ಅಸಲಿಗೆ ಹೆಣ್ಣು ಮಕ್ಕಳು ಹೂ ಮುಡಿದುಕೊಳ್ಳುವ ಸಂಪ್ರದಾಯ ಯಾಕೆ ಬಂತು ಗೊತ್ತೇ?? ಅದರ ಹಿಂದಿರುವ ಕಾರಣಗಳೇನು ಗೊತ್ತೇ??
ಹೆಣ್ಣಿಗೆ ಹೂವಿನೊಂದಿಗೆ ಬಹಳ ಅವಿನಾಭಾವ ಸಂಬಂಧವಿದೆ. ಯಾಕೆಂದರೆ ಹೆಂಗಸರು ಕೂದಲಿಗೆ ಹೂವು ಮುಡಿದುಕೊಂಡರೆ, ಪರಿಪೂರ್ಣತೆ ಅನುಭವಿಸುತ್ತಾರೆ. ಕೈಗೆ ಬಳೆಗಳು, ಕೊರಳಲ್ಲಿ ತಾಳಿ, ಹಣೆಯ ಮೇಲೆ ಸಿಂಧೂರ ಎಷ್ಟು ಮುಖ್ಯವೋ ನಮ್ಮ ಭಾರತೀಯ ಮಹಿಳೆಯರಿಗೆ ಹೂ ಮುಡಿಯುವುದು ಸಹ ಅಷ್ಟೇ ಮುಖ್ಯ, ಹೂ ಮುಡಿಯುವುದಕ್ಕೂ ಅಷ್ಟೇ ಮೌಲ್ಯವಿದೆ. ಈ ಅಭ್ಯಾಸನಮ್ಮ ಪೂರ್ವಜರಿಂದ ಬಂದಿದೆ. ಆದರೆ ಮಲ್ಲಿಗೆ ಹೂವನ್ನು ಏಕೆ ಮುಡಿದುಕೊಳ್ಳಬೇಕು ಎಂದು ಯಾರಿಗಾದರೂ ತಿಳಿದಿದೆಯೇ?
ಸುಂದರವಾಗಿ ಕಾಣಲು ಮಲ್ಲಿಗೆ ಹೂ ಧರಿಸುತ್ತಾರೆ ಎಂದು ನೇರ ಉತ್ತರ ನೀಡುವವರೂ ಇದ್ದಾರೆ. ಆದರೆ ಎಲ್ಲರಿಗೂ ತಿಳಿದಿರುವಂತೆ ಇದು ಸೌಂದರ್ಯ ಮತ್ತು ಸಂತೋಷಕ್ಕಾಗಿ ಮಾತ್ರವಲ್ಲ. ಇದಕ್ಕೆ ಇನ್ನೊಂದು ಕಾರಣವಿದೆ. ಹೆಂಗಸರು ಮಲ್ಲಿಗೆ ಹೂವನ್ನು ಮುಡಿಯುವುದರ ಹಿಂದೆ ಒಂದು ಸಂಪ್ರದಾಯವಿದೆ. ಈ ಸಂಪ್ರದಾಯದ ಪ್ರಕಾರ ಹೂವುಗಳನ್ನು ಮುಡಿಯುವುದು ಅಭ್ಯಾಸವಾಯಿತು. ಆದರೆ ಈ ಸಂಪ್ರದಾಯವನ್ನು ತಿಳಿಯದೆ ನಾವು ಸೌಂದರ್ಯಕ್ಕಾಗಿ ಮಾತ್ರ ಅವುಗಳನ್ನು ಧರಿಸುತ್ತೇವೆ ಎಂದು ನಾವು ಭಾವಿಸುತ್ತೇವೆ.ನಮ್ಮ ಭಾರತದಲ್ಲಿ ಹೂ ಮುಡಿಯುವ ಅಭ್ಯಾಸ ಶುರು ಆಗಿದ್ದರ ಹಿಂದೆ ಒಂದು ಕಾರಣ ವೈಜ್ಞಾನಿಕ ಕಾರಣವಿದೆ…
ಹೂಗಳು ಸುಂದರವಾಗಿ ಕಾಣಲು ಮಾತ್ರವಲ್ಲ ಹೂವುಗಳು ಅದೃಷ್ಟ ಮತ್ತು ಸಂತೋಷದ ಸಂಕೇತವಾಗಿ ಕಾಣುತ್ತವೆ, ಇದಲ್ಲದೆ ಮಹಿಳೆಯರು ಹೂವನ್ನು ಮುಡಿದುಕೊಂಡರೆ, ಅವರ ತಲೆ ಮತ್ತು ಮನೆಯು ಎರಡು ಸಹ ಸಂತೋಷದಿಂದ ತುಂಬಿರುತ್ತದೆ ಮತ್ತು ಲಕ್ಷ್ಮಿ ದೇವಿಯು ಸಹ ಅವರನ್ನು ಬಿಡುವುದಿಲ್ಲ, ಲಕ್ಷ್ಮೀದೇವಿಯ ಆಶೀರ್ವಾದ ಅವರ ಮೇಲಿರುತ್ತದೆ ಎಂದು ಹೇಳಲಾಗುತ್ತದೆ. ಮುಡಿದುಕೊಳ್ಳುವ ಪ್ರತಿಯೊಂದು ಹೂವಿಗೆ ಮಹತ್ವವಿದೆ. ಅದರಲ್ಲೂ ಮಲ್ಲಿಗೆ ಹೂಗಳನ್ನು ಹೂವಿನ ರಾಣಿ ಎಂದು ಕರೆಯಲಾಗುತ್ತದೆ. ಇದನ್ನು ದೇವರ ಹೂವು ಎಂದೂ ಕರೆಯಲಾಗುತ್ತದೆ. ಮಲ್ಲಿಗೆ ಹೂವು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಅದಕ್ಕೇ ನಮ್ಮ ಹೆಂಗಸರಿಗೆ ಹೂ ಮುಡಿಯುವ ಪದ್ಧತಿ ಶುರುವಾಯಿತು. ಇದೇ ಕಾರಣಕ್ಕೆ ಗೊತ್ತಿಲ್ಲದೆ ಮಲ್ಲಿಗೆ ಹೂವನ್ನು ಅಂದ ಮಾತ್ರಕ್ಕೆ ಇಡುತ್ತಾರೆ ಎಂದುಕೊಳ್ಳುತ್ತಾರೆ..
Comments are closed.