ಬಿಗ್ ಷಾಕಿಂಗ್: ಇತ್ತೀಚಿಗೆ ಇಹಲೋಕ ತ್ಯಜಿಸಿರುವ ಮೀನಾ ರವರ ಗಂಡ ಇಡೀ ಆಸ್ತಿಯನ್ನು ಯಾರ ಹೆಸರಿಗೆ ಬರೆದಿದ್ದರೆ ಗೊತ್ತೇ? ಮೀನಾ ರವರಿಗೆ ಯಾಕಿಲ್ಲ??
ನಟಿ ಮೀನಾ ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದರು. ತೆಲುಗು ಮತ್ತು ತಮಿಳು ಇಂಡಸ್ಟ್ರಿಯಲ್ಲಿ ಟಾಪ್ ಹೀರೋಗಳ ಜೊತೆ ನಟಿಸಿ ಸೊದ್ದ ಅಭಿಮಾನಿ ಬಳಗ ಗಳಿಸಿಕೊಂಡಿದ್ದರು. ಈ ಪಯಣದಲ್ಲಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಹೀಗೆ ನಟಿಸುವ ಮೂಲಕ ಪ್ರೇಕ್ಷಕರ ಮನದಲ್ಲಿ ಛಾಪು ಮೂಡಿಸಿದರು ನಟಿ ಮೀನಾ. ಆದರೆ ಮದುವೆಯ ನಂತರ ಸಿನಿಮಾದಿಂದ ದೂರ ಉಳಿದಿದ್ದರು. ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ವಿದ್ಯಾಸಾಗರ್ ಅವರನ್ನು ಮದುವೆಯಾದರು. ಈ ದಂಪತಿಗೆ ಒಂದು ಮುದ್ದಾದ ಹೆಣ್ಣುಮಗುವಿದೆ.
ಇತ್ತೀಚೆಗಷ್ಟೇ ಮೀನಾ ಅವರ ಪತಿ ಅನಾರೋಗ್ಯದಿಂದ ಮೃತಪಟ್ಟಿರುವುದು ಎಲ್ಲರಿಗು ಗೊತ್ತಿದೆ. ಚಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಮೀನಾ ತೀವ್ರ ದುಃಖಿತರಾಗಿದ್ದಾರೆ. ಎರಡನೇ ಇನ್ನಿಂಗ್ಸ್‌ಗೆ ಕಾಲಿಟ್ಟು ಯಶಸ್ಸು ಪಡೆಯುತ್ತಿದ್ದ ಕ್ಷಣದಲ್ಲಿ ಆಕೆಗೆ ಭಾರಿ ಪೆಟ್ಟು ಬಿದ್ದಿದೆ. ಮೀನಾ ಅವರ ಪತಿಯ ಸಾವಿನ ಬಗ್ಗೆ ಹಲವು ವದಂತಿಗಳು ಹಬ್ಬಿದ್ದವು. ಇವರಿಬ್ಬರು ಜೊತೆಯಾಗಿಲ್ಲ, ಜಗಳಗಳು ನಡೆಯುತ್ತಿದ್ದವು ಎಂಬ ಮಾತುಗಳು ಸಾಕಷ್ಟು ಕೇಳಿಬಂದಿದ್ದವು. ಆದರೆ ಮೀನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವೆಲ್ಲವನ್ನೂ ಅಲ್ಲಗಳೆದಿದ್ದಾರೆ. ಇಷ್ಟೇ ಅಲ್ಲದೆ ಇನ್ನು ಕೆಲವು ಸುದ್ದಿಗಳು ಸಹ ಹೊರಬಂದಿವೆ.
ಮೀನಾ ಅವರ ಪತಿ ತಮ್ಮ ಆಸ್ತಿಯ ವಿಲ್ ನಲ್ಲಿ ಅವರಿಗೆ ಶಾಕ್ ನೀಡಿದ್ದಾರಂತೆ. ಮಗಳು ಮೇಜರ್ ಆಗಿ ಮದುವೆಯಾದರೆ ಪೂರ್ತಿ ಹಣ ಅವಳಿಗೆ ಸೇರುತ್ತದೆ ಎಂದು ವಿಲ್ ಮಾಡಿಸಿದ್ದಾರಂತೆ. ಅಲ್ಲಿಯವರೆಗೆ ಆಕೆಯನ್ನು ನೋಡಿಕೊಳ್ಳುತ್ತಿರುವ ಪಾಲಕರಿಗೆ ಅದರ ಹಕ್ಕು ಇರುತ್ತದೆ ಎಂದು ಅವರು ಬರೆದಿದ್ದಾರೆ. ಅಂದರೆ ಒಂದು ರೂಪಾಯಿ ಆಸ್ತಿಯೂ ಮೀನಾ ಅವರಿಗೆ ಸೇರುವ ಸಾಧ್ಯತೆ ಇಲ್ಲ. ಸಂಪೂರ್ಣ ಆಸ್ತಿ ಮಗುವಿಗೆ ಹೋಗುತ್ತದೆ. ಅದರ ಆಧಾರದ ಮೇಲೆ ಮೀನಾ ಮತ್ತು ಅವರ ಪತಿಗೆ ಭಿನ್ನಾಭಿಪ್ರಾಯಗಳಿರಬಹುದು ಎಂದು ಹೇಳಲಾಗುತ್ತಿದೆ. ಇದು ನಿಜವೋ ಸುಳ್ಳೋ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ.
Comments are closed.