ಮೂರನೇ ಪಂದ್ಯದಲ್ಲಿ ಕೊಹ್ಲಿ ಗಳಿಸಿದ್ದು 11 ರನ್, ಆದರೆ ಆ ಬ್ಯಾಟಿಂಗ್ ಇಷ್ಟವಾಯಿತು ಎಂದ ಇಂಗ್ಲೆಂಡ್ ಗ್ರೇಮ್ ಸ್ವಾನ್: ನೆಟ್ಟಿಗರು ಸರಿಯಾದ ಹೇಳಿಕೆ ಎಂದದ್ದು ಯಾಕೆ ಗೊತ್ತೇ?
ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಪಂದ್ಯಗಳನ್ನು ಆಡುತ್ತಿದೆ. ಇದೀಗ ನಡೆದ ಮೂರನೇ ಪಂದ್ಯದಲ್ಲಿ ಸ್ವಲ್ಪ ಅಂತರದಲ್ಲಿ ಭಾರತ ತಂಡ ಸೋಲನ್ನು ಕಂಡಿತು. ಮೊದಲ ಎರಡು ಪಂದ್ಯಗಳನ್ನು ಭಾರತ ತಂಡ ಗೆದ್ದಿದ್ದು, ಮೂರನೇ ಪಂದ್ಯದಲ್ಲಿ ಸೋಲು ಕಾಣುವ ಹಾಗೆ ಆಯಿತು. ಇಂಗ್ಲೆಂಡ್ ತಂಡ, 216 ರನ್ ಗಳ ಭರ್ಜರಿ ಟಾರ್ಗೆಟ್ ನೀಡಿತ್ತು. ಇದರ ಬೆನ್ನತ್ತಿದ ಭಾರತ ತಂಡ, ಆರಂಭಿಕ ಬ್ಯಾಟ್ಸ್ಮನ್ ಆಗಿ ರಿಷಬ್ ಪಂತ್ ಹಾಗೂ ನಾಯಕ ರೋಹಿತ್ ಶರ್ಮಾ ಕ್ರೀಸ್ ಗೆ ಇಳಿದರು. ರಿಷಬ್ ಶರ್ಮ ಬೇಗ ವಿಕೆಟ್ ಒಪ್ಪಿಸಿದ ಬಳಿಕ ವಿರಾಟ್ ಕೋಹ್ಲಿ ಕಣಕ್ಕೆ ಇಳಿದರು.
ವಿರಾಟ್ ಕೋಹ್ಲಿ ಅವರು ಅದ್ಭುತವಾಗಿ ಆಟದ ಆರಂಭವೇನೋ ಮಾಡಿದರು, ಆದರೆ ಅದು ಹೆಚ್ಚಿನ ಸಮಯ ನಡೆಯಲಿಲ್ಲ. ಡೇವಿಡ್ ವಿಲ್ಲಿ ಅವರ ಬೌಲಿಂಗ್ ನಲ್ಲಿ, ಮೊದಲ ಎರಡು ಬಾಲ್ ಗಳಲ್ಲಿ, ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು ವಿರಾಟ್ ಕೋಹ್ಲಿ. ಮೂರನೇ ಬಾಲ್ ಹಾಕಿದಾಗ, ಕವರ್ಸ್ ಮೇಲೆ ಚೆಂಡು ಹೊಡೆಯುವ ಪ್ರಯತ್ನ ಮಾಡಿದರು, ಆದರೆ ಆ ಸಮಯ ಸರಿಹೋಗದೆ, ಜೇಸನ್ ರಾಯ್ ಅವರು ಸುಲಭವಾಗಿ ಕ್ಯಾಚ್ ಹಿಡಿದರು. ಆಗ ಔಟ್ ಆದ ವಿರಾಟ್ ಕೋಹ್ಲಿ ಅವರು ಬೇಸರದಿಂದ ಕ್ರೀಸ್ ಗೆ ಹೋದರು.
ವಿರಾಟ್ ಕೋಹ್ಲಿ ಅವರು ಔಟ್ ಆದರೂ ಸಹ, ಅವರ ಆಟದ ವೈಖರಿ ಅದ್ಭುತವಾಗಿತ್ತು ಎಂದು ಗ್ರೇಮ್ ಸ್ವಾನ್ ಅವರು ಮೆಚ್ಚಿಕೊಂಡಿದ್ದಾರೆ. ವಿರಾಟ್ ಅವರ ಆಟದ ಬಗ್ಗೆ ಮಾತನಾಡಿದ ಗ್ರೇಮ್ ಸ್ವಾನ್ ಅವರು, “ಇಂಗ್ಲೆಂಡ್ ಬೌಲರ್ ಗಳ ಮೇಲೆ ದಾಳಿ ನಡೆಸಿದ ವಿರಾಟ್ ಕೋಹ್ಲಿ ಅವರ ಆಟದ ವೈಖರಿ ನನಗೆ ಬಹಳ ಇಷ್ಟವಾಗಿದೆ. ವಿರಾಟ್ ಅವರು ಸತತವಾಗಿ ಬೌಂಡರಿ ಮತ್ತು ಸಿಕ್ಸರ್ ಭಾರಿಸಿದರು. ಇದು ಬೇರೆ ದಿನ ಆಗಿದ್ದರೆ, ಆ ಬಾಲ್ ಬೌಂಡರಿ ತಲುಪಿರುತ್ತಿತ್ತು..” ಎಂದು ಹೇಳಿದ್ದಾರೆ ಗ್ರೇಮ್ ಸ್ವಾನ್. ಈ ಮೂಲಕ ಕಿಂಗ್ ಕೋಹ್ಲಿ ಆಟವನ್ನು ಮೆಚ್ಚಿಕೊಂಡಿದ್ದಾರೆ..
Comments are closed.