವರು, ಪವಿತ್ರಾ ಲೋಕೇಶ್ ಅವರ ಬುದ್ಧಿ ಒಳ್ಳೆಯದಲ್ಲ, ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ, ಇದೆಲ್ಲವೂ 6 ತಿಂಗಳು ಅಷ್ಟೇ ಎಂದು ಹೇಳಿದ ಮಾತುಗಳು ವೈರಲ್ ಆಗಿದ್ದವು.
ಆದರೆ ಈಗ ಸುಚೇಂದ್ರ ಪ್ರಸಾದ್ ಅವರು ಬೇರೆಯದೇ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಒಂದೇ ರೂಮ್ ನಲ್ಲಿ ನರೇಶ್ ಹಾಗೂ ಪವಿತ್ರಾ ಅವರು ಕಾಣಿಸಿಕೊಂಡ ಬಳಿಕ ಹೇಳಿಕೆ ನೀಡಿರುವ ಸುಚೇಂದ್ರ ಪ್ರಸಾದ್ ಅವರು, ಪವಿತ್ರಾ ಲೋಕೇಶ್ ಒಳ್ಳೆಯವರು ನರೇಶ್ ಅವರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸುಚೇಂದ್ರ ಪ್ರಸಾದ್ ಅವರು ಹೇಳಿಕೆ ನೀಡಿರುವ ವಿಚಾರ ಈಗ ವೈರಲ್ ಆಗಿದೆ. ಮೈಸೂರಿನ ಘಟನೆ ಬಳಿಕ ಸಹ ಸುಚೇಂದ್ರ ಪ್ರಸಾದ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರಂತೆ. ಪವಿತ್ರಾ ಅವರು ಮಾಧ್ಯಮದಲ್ಲಿ ಸುಚೇಂದ್ರ ಪ್ರಸಾದ್ ಅವರೊಡನೆ ತಾವು ಮದುವೆ ಆಗಿಲ್ಲ ಎಂದು ಹೇಳಿದ್ದರು. ಅದಕ್ಕೂ ಪ್ರತಿಕ್ರಿಯೆ ನೀಡಿರುವ ಸುಚೇಂದ್ರ ಪ್ರಸಾದ್ ಅವರು, ಹಿಂದೂ ಸಂಪ್ರದಾಯದ ಪ್ರಕಾರ ತಮ್ಮಿಬ್ಬರ ಮದುವೆ ಆಗಿದೆ, ಹಾಗಾಗಿ ಲೀಗಲ್ ಡಾಕ್ಯುಮೆಂಟ್ ಮಾಡಿಸುವ ಅವಶ್ಯಕತೆ ಬಂದಿರಲಿಲ್ಲ ಎಂದು ಹೇಳಿದ್ದು, ಇದೀಗ ಉಲ್ಟಾ ಮಾತನಾಡಿದ್ದಾರೆ ಸುಚೇಂದ್ರ ಪ್ರಸಾದ್.
Comments are closed.