ತನ್ನ ಉಸಿರನ್ನು ತಾನೇ ನಿಲ್ಲಿಸಿಕೊಳ್ಳುವ ಮುನ್ನ ಕೊನೆಯದಾಗಿ ಪತ್ರ ಬರೆದುಕೊಂಡಿದ್ದ ಸಿಲ್ಕ್ ಸ್ಮಿತಾ, ಪತ್ರದಲ್ಲಿ ಹೇಳಿದ್ದೇನು ಗೊತ್ತೇ?
ಖ್ಯಾತ ನಟಿ ಸಿಲ್ಕ್ ಸ್ಮಿತಾ ಒಂದು ಕಾಲದಲ್ಲಿ ತಮ್ಮ ಸೌಂದರ್ಯದಿಂದ ದಕ್ಷಿಣ ಭಾರತ ಚಿತ್ರರಂಗವನ್ನು ಬೆಚ್ಚಿಬೀಳಿಸಿದ ನಟಿ. ಸಿಲ್ಕ್ ಸ್ಮಿತಾ ಅವರಃ ತನ್ನ ವೃತ್ತಿಜೀವನವನ್ನು ಸೈಡ್ ಡ್ಯಾನ್ಸರ್ ಆಗಿ ಪ್ರಾರಂಭಿಸಿದರು. ನಂತರ ಆಕೆಯ ಸೌಂದರ್ಯ, ಪ್ರತಿಭೆಯನ್ನು ಕಂಡು ಐಟಂ ಗರ್ಲ್ ಆಗಿ ಅವಕಾಶಗಳನ್ನು ನೀಡಲಾಯಿತು. ಆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಸಿಲ್ಕ್ ಸ್ಮಿತಾ ಅವರಃ ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಮಟ್ಟಕ್ಕೆ ತಲುಪಿದರು. ಸ್ಟಾರ್ ಹೀರೋಗಳು ಕೂಡ ತಮ್ಮ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಇರಬೇಕು ಎಂದು ನಿರ್ದೇಶಕರಿಗೆ ಹೇಳುತ್ತಿದ್ದರು. ಬಹುಬೇಡಿಕೆಯಲ್ಲಿದ್ದ ಸಿಲ್ಕ್ ಸ್ಮಿತಾ ಅವರ ವೃತ್ತಿ ಕೆಲ ಕಾರಣಗಳಿಂದ ಕುಸಿಯಿತು..
ಹಿರಿಯ ನಾಯಕಿ ಸ್ಕಿಲ್ಕ್ ಸ್ಮಿತಾ ಕೆರಿಯರ್ ನಾಶಕ್ಕೆ ಇದೇ ಕಾರಣ ಎಂಬ ಆರೋಪಗಳೂ ಆಗಾಗ ಕೇಳಿ ಬರುತ್ತವೆ. ಆದರೆ, ಅವಕಾಶಗಳು ಕ್ಷೀಣಿಸುತ್ತಿದ್ದಂತೆ ಸಿಲ್ಕ್ ಸ್ಮಿತಾ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನುವ ವಿಚಾರ ಸಹ ಕೇಳಿಬಂದಿವೆ. ಕೊನೆಗೆ ಆ ಖಿನ್ನತೆಯಿಂದ ಹೊರಬರಲಾರದೆ ಸಿಲ್ಕ್ ಸ್ಮಿತಾ ಅವರು ಪ್ರಾಣವನ್ನೇ ಕಳೆದುಕೊಂಡರು. ಆದರೆ ಆ ಘಟನೆಗಿಂತ ಮೊದಲು ಸಿಲ್ಕ್ ಸ್ಮಿತಾ ಅವರು ಒಂದು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಬರೆದಿದ್ದು ಏನು ಎಂದು ತಿಳಿಸುತ್ತೇವೆ ನೋಡಿ..
“ದೇವರರೇ.. ನಾನು 7ನೇ ವರ್ಷದಿಂದ ಬಹಳಷ್ಟು ಕಷ್ಟಗಳನ್ನು ಪಡುತ್ತಲೇ ಬಂದಿದ್ದೇನೆ. ನಾನು ನಂಬಿದವರು ನನಗೆ ದ್ರೋಹ ಮಾಡಿದರು. ನನ್ನವರು ಎಂದು ಹೇಳಲು ಯಾರು ಇಲ್ಲ, ಬಾಬು ಬಿಟ್ಟರೆ ಯಾರೂ ನನ್ನ ಮೇಲೆ ಪ್ರೀತಿ ತೋರಿಸಲಿಲ್ಲ. ಬಾಬು ಹೊರತು ಪಡಿಸಿ ಎಲ್ಲರೂ ನನ್ನ ಶ್ರಮವನ್ನು ನಾನು ಪಟ್ಟ ಕಷ್ಟವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡವರೇ.. ನನ್ನ ಹಣ ತಿಂದವರೇ ನನಗೆ ನೆಮ್ಮದಿ ಇಲ್ಲದ ಹಾಗೆ ಮಾಡಿದರು. ನಾನು ಎಲ್ಲರಿಗೂ ಒಳ್ಳೆಯದನ್ನು ಮಾಡಿದ್ದೇನೆ ಆದರೆ ನನಗೆ ಕೆಟ್ಟದ್ದೇ ಸಂಭವಿಸಿದೆ. ನನ್ನ ಇಡೀ ಆಸ್ತಿಯನ್ನು ನನ್ನ ಕುಟುಂಬದವರು ಬಾಬು ಅವರ ಕುಟುಂಬಕ್ಕೆ ಹಂಚಬೇಕು. ನಾನು ಯಾರ ಮೇಲೆ ಭರವಸೆ ಇಟ್ಟಿದ್ದೆನೋ, ಅವರೇ ನನಗೆ ಮೋಸ ಮಾಡಿದರು..
ದೇವರು ಅವರನ್ನು ನೋಡಿಕೊಳ್ಳುತ್ತಾರೆ.. ಒಮ್ಮೆ ನಾನು ಆಭರಣಗಳನ್ನು ಖರೀದಿಸಿದಾಗ ಅದನ್ನು ಧರಿಸಲು ಬಿಡಲಿಲ್ಲ, ಈಗ ಇಷ್ಟವಿದ್ದರು ನಾನು ಇರುವುದಿಲ್ಲ. 5 ವರ್ಷಗಳ ಹಿಂದೆ ನನಗೆ ಜೀವ ಕೊಡುವುದಾಗಿ ಯಾರೋ ಹೇಳಿದರು., ಆದರೆ ಈಗ ನೀಡುತ್ತಿಲ್ಲ.. ಬಾಬು ಬಿಟ್ಟರೆ ನನ್ನ ಕಷ್ಟ ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲ. ಇದನ್ನು ಬರೆಯಲು ನಾನು ಎಷ್ಟು ನರಕಯಾತನೆ ಅನುಭವಿಸಿದೆ ಎಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.. ಎಂದು ಭಾವನಾತ್ಮಕ ಪತ್ರವನ್ನು ಬರೆದು ಆ ರೀತಿ ಮಾಡಿಕೊಂಡಿದ್ದಾರೆ ಸಿಲ್ಕ್ ಸ್ಮಿತಾ.
Comments are closed.