Neer Dose Karnataka
Take a fresh look at your lifestyle.

ಅಸಲಿಗೆ ಹುಡುಗಿಯರನ್ನು ಪಟಾಯಿಸಿಕೊಳ್ಳಲು ಹುಡುಗರ ಬಳಿ ಯಾವ ಗುಣಗಳು ಇರಬೇಕು ಗೊತ್ತೇ?? ಈ 6 ಗುಣ ಇದ್ದಾರೆ ಸಾಕು

ಎಲ್ಲಾ ಹುಡುಗರು ಬಹಳ ಇಷ್ಟಪಡುವ ಒಂದು ಹುಡುಗಿ ತಮ್ಮ ಜೀವನದಲ್ಲಿ ಇರಬೇಕು ಎಂದು ಬಯಸುತ್ತಾರೆ. ಮನಸ್ಸಿಗೆ ಇಷ್ಟವಾದ ಹುಡುಗಿಯನ್ನು ಇಂಪ್ರೆಸ್ ಮಾಡಲು ಏನೇನೋ ಸಾಹಸಗಳನ್ನು ಮಾಡುತ್ತಾರೆ. ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವುದು, ಬೈಕ್ ಗಳಲ್ಲಿ ಕಾರ್ ಗಳಲ್ಲಿ ಹುಡುಗಿಯರ ಹಿಂದೆ ಸುತ್ತಾಡುವುದು ಹೀಗೆ ಸಾಕಷ್ಟು ಅವಸ್ಥೆ ಪಡುತ್ತಾರೆ. ಆದರೆ ಹುಡುಗರು ಇದನ್ನೆಲ್ಲ ಮಾಡುವ ಅಗತ್ಯವಿಲ್ಲ. ಸಿಕ್ಸ್ ಪ್ಯಾಕ್ ನೋಡಿ ಹುಡುಗಿಯರು ಹುಡುಗರ ಹಿಂದೆ ಬೀಳುವುದಿಲ್ಲ. ಬದಲಾಗಿ, ಹುಡುಗಿಯರು ಹುಡುಗರಲ್ಲಿ ಕೆಲವು ಗುಣಗಳನ್ನು ಇಷ್ಟಪಡುತ್ತಾರೆ. ಆ ಗುಣ ಇದ್ದರೆ, ಹುಡುಗರನ್ನು ಇಷ್ಟಪಡುತ್ತಾರೆ. ಹುಡುಗರಲ್ಲಿ ಇರಬೇಕಾದ ಆ ಗುಣಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ಹುಡುಗರು ರೊಮ್ಯಾಂಟಿಕ್ ಆಗಿರಬೇಕು ಎಂದು ಹುಡುಗಿಯರು ಇಷ್ಟಪಡುತ್ತಾರೆ. ರೋಮ್ಯಾಂಟಿಕ್ ಆಗಿರುವ ಹುಡುಗರು, ತಮ್ಮ ಹುಡುಗಿಯನ್ನು ಬಹಳ ಪ್ರೀತಿ ಮಾಡುತ್ತಾರೆ. ಖಾಸಗಿಯಾಗಿ ಹಾಗೂ ಹೊರಗಡೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಹುಡುಗರು ಆ ರೀತಿ ಇರಬೇಕು ಎಂದು ಹುಡುಗಿಯರು ಬಯಸುತ್ತಾರೆ.
*ಪ್ರತಿಭೆ ಇರುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ. ಯಾವುದೇ ಕೆಲಸ ಮಾಡುತ್ತಿದ್ದರು, ಅವರಲ್ಲಿ ಕ್ರಿಯಾಶೀಲತೆ ಇದ್ದರೆ, ಹುಡುಗಿಯರಿಗೆ ಬಹಳ ಇಷ್ಟವಾಗುತ್ತದೆ.

*ಆತ್ಮಸ್ಥೈರ್ಯ ಇರುವ ಹುಡುಗರನ್ನು ಹುಡುಗಿಯರು ಬೇಗ ಇಷ್ಟಪಡುತ್ತಾರೆ, ಅಂಥವರ ಜೊತೆಗೆ ಸಮಯ ಕಳೆಯಲು ಬಯಸುತ್ತಾರೆ. ಹುಡುಗರ ಆತ್ಮಸ್ಥೈರ್ಯವನ್ನು ಹುಡುಗಿಯರು ಗಮನಿಸುತ್ತಾರೆ, ಆತ್ಮಸ್ಥೈರ್ಯ ಇರುವ ಹುಡುಗರು, ನಿರ್ಧಾರಗಳನ್ನು ಸ್ವತಂತ್ರ್ಯವಾಗಿ ತೆಗೆದುಕೊಳ್ಳುತ್ತಾರೆ. ಇದನ್ನು ಹುಡುಗಿಯರು ಇಷ್ಟಪಡುತ್ತಾರೆ.
*ಸಂವೇದನಾಶೀಲತೆ ಇರುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ. ಅವರ ಬಗ್ಗೆ ತಮ್ಮ ಸ್ನೇಹಿತರ ಜೊತೆಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬುದ್ಧಿವಂತನಾದ ಹುಡುಗ ಆದರೆ, ಅವರ ನಡುವೆ ಜಗಳ ಕಡಿಮೆ ಇರುತ್ತದೆ. ಅರ್ಥಮಾಡಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇರುತ್ತದೆ.

*ಬುದ್ಧಿವಂತ ಹಾಗೂ ಹಾಸ್ಯಪ್ರಜ್ಞೆ ಇರುವ ಹುಡುಗರರೆಡೆಗೆ ಹುಡುಗಿಯರು ಬೇಗ ಆಕರ್ಷಿತರಾಗುತ್ತಾರೆ. ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಜ್ಞಾನ ಇರುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ.
*ಸೂಕ್ಷ್ಮ ಸ್ವಭಾವದ ಮತ್ತು ತಮ್ಮನ್ನು ಅರ್ಥ ಮಾಡಿಕೊಳ್ಳುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ. ಹುಡುಗಿಯರನ್ನು ಗೌರವಿಸುವ ಈ ಹುಡುಗರು, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ, ಹುಡುಗಿಯರಿಗೆ ನೋವು ನೀಡುವುದಿಲ್ಲ. ಹಾಗಾಗಿ ಈ ಸ್ವಭಾವ ಇರುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ.

Comments are closed.