ನಾಲ್ಕು ತಿಂಗಳು ಅದೃಷ್ಟವೇ ಅದೃಷ್ಟ. ಇಂದಿನ ನಿಮ್ಮ ಕಷ್ಟವೆಲ್ಲ ಮುಗಿಯಿತು. ಯಾವ್ಯಾವ ರಾಶಿಗಳಿಗೆ ಅಸಲಿ ಅದೃಷ್ಟ ಗೊತ್ತೇ?
ಇಂದು ದೇವಶಯನಿ ಏಕಾದಶಿ, ಈ ದಿನವನ್ನು ಭಗವಾನ್ ವಿಷ್ಣುವಿಗೆ ಸಮರ್ಪಣೆ ಮಾಡಲಾಗಿದೆ. ಇಂದು, ಜುಲೈ 10ರಿಂದ ಚಾತುರ್ಮಾಸ ಶುರುವಾಗುತ್ತಿದೆ. ಈ ಚಾತುರ್ಮಾಸವು ನವೆಂಬರ್ 4ರ ವರೆಗೂ ಇರುತ್ತದೆ. ಈ ಸಮಯದಲ್ಲಿ ಭಗವಾನ್ ವಿಷ್ಣು ಯೋಗನಿದ್ರೆಯಲ್ಲಿ ಇರುತ್ತಾರೆ. ಈ ಚಾತುರ್ಮಾಸದಲ್ಲಿ ಆಧ್ಯಾತ್ಮಿಕ ಶಕ್ತಿ ಬಲಗೊಳ್ಳುವ ಸಮಯ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಇರುವ 12 ರಾಶಿಗಳಲ್ಲಿ ನಾಲ್ಕು ರಾಶಿಗಳಿಗೆ ಶುಭಫಲ ಸಿಗಲಿದೆ. ಹಾಗೂ ವಿಶೇಷ ಆಶೀರ್ವಾದ ದೊರೆಯುತ್ತದೆ. ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಈ ಸಮಯದಲ್ಲಿ ಒಳ್ಳೆಯ ಮನೆ ಅಥವಾ ವಾಹನ ಖರೀದಿ ಮಾಡುವ ಯೋಗವಿದೆ. ಕುಟುಂಬದವರಿಂದ ಬೆಂಬಲ ಪಡೆಯುತ್ತೀರಿ. ನಿಮ್ಮ ಸಂಗಾತಿಯ ಜೊತೆಗಿರುತ್ತೀರಿ, ಲಕ್ಷ್ಮೀದೇವಿಯ ವಿಶೇಷ ಕೃಪೆ ನಿಮ್ಮ ಮೇಲಿರುತ್ತದೆ. ಲಾಭ ನಿಮ್ಮದಾಗಲಿದೆ.
ಮಿಥುನ ರಾಶಿ :- ಈ ರಾಶಿಯವರಿಗೆ ಎಲ್ಲಾ ಕೆಲಸದಲ್ಲು ಯಶಸ್ಸು ಸಿಗುತ್ತದೆ. ಹಾಗೂ ಲಾಭ ಸಿಗುತ್ತದೆ. ಕುಟುಂಬದ ವಿಚಾರದಲ್ಲಿ ನೆಮ್ಮದಿಯಾಗಿರುತ್ತೀರಿ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗಲಿದೆ.
ಕನ್ಯಾ ರಾಶಿ :- ಈ ರಾಶಿಯವರಿಗೆ ಇದು ಬಹಳ ಮಂಗಳಕರ ಸಮಯ ಆಗಿದೆ. ಲಕ್ಷ್ಮೀದೇವಿಯ ಕೃಪೆ ಇರುವುದರಿಂದ, ಆಸ್ತಿ ಮತ್ತು ಲಾಭ ಸಿಗುತ್ತದೆ. ಆರ್ಥಿಕ ವಿಚಾರದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ದಾಂಪತ್ಯ ಜೀವನದಲ್ಲಿ ಸಂತೋಷವಾಗಿರುತ್ತೀರಿ. ಕುಟುಂಬದ ಜೊತೆಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ, ಇದು ಅತ್ಯುನ್ನತ ಸಮಯ ಆಗಿದೆ.
ಸಿಂಹ ರಾಶಿ :- ಈ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಕೆಲಸ ಮತ್ತು ವ್ಯಾಪಾರದಲ್ಲಿ ಏಳಿಗೆ ಕಂಡುಬರುತ್ತದೆ. ಹೊಸ ಕೆಲಸ ಶುರು ಮಾಡಲು ಇದು ಒಳ್ಳೆಯ ಸಮಯ ಆಗಿದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳಿಗೆ ಇದು ಅದ್ಭುತವಾದ ಸಮಯ ಆಗಿದೆ.
Comments are closed.